Showing posts with label ಕುಂದಾಪುರ. Show all posts
Showing posts with label ಕುಂದಾಪುರ. Show all posts

ಮನಸೂರೆಗೊಳಿಸಿದ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವ




ಕುಂದಾಪುರ: ಮುಂದಿನ ಡಿಸೆಂಬರ್ನಲ್ಲಿ ಮೂಡುಬಿದಿರೆಯಲ್ಲಿ ನಡೆಯಲಿರುವ `ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್' ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನುಡಿಸಿರಿ ಘಟಕಗಳನ್ನು ದೇಶ ವಿದೇಶಗಳಲ್ಲಿ ಸಂಘಟಿಸುವ ಉದ್ದೇಶದಿಂದ ಈ ಕಲಾಯಾತ್ರೆ ನಡೆಸಲಾಗುತ್ತಿದ್ದು, ಈಗಾಗಲೇ ವಿದೇಶಗಳಲ್ಲಿ ವ್ಯಾಪಕ ಬೆಂಬಲವ್ಯಕ್ತವಾಗಿದ್ದು, 2000 ಕ್ಕೂ ಅಧಿಕ ವಿದೇಶಿ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ದುಬಾಯಲ್ಲಿ 3,500 ಮಂದಿ, ಅಬುಧಾಬಿಯಲ್ಲಿ 2,000 ಮತ್ತು ಬಹ್ರೈನ್ನಲ್ಲಿ 2,500 ಕ್ಕೂ ಅಧಿಕ ಮಂದಿ ಮೂರುವರೆ ತಾಸುಗಳಷ್ಟು ಸುದೀರ್ಘ ಸಾಂಸ್ಕೃತಿಕ ಕಲಾಪಗಳಿಗೆ ಸಾಕ್ಷಿಯಾದರು. ನಮ್ಮ ಸುತ್ತ ಮುತ್ತಲಿನ ಪರಿಸರವನ್ನು ಕಲಾತ್ಮಕವಾಗಿ ಕಟ್ಟುವುದರ ಜೊತೆಗೆ ಒಂದು ಉತ್ತಮ ಸಮಜವನ್ನು ಸೃಷ್ಟಿಸುವ ಮೂಲ ಉದ್ದೇಶದೊಂದಿಗೆ ಕಲಾ ಆಸ್ವಾದನೆಯ ಮೂಲಕ ಕನ್ನಡವನ್ನು ವಿಶ್ವದೆಲ್ಲೆಡೆ ಪಸರಿಸುವ ಪ್ರಯತ್ನವನ್ನು ಆಳ್ವಾಸ್ ನುಡಿಸಿ ಮಾಡುತ್ತಿದೆ. ಸೌಂದರ್ಯ ಪ್ರಜ್ಞೆಯ ಮನಸ್ಸು ಕಟ್ಟುವ ಕೆಲಸ ಕೇವಲ ಒಂದು ಸಂಸ್ಥೆಯಿಂದ ಮಾಡುವ ಸಾಧನೆಯಲ್ಲ. ಅದಕ್ಕಾಗಿ ಸರ್ವರೂ ಸಿದ್ಧವಾಗಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಇದರ ಅಧ್ಯಕ್ಷರಾದ ಮೋಹನ್ ಆಳ್ವಾ ಹೇಳಿದರು.
       ಅವರು ಆದಿತ್ಯವಾರ ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿರುವ ಕೆನರಾ ಕಾಲೇಜ್ ಆಫ್ ನರ್ಸಿಂಗ್ ಇಲ್ಲಿಯ ಬಯಲು ರಂಗಮಂಟಪದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ) ಮೂಡುಬಿದಿರೆ ಮತ್ತು ಆಳ್ವಾಸ್ ನುಡಿಸಿರಿ ಘಟಕ, ಕುಂದಾಪುರ ಇವರ ಆಶ್ರಯದಲ್ಲಿ ಅದ್ದೂರಿಯಾಗಿ ಜರಗಿದ ಆಳ್ವಾಸ್ ಸಾಂಸ್ಕೃತಿಕ ವೈಭವ 2013ರಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. 
     ಮುಂದಿನ ಡಿಸೆಂಬರ್ನಲ್ಲಿ ಮೂಡುಬಿದಿರೆಯಲ್ಲಿ ನಡೆಯಲಿರುವ `ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್' ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ನುಡಿಸಿರಿ ಘಟಕಗಳನ್ನು ದೇಶ ವಿದೇಶಗಳಲ್ಲಿ ಸಂಘಟಿಸುವ ಉದ್ದೇಶದಿಂದ ಈ ಕಲಾ ಯಾತ್ರೆಯನ್ನು ನಡೆಸಲಾಗುತ್ತಿದ್ದು, ಪ್ರಪಂಚದ 25 ರಾಷ್ಟ್ರಗಳನ್ನು ಸಂಘಟಿಸಲಾಗುವುದು. ಇದಕ್ಕಾಗಿ 5 ಲಕ್ಷ ಜನರು ಸದಸ್ಯತ್ವ ಪಡೆಯುವ ಸಾಧ್ಯತೆ ಇದೆ ಎಂದವರು ಹೇಳಿದರು. 
    ಸಭಾ ಕಾರ್ಯಕ್ರಮದಲ್ಲಿ ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಗೌರವಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ, ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಕೆನರಾ ಕಾಲೇಜ್ ಆಫ್ ನರ್ಸಿಂಗ್ ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಹಾಗೂ ವಿನಯಕುಮಾರ್ ಶೆಟ್ಟಿ, ಉದ್ಯಮಿಗಳಾದ ಕೆ. ಆರ್ ನಾಯ್ಕ್, ಗಣೇಶ್ ಶೆಟ್ಟಿ ಮೊಳಹಳ್ಳಿ, ಆನಂದ್ ಸಿ. ಕುಂದರ್, ರಫೀಕ್ ಕೋಟೇಶ್ವರ, ಭಾಸ್ಕರ ನಾಯ್ಕ್, ಶಿಕ್ಷಕ ಕೆ.ಎಸ್. ಮಂಜುನಾಥ್, ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಉಪಾಧ್ಯಕ್ಷ ಗಾಯಕ ಗಣೇಶ್ ಗಂಗೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.
    ಶಿಕ್ಷಕ ಚಂದ್ರಶೇಖರ ಬೀಜಾಡಿ ಸ್ವಾಗತಿಸಿದರು. ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕದ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ವಂದಿಸಿದರು. ಕೋಶಾಧಿಕಾರಿ ವಿಶ್ವನಾಥ ಕರಬ ಕಾರ್ಯಕ್ರಮ ನಿರ್ವಹಿಸಿದರು.
        ಕಾರ್ಯಕ್ರಮದ ನಂತರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ತರಬೇತಿಗೊಂಡ 160 ವಿದ್ಯಾರ್ಥಿ ಕಲಾವಿದರಿಂದ ಭರತ ನಾಟ್ಯ, ಕಥಕ್, ಮೋಹಿನಿ ಅಟ್ಟಂ, ಆಂಧ್ರ ಪ್ರದೇಶದ ಬಂಜಾರ್, ಬಂಗಾಲದ ಪುರೂಲಿಯಾ ಭಾವೋ (ಭಾರೀ ಗಾತ್ರದ ಸಂಹಗಳ ನೃತ್ಯ) ಕುಚಿಪುಡಿ, ಮಹರಾಷ್ಟ್ರದ ಲಾವಣಿ ನೃತ್ಯ, ಕರ್ನಾಟಕದ ಕಂಸಾಳೆ, ಭಾಸ ಕವಿಯ ಏಕಾಂಕ ನಾಟಕ ` ಮಧ್ಯಮ ವ್ಯಾಯೋಗಃ'  ಸ್ಟಿಕ್ ಡ್ಯಾನ್ಸ್,  ಕೇರಳದ ಒಪ್ಪತ್ತಾಮ್, ಬಡಗಿನ ಯಕ್ಷಗಾನ ಪ್ರಯೋಗ ` ದಶಾವತಾರ' ಕೇರಳದ ಒಪ್ಪಳಂ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ. ಮೋಹನ್ ಆಳ್ವ ಅವರ ನೇತೃತ್ವದಲ್ಲಿ ನಡೆಯಿತು. 














ಪೋಟೋ: ಸುಧಾಕರ್ ವಕ್ವಾಡಿ
 ಕುಂದಾಪ್ರ ಡಾಟ್ ಕಾಂ - editor@kundapra.com
Read more...

24ರಂದು ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವ

ಕುಂದಾಪುರ: ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಆಳ್ವಾಸ್ ನುಡಿಸಿರಿ ಕುಂದಾಪುರ ಘಟಕ ಆಶ್ರಯದಲ್ಲಿ ಫೆ.24ರಂದು ಸಂಜೆ 6 ಗಂಟೆಗೆ ಕುಂದಾಪುರ ಸಮೀಪದ ಕೋಟೇಶ್ವರ ಕೆನರಾ ಕಾಲೇಜ್ ಆಫ್ ನರ್ಸಿಂಗ್ ವಿದ್ಯಾಸಂಸ್ಥೆಯ ಬಯಲು ರಂಗಮಂದಿರದಲ್ಲಿ ಆಳ್ವಾಸ್ ನುಡಿಸಿರಿ ಸಾಂಸ್ಕೃತಿಕ ವೈಭವ ಜರುಗಲಿದೆ. 
      ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವಿದ್ಯಾರ್ಥಿ ಕಲಾವಿದರಿಂದ ಕಥಕ್, ಭರತನಾಟ್ಯ, ಮೋಹಿನಿಯಾಟ್ಟಂ, ಕೂಚುಪುಡಿ, ಆಂಧ್ರದ ಬಂಜಾರ ನೃತ್ಯ, ಮಹಾರಾಷ್ಟ್ರದ ಲಾವಣಿ ನೃತ್ಯ, ಸಿಂಹದ ಬೇಟೆ ನೃತ್ಯ, ಭಾಸಕವಿ ಏಕಾಂಕ ನಾಟಕ ದೂತವಾಕ್ಯ, ಮಣಿಪುರದ ದೋಲ್ ಚಲೊ, ಸ್ಟಿಕ್‌ಡ್ಯಾನ್ಸ್, ಬಡಗು ಯಕ್ಷಪ್ರಯೋಗ ದಶಾವತಾರ, ಕೇರಳದ ಒಪ್ಪತ್ತಾಂ ಹೀಗೆ ಅನೇಕ ಬಗೆಯ ಮನೋರಂಜನೆ ಕಾರ್ಯಕ್ರಮ ನಡೆಯಲಿದೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read more...

ಕನ್ನಡತನ ಉಳಿಸುವ ಕಾಯಕದಲ್ಲಿ ಸರಕಾರ ನೆರವಾಗಬೇಕಿದೆ : ಡಾ. ಆಳ್ವ

ಕುಂದಾಪುರ: ಕಳೆದ 19 ವರ್ಷದಿಂದ ಆಳ್ವಾಸ್ ನುಡಿಸಿರಿ ಮೂಲಕ ಕನ್ನಡತನ ಉಳಿಸುವ ಕಾರ್ಯ ಮಾಡುತ್ತಿದ್ದರೂ ಸರಕಾರಿ ಪ್ರೋತ್ಸಾಹ ಮಾತ್ರ ಕ್ಷೀಣವಾಗಿದೆ. ಸರಕಾರ ಒಂದು ರೂ. ಅನುದಾನ ನೀಡಿಲ್ಲ ಎಂದು ಮೂಡುಬಿದಿರೆ ಆಳ್ವಾಸ್ ಫೌಂಡೇಶನ್‌ನ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಬೇಸರ ವ್ಯಕ್ತಪಡಿಸಿದ್ದಾರೆ.
         ಇಲ್ಲಿನ ಹೋಟೆಲ್ ಪಾರಿಜಾತದಲ್ಲಿ ಜರುಗಿದ ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್ 2013 ಸಮಾಲೋಚನೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ದಿನಕ್ಕೆ 1 ಲಕ್ಷದಂತೆ ಒಟ್ಟು ಈ ಕಾರ್ಯಕ್ರಮದ ಅವಧಿಯಲ್ಲಿ 10 ಲಕ್ಷ ಜನ ಸೇರುವ ನೀರಿಕ್ಷೆ ಹೊಂದಿದ್ದೇವೆ. 600 ಪುಸ್ತಕಗಳ ಪ್ರದರ್ಶನಗಳನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ವಿಶೇಷ ವಿರಾಸತ್‌ನಲ್ಲಿ ವಸ್ತು ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಫಲಪುಷ್ಪ ಪ್ರದರ್ಶನಗಳು ನಡೆಯುತ್ತದೆ. ಡಿ.19ರಂದು ಮೂರು ಸಾವಿರ ಜಾನಪದ ಕಲಾವಿದರ ನೇತೃತ್ವದಲ್ಲಿ ಆಕರ್ಷಕ ಮೆರವಣಿಗೆಯೊಂದಿಗೆ ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್ 2013 ಉದ್ಘಾಟನೆಗೊಳ್ಳಲಿದೆ. ಈ ಹಿಂದೆ ಭಾಗವಹಿಸಿದ 9 ಅಧ್ಯಕ್ಷರ ಸಮ್ಮುಖದಲ್ಲಿ 100ಕ್ಕೂ ಹೆಚ್ಚು ಹೊಸ ಸಂದೇಶವನ್ನು ಹೊರ ತರುವ ಈ ಪ್ರಯತ್ನಕ್ಕೆ ನಾಗರಿಕರ ಸಹಕಾರ ಅಗತ್ಯ ಎಂದು ನುಡಿದರು. 
     ಆಳ್ವಾಸ್ ವಿಶ್ವ ನುಡಿಸಿರಿ ಕಾರ್ಯಕ್ಕೆ ಅಂದಾಜು 20 ಕೋಟಿ ರೂ.ಗೂ ಮಿಕ್ಕಿ ಅನುದಾನ ಬೇಕಾಗುತ್ತದೆ. 19 ವರ್ಷದಿಂದ ನಡೆಯುತ್ತಿರುವ ನುಡಿಸಿರಿ ನಿರಂತರ ನಡೆಯಬೇಕು ಎಂಬುದು ನಮ್ಮ ಆಶಯ. ಆದರೆ ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ ಈ ಅನುಪಮ ಕಾರ್ಯಕ್ಕೆ ಸರಕಾರ ಬೇಡವಾಗಿರುವುದು ವೇದನೆಯ ಸಂಗತಿ ಎಂದು ಅಭಿಪ್ರಾಯಪಟ್ಟರು. 
     ಡಿಸೆಂಬರ್‌ನಲ್ಲಿ ನಡೆಯುವ ಆಳ್ವಾಸ್ ವಿಶ್ವ ನುಡಿಸಿರಿ ಕಾರ್ಯಕ್ರಮಕ್ಕೆ ಮೂರು ಸಮಾನಾಂತರ ವೇದಿಕೆ ರಚಿಸಲಾಗಿದ್ದು, ಈ ವೇದಿಕೆಯಲ್ಲಿ ಡಾ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಕೃಷಿ ಮೇಳ ಆಯೋಜಿಸ ಲಾಗಿದ್ದು, ಅದರಲ್ಲಿ ಸುಮಾರು ದಿನಕ್ಕೆ 40 ಸಾವಿರ ರೈತರ ಚಿಂತನ- ಮಂಥನ ಕಾರ್ಯಕ್ರಮ ಜರುಗಲಿದೆ. 
    ಕಲೆಯ ಉಳಿವಿಗಾಗಿ ಸುಮಾರು 4500 ಕಲೆಗಳ ಜಾನಪದ ಮತ್ತು ವಿಶೇಷವಾಗಿ ಯಕ್ಷಗಾನ, ನಾಟಕ, ವಚನ ಸಾಹಿತ್ಯ ಸೇರಿದಂತೆ ಕಲೆಯ ಬೆಳವಣಿಗೆ ಮತ್ತು ಉಳಿಸುವಿಕೆಗಾಗಿ ಚಿಂತನ ಮಂಥನ ಕಾರ್ಯಕ್ರಮ ಗಳು ಇದೇ ವೇದಿಕೆಯಲ್ಲಿ ನಡೆಯಲಿದೆ. ಈಗಾಗಲೇ 60 ಕಡೆಗಳಲ್ಲಿ ಆಳ್ವಾಸ್ ನುಡಿಸಿರಿ ಕಾರ್ಯಕ್ರಮ ನೀಡಿದ್ದು ಆಭೂತಪೂರ್ವ ಹೆಗ್ಗಳಿಕೆ ಪಾತ್ರವಾಗಿದೆ. ದಾವಣಗೆರೆ, ಅರಸೀಕೆರೆ, ಹಾವೇರಿ, ಬೇಳೂರು-ಹಳೇಬಿಡು, ರಾಣೆಬೆನ್ನೂರು ಸೇರಿದಂತೆ ರಾಜ್ಯದ ಅನೇಕ ಮೂಲೆಮೂಲೆಗಳಲ್ಲಿ ಈ ಕಾರ್ಯಕ್ರಮ ನೀಡಿದ್ದೇವೆ. ಈ ಕಾರ್ಯಕ್ರಮದ ಅನುದಾನಕ್ಕಾಗಿ ಈ ಬಾರಿ ನೇರವಾಗಿ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದೇವೆ. ಈಗಲಾದರೂ ಸರಕಾರ ಎಚ್ಚೆತ್ತುಕೊಳ್ಳಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ತಿಳಿಸಿದರು. 
     ಆಳ್ವಾಸ್ ನುಡಿಸಿರಿ ತಾಲೂಕು ಘಟಕದ ಗೌರವಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಉಪಸ್ಥಿತರಿದ್ದರು. ಆಕಾಶವಾಣಿ ಕಲಾವಿದ ಗಣೇಶ ಗಂಗೊಳ್ಳಿ ಪ್ರಾರ್ಥಿಸಿದರು. ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ ಸ್ವಾಗತಿಸಿದರು.
Read more...