Showing posts with label ಕುಂದಾಪ್ರ ಡಾಟ್ ಕಾಂ. Show all posts
Showing posts with label ಕುಂದಾಪ್ರ ಡಾಟ್ ಕಾಂ. Show all posts

ಆಕರ್ಷಣೆಯ ಕೇಂದ್ರಬಿಂದು -ಚೀಫ್ ಸೆಕ್ಯುರಿಟಿ ರಾಧಕ್ರಷ್ಣ ನಾಯಕ


ಮೂಡುಬಿದಿರೆ : ಉದ್ದಗಿನ ದೇಹ, ದಪ್ಪನೆಯ ಮೈಕಟ್ಟು ಮುಖಕ್ಕೆ ಅಚ್ಚುಕಟಿನ ಗಾಢ ಮೇಕಪ್, ಸೆಕ್ಯುರಿಟಿ ಸಮವಸ್ರದಲ್ಲಿ ಟಿಪ್ ಟಾಪ್ , ಸಡನ್ನಾಗಿ ಏದುರಾದ ಅಳುವ ಮಕ್ಕಳು ಅವರೆದುರು ಗಪ್ಚಿಪ್ ಇದು ಆಳ್ವಾಸ್ ಸಂಸ್ಥೆಯ ಚೀಫ್ ಸೆಕ್ಯುರಿಟಿ ರಾಧಕ್ರಷ್ಣ ನಾಯಕ ಅವರ ಬಾಹ್ಯ ವ್ಯಕ್ತಿತ್ವ.
      ಆಳ್ವಾಸ್ ಕ್ಯಾಂಪಸ್ನಲ್ಲಿ ಆರ್.ಕೆ ನಾಯಕ್ ತಿರುಗಾಡುತ್ತಿದ್ದರೆ ಅದೆ ಕ್ಯಾಂಪಸ್ನ ಕಳೆ. ನೋಡೋಕೆ ಭಯಂಕರವಾಗಿ ಕಾಣುವ ಇವರದು ಮುಗ್ಧ ಆಕರ್ಷಕ  ವ್ಯಕ್ತಿತ್ವ. ಎಷ್ಟು ಹೊತ್ತಿಗೆ ನೋಡಿದ್ರು ಮಕ್ಕಳೊಂದಿಗೆ, ಅವರಿವರೊಂದಿಗೆ  ಪೋಟೊಗೆ ಫೋಸ್ ಕೊಡುತ್ತಾ ಕಾಣಸಿಗುತ್ತಾರೆ. ಫೊಟೊ ಬಗ್ಗೆ ಹೇಳುತ್ತಾ ಈ ವೃತ್ತಿಜೀವನದ 15 ವರ್ಷದಲ್ಲಿ ಇಲ್ಲಿವರೆಗೆ ಇಪ್ಪತ್ತೆರೆಡುಸಾವಿರ  ಫೋಟೊಗಳನ್ನು ತೆಗೆಸಿಕೋಂಡಿದ್ದೆನೆ ಎನ್ನುತ್ತಾರೆ.ಕೇವಲ ನಾಲ್ಕನೆ ತರಗತಿ ಓದಿದರೂ ಮಾತೃಭಾಷೆ ತುಳು ಸೇರಿದಂತೆ ಕನ್ನಡ,ಹಿಂದಿ, ತಮಿಳು,ತೆಲುಗು,ಕೊಂಕಣಿ ಹಾಗು ಬ್ಯಾರಿ ಭಾಷೆಯಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ.
    ಕಾರ್ಕಳದ ಬಂಗ್ಲಗುಡ್ಡೆಯವರಾದ ಆರ್.ಕೆ ನಾಯಕ್ ಆಳ್ವಾಸ್ ಸಂಸ್ಥೆಯ ಪ್ರೀತಿಯ ವ್ಯಕ್ತಿ. ಹೊರನೋಟಕ್ಕೆ ವಿಭಿನ್ನ, ವಿಚಿತ್ರವಾಗಿ ಕಾಣುವ ಇವರನ್ನು ಒಮ್ಮೆ ಸಡನ್ನಾಗಿ ನೋಡಿದ ಜನರು ಬೆಚ್ಚಿ ಬೀಳುವುದು ಸಹಜ..ಈ ವ್ಯಕ್ತಿ ಜೊತೆ ಮಾತಿಗಿಳಿದರೆ ಸಾಕು ತಾನು ಕಂಡ ಕಷ್ಟ ಸುಖಗಳನ್ನು ಮಾತಿಗರ ಮುಂದೆ ಬೆಚ್ಚಿಡುತ್ತಾರೆ. ಈ ಹಿಂದೆ ಹೈದರಬಾದ್ನ ತಾಜ್ಮಹಲ್ ಹೋಟೆಲ್ನಲ್ಲಿ ಸೆಕ್ಯುರಿಟಿ ಆಗಿ ಕೆಲಸ ಮಾಡುತ್ತಿದ್ದ ವೇಳೆ ಇವರ ಬಾಹ್ಯ ವ್ಯಕ್ತಿತ್ವ ನೋಡಿ ಮರುಳಾದ ತೆಲುಗು ಸಿನಿಮಾದವರು ಇವರನ್ನು ತಮ್ಮ ಸಿನಿಮಾಕ್ಕೆ ಆಹ್ವಾನಿಸಿದರು. ನಂತರ ಅವರ ಒತ್ತಾಯದ ಮೇರೆಗೆ ಬಾವ್ ಬಾವ್ ಪನ್ನೀರ್, ಇಂಟಿಂಟಿ ಭಗವತಮ್,ಪ್ರಚಂಡ ಭಗವತಂ ಸೇರಿದಂತೆ ಒಟ್ಟು 8 ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.ನಂತರ ನಟನೆಯ ಕಷ್ಟ ಇಷ್ಟ ಆಗದೆ ವಾಪಾಸು ದ.ಕ ಕ್ಕೆ ಬಂದು ಆಳ್ವಾಸ್ ಸಂಸ್ಥೆಯಲ್ಲಿ ಚೀಫ್ ಸೆಕ್ಯುರಿಟಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
         ಮುಖಕ್ಕೆ ಮೆತ್ತುವ ಮೇಕಪ್ಪ್, ಕೈಗೆ ಹಾಕುವ ಕೈಚೀಲ, ದಪ್ಪನೆ ಚೈನ್ ಇವನ್ನೆಲ್ಲ ಧರಿಸಿ ನೋಡೋಕೆ ಭಿನ್ನವಾಗಿ ಕಾಣುವ ಇವರಲ್ಲಿ್ಡೆ ಡ್ರೆಸ್ ಮಾಡಲು ಎಷ್ಟು ಸಮಯ ತೆಗೆದುಕೊಳ್ತೀರಾ ಅಂದ್ರೆ ಒಂದು ಗಂಟೆ ಅಂತ ಕೆಂಪನೆ ತುಟಿಯಲ್ಲಿ ಮಾತುದುರಿಸುವ ಇವರು ಅವರಿವರಿವರೊಂದಿಗೆ ನಗುನಗುತ್ತಾ ಮಾತನಾಡುತ್ತಾ  ಜೀವನ ಕಳೆಯುವುದೇ ಬಿಂದಾಸ್ ಲೈಫ್ ಎಂದು ನುಡಿಯುತ್ತಾರೆ.

Read more...

ಇಂದು ನುಡಿಸಿರಿಗೆ ತೆರೆ


 ಮೂಡುಬಿದಿರೆ : ಇಂದು ಅಪರಾಹ್ನ 3.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ರೈ|ರೆ| ಡಾ| ಅಲೋಶಿಯಸ್‌ ಪಾವ್‌É ಡಿ'ಸೋಜಾ, ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ| ಸಿ.ಪಿ. ಕೃಷ್ಣ ಕುಮಾರ್‌, ಗಿರೀಶ್‌ ಕಾಸರವಳ್ಳಿ, ಡಾ| ಸಿದ್ಧಲಿಂಗಯ್ಯ, ವೈಜಯಂತಿ ಕಾಶಿ, ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ, ಡಾ| ವಿಷ್ಣು ನಾಯ್ಕ ಅಂಕೋಲಾ, ಸುಭದ್ರಮ್ಮ ಮನ್ಸೂರು ಅವರಿಗೆ ಹಾಗೂ 'ಲೋಕ ಶಿಕ್ಷಣ ಟ್ರಸ್ಟ್‌ ಬೆಂಗಳೂರು - ಹುಬ್ಬಳ್ಳಿ' ಸಂಸ್ಥೆಗೆ ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು ಸಮಾರೋಪ ಭಾಷಣ ಮಾಡುವರು.

ಸಾಂಸ್ಕೃತಿಕ : ಹಗಲಿನ ಬಿಡುವೇಳೆಯಲ್ಲಿ ಆಳ್ವಾಸ್‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾಪಗಳಿರುತ್ತವೆ.

ಉಡುಪಿ ಕೊಡವೂರು ನೃತ್ಯ ನಿಕೇತನದವರಿಂದ ನಂದಗೋಕುಲ -ನೃತ್ಯ ರೂಪಕ, ನಾಟ್ಯ ನಿಲಯಂ ಮಂಜೇಶ್ವರ ಅವರಿಂದ ನಾಟ್ಯ ಸಮ್ಮೊàಹನಂ, 2.ಬಿ.ಆರ್‌. ಛಾಯಾ ಬಳಗದವರಿಂದ ಸುಗಮ ಸಂಗೀತ, ಆಳ್ವಾಸ್‌ ರಂಗ ಅಧ್ಯಯನ ಕೇಂದ್ರದವರಿಂದ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಭಾಸನ ದೂತ ವಾಕ್ಯ ಏಕಾಂಕ ನಾಟಕ, ಮಂಡ್ಯ ರಮೇಶ ನಿರ್ದೇಶನದಲ್ಲಿ ಚೋರ ಚರಣದಾಸ ನಾಟಕ, 3.ಕಲಾನಿಕೇತನ ಬೆಳ್ತಂಗಡಿ ಇವರಿಂದ ಭರತನಾಟ್ಯ, ಪಂಚಭೂತ ನೃತ್ಯ ರೂಪಕ, ಕಾರ್ಕಳದ ಶ್ರೀ ನೃತ್ಯಾಲಯದಿಂದ ಭರತನೃತ್ಯ, 4.ಸಂಜನಾ ವಿ. ಮರಾಠೆ- ಅರ್ಚನಾ ವಿ. ಮರಾಠೆ ಸಹೋದರಿಯರಿಂದ ಶಾಸ್ತ್ರೀಯ ಸಂಗೀತ, ಗದಗ್‌ನ ಸಮರ್ಥ ಡಿ. ದೇಸಾಯಿ ಅವರಿಂದ ಹಿಂದೂಸ್ತಾನಿ ಗಿಟಾರ್‌ ವಾದನ, ಬೆಂಗಳೂರು ಸಂಗೀತ ಪನೀಶ್‌ ಅವರಿಂದ ಕೂಚಿಪುಡಿ, 5. ಶಾಂತೇರಿ ಕಾಮತ್‌ ತೀರ್ಥಹಳ್ಳಿ ಅವರಿಂದ ವಚನ ಗಾಯನ, ಉಪ್ಪಿನ ಕುದ್ರು ಶ್ರೀ ಗಣೇಶ ಯಕ್ಷಗಾನ ಬೊಂಬೆಯಾಟ ಮಂಡಳಿಯಿಂದ ಗೊಂಬೆಯಾಟ ಕಾರ್ಯಕ್ರಮ.

Read more...

ನುಡಿಸಿರಿಯ ಸಾಸ್ಕೃತಿಕ ಸಂಜೆ ಸಂಗೀತ-ನೃತ್ಯ- ನಾಟಕಗಳ ಸಮಾಗಮ

ಮೂಡುಬಿದಿರೆ: ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಮೈಸೂರಿನ ವಿದುಷಿ ಕೃಪಾ ಪಡ್ಕೆ ಮತ್ತು ತಂಡದವರಿಂದ ವಂದೇ ಮಾತರಂ ನೃತ್ಯ ರೂಪಕ ಜರುಗಿತು. ಬಳಿಕ ಹುಬ್ಬಳ್ಳಿಯ ಮಯೂರ ನೃತ್ಯ ತಂಡದವರಿಂದ ವಿದೂಷಿ ಹೇಮಾ ಡಿ. ವಾಘವೋಡೋ ನಿರ್ದೇಶನಲ್ಲಿ ಭರತನಾಟ್ಯ ಕಾರ್ಯಕ್ರಮ ಜರುಗಿತು.
   ಕೆ. ವಿ ಸುಬ್ಬಣ್ಣ ರಂಗಮಂದಿರದಲ್ಲಿ ಕಲವಿದರುಗಳಾದ ಶಂಕರ್ ಶಾನುಭೋಗ್, ರಮೇಶ್ಚಂದ್ರ, ಕೆ. ಎಸ್ ಸುರೇಖಾ, ಮೃತ್ಯುಂಜಯ, ಸುಪ್ರಿಯ ದೊಡ್ಡವರ, ಸ್ವರ್ಶ, ಸಂಗೀತ, ಬಾಲಚಂದ್ರ, ಸುಪಿಯ ರಘುನಂದನ್ ಇವರಿಂದ ಸುಗಮ ಸಂಗೀತ ನಡೆಯಿತು. ಬಳಿಕ ಪ್ರಕಾಶ ಶೇಟ್ಟಿ ನಿರ್ದೇಶನದ ಅಭಿಜ್ಞಾನ ಶಾಕುಂತಲ ನಾಟಕ ಪ್ರದರ್ಶನಗೊಂಡಿತು.
ಕು. ಶಿ. ಹರಿದಾಸ್ ಭಟ್ ವೇದಿಕೆಯಲ್ಲಿ ನಳ ಕಾರ್ಕೋಟಕ ಯಕ್ಷನೃತ್ಯ ನಡೆಯಿತು. 
ಕಾರ್ಕಳ ಬಿ. ಗಣಪತಿ ಪೈ ವೇದಿಕೆಯಲ್ಲಿ ಕರ್ನಾ ಟಕ ಶಾಸ್ತ್ರೀಯ ಸಂಗೀತ, ಭರಟನಾಟ್ಯ, ಭರತಾಂಜಲಿ ಕಾರ್ಯಕ್ರಮಗಳು ಜರುಗಿದವು.

ಡಾ. ಕೋಯಿರಾ ಎನ್. ಬಾಳೆಪುಣಿ ವೇದಿಕೆಯಲ್ಲಿ ಕು. ನಯನ ಗೌರಿ ಸೇರಾಜೆ ಇವರಿಂದ ಶ್ರೀ ಸುಬ್ರಮಣ್ಯ ಕ್ಷೇತ್ರ ಮಹಾತ್ಮೆ ಹರಿಕಥೆ, ಕಾಸರಗೋಡಿನ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಗೋಂಬೆಯಾಟ ಸಂಘದವರಿಂದ ನರಕಸುರ ವಧೆ ಗೊಂಬೆಂಯಾಟ ಜರುಗಿತು



Read more...

ನುಡಿಸಿರಿಯಲ್ಲಿ ಪಾಲ್ಗೋಳ್ಳೊಣ ಬನ್ನಿ ಸಾಹಿತ್ಯ - ಕಲಾಭಿಮಾನಿಗಳೇ...


        ಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ"  ನವೆಂಬರ್ 16,17 ಮತ್ತು 18 ರಂದು ಕವಿ, ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹಮದ್ ಸರ್ವಾಧ್ಯಕ್ಷತೆಯಲ್ಲಿ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ. ಕನ್ನಡ ಮನಸ್ಸು : ಜನಪರ ಚಳುವಳಿಗಳು ” ಎಂಬ ಪ್ರಮುಖ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಈ ಬಾರಿಯ ಆಳ್ವಾಸ್ ನುಡಿಸಿರಿ ಮೂಡಿಬರಲಿದೆ.
    ಉದ್ಘಾಟನೆಯನ್ನು ನಾಡಿನ ಹಿರಿಯ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ನಡೆಸಿಕೊಡಲಿದ್ದಾರೆ.  ಮೂರು ವಿಶೇಷ ಉಪನ್ಯಾಸಗಳು, ನಾಲ್ಕು ಕಥಾ ಸಮಯ, 9 ಕವಿಸಮಯ ಕವಿನಮನ, 3 ಸಂಸ್ಮರಣಾ ಗೋಷ್ಠಿಗಳು, ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ, ವಿಶೇಷ ಸನ್ಮಾನ ಕಾರ್ಯಕ್ರಮ, ಸಮಾನಾಂತರ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 16ರಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಉದ್ಘಾಟನೆ ನಡೆಯಲಿದೆ.

 ಸಾಂಸ್ಕೃತಿಕ ವೈಭವ
       ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹ ನೃತ್ಯ, ದೇವ ವೃದ್ಧರು ಎಂಬ ಕಿರು ನಾಟಕ, ಭರತ ನಾಟ್ಯ – ನವಗ್ರಹ, ಮೋಹಿನಿ ಆಟ್ಟಂ, ಕಥಕ್ ನೃತ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ಮಹಿಳಾ ಕಂಸಾಳೆ, ಮಿಮಿಕ್ರಿ, ಮಣಿಪುರಿ ಶಾಸ್ತ್ರೀಯ ನೃತ್ಯ ‘ರಾಸಲೀಲ’ ಮತ್ತು ಜನಪದ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಣಿಪುರಿ ಡೋಲ್ ಚಲಮ್, ಮಣಿಪುರಿ ಮಾರ್ಷಲ್ ಆರ್ಟ್ಸ್ , ಮಹಾರಾಷ್ಟ್ರದ ಲಾವಣಿ ನೃತ್ಯ, ಬಡಗುತಿಟ್ಟು ಯಕ್ಷಗಾನದ – ‘ಶೃಂಗಾರ ವೈಭವ’, ತೆಂಕುತಿಟ್ಟು ಯಕ್ಷಗಾನದ – ‘ ಹನುಮ ಒಡ್ಡೋಲಗ ‘, ಶ್ರೀಲಂಕಾದ ನವಿಲು ನೃತ್ಯ, ಜನಪದ ವಾದ್ಯ ಝೇಂಕಾರ, ಮಾತನಾಡುವ ಗೊಂಬೆ ಮತ್ತು ಶ್ಯಾಡೋ ಪ್ಲೇ ಪ್ರದರ್ಶನಗೊಳ್ಳಲಿದೆ. ಸುಮಾರು ಮೂರೂವರೆ ಗಂಟೆಗಳ ಕಾಲ ನಡೆಯಲಿರುವ ಈ ಸಾಂಸ್ಕೃತಿಕ ವೈಭವ ನೋಡುಗರನ್ನು ನಿಬ್ಬೆರಗಾಗಿಸುವುದರಲ್ಲಿ ಸಂದೇಹವಿಲ್ಲ. ಈ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಶತಾಯುಷಿಗೆ ವಿಶೇಷ ಗೌರವ: 
      ಕನ್ನಡ ನಾಡು ನುಡಿಗೆ ವಿಶೇಷ ಸೇವೆ ಸಲ್ಲಿಸಿರುವ, ವಿದ್ವಾಂಸ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯಾಧ್ಯಯನದಲ್ಲಿ ಸಾಧನೆ ಮೆರೆದ ಶತಾಯುಷಿ ಪ್ರೊ.ಜಿ.ವೆಂಕಟ ಸುಬ್ಬಯ್ಯ ಅವರನ್ನು ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ರೀತಿಯಲ್ಲಿ ಗೌರವಿಸಿ ಸನ್ಮಾನಿಸಲಾಗುವುದು. 2007ರಲ್ಲಿ ನಡೆದ ನಾಲ್ಕನೇ ವರುಷದ ಆಳ್ವಾಸ್ ನುಡಿಸಿರಿಯ ಸವರ್ಾಧ್ಯಕ್ಷತೆಯನ್ನು ವೆಂಕಟ ಸುಬ್ಬಯ್ಯರವರು ವಹಿಸಿದ್ದರು

ದಶಕದ ಸಂಭ್ರಮ:
        ಮುಂದಿನ ವರುಷ ಆಳ್ವಾಸ್ ನುಡಿಸಿರಿಗೆ ದಶಕದ ಸಂಭ್ರಮ. ಈ ಹಿನ್ನಲೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಅತ್ಯಂತ ಮಹತ್ವಪೂರ್ಣವಾಗಿದೆ. ದಶಕದ ಸಂಭ್ರಮದ ನುಡಿಸಿರಿಯನ್ನು ವಿಶ್ವಮಟ್ಟದಲ್ಲಿ ನಡೆಸಲುದ್ದೇಶಿಸಲಾಗಿದ್ದು, ಅದರ ಪೂರ್ವಭಾವಿಯಾಗಿ ಈ ಬಾರಿಯ ನುಡಿಸಿರಿಯಿಂದಲೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ. ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ  ತುಮುಕೂರು, ಮೈಸೂರು, ಧಾರಾವಾಡ,ಚಿಕ್ಕಮಗಳೂರು, ಮಂಡ್ಯ,ತೀರ್ಥಹಳ್ಳಿ,ಮಂಗಳೂರು, ಕುಂದಾಪುರ, ಪುತ್ತೂರು,ಬಂಟ್ವಾಳ, ಬೆಳ್ತಂಗಡಿ, ಭಾಗಗಳಲ್ಲಿ ಆಳ್ವಾಸ್ ನುಡಿಸಿರಿ ಘಟಕಗಳನ್ನು ರಚಿಸಿ ಆ ಮೂಲಕ ಜನತೆಯಲ್ಲಿ ನುಡಿಸಿರಿಯ ಸ್ಪಷ್ಟ ಕಲ್ಪನೆ ಮೂಡುವಂತಹ ಕಾರ್ಯಕ್ರಮ ರೂಪಿಸಲಾಗಿದೆ.

 ಪ್ರತಿನಿಧಿಗಳಾಗಿ ಬನ್ನಿ
       ಯುವ ಜನತೆಯಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗೆಗಿನ ಆಸಕ್ತಿ ಮೂಡಿಸುವಂತಹ ಕಾರ್ಯಗಳನ್ನು ಮಾಡುವ ಸದುದ್ದೇಶದಿಂದ ಈ ಬಾರಿಯೂ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ನಾಡು, ಹೊರನಾಡು, ಹೊರ ರಾಜ್ಯಗಳಿಂದ ಆಳ್ವಾಸ್ ನುಡಿಸಿರಿಗೆ ಪ್ರತಿನಿಧಿಗಳಾಗಿ ಸಾಹಿತ್ಯಾಸಕ್ತರು ಆಗಮಿಸಬೇಕು. ಪ್ರತಿನಿಧಿಗಳಾಗುವವರು ರು.100ನ್ನು ಕಾರ್ಯಾಧ್ಯಕ್ಷರು, ಆಳ್ವಾಸ್ ನುಡಿಸಿರಿ ಹೆಸರಿನಲ್ಲಿ ಎಂ.ಒ, ಡಿ.ಡಿ. ಮೂಲಕ ಸಲ್ಲಿಸಬಹುದು. ಪ್ರತಿನಿಧಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಮನೆ ವಿಳಾಸ, ದೂರವಾಣಿ ಸಂಖ್ಯೆ ಸಹಿತ ಶಾಲೆಯ ಮೂಲಕ ಅರ್ಜಿ ಸಲ್ಲಿಸಬೇಕು. ತಮ್ಮ ಸಂಸ್ಥೆ ನೀಡಿದ ಗುರುತು ಚೀಟಿಯ ಜತೆಗೆ ಮೂರೂ ದಿನಗಳಲ್ಲೂ ಸಮ್ಮೇಳನದ ಕ್ಯಾಂಪಸ್‌ನಲ್ಲಿರಬೇಕು. ಉಚಿತ ವಸತಿ ಮತ್ತು ಊಟೋಪಚಾರವಿದೆ. ಅಶಿಸ್ತಿಗೆ ಅವಕಾಶವಿಲ್ಲ. ಸಮ್ಮೇಳನದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ; ವಿಜೇತರಿಗೆ ಬಹುಮಾನವಿದೆ. ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು (ವಿವರಗಳಿಗೆ 08258-238104ರಿಂದ 238111, ಫ್ಯಾಕ್ಸ್‌: 08258-261229 )ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ಉಪನ್ಯಾಸಕರುಗಳಾದ ಡಾ.ಧನಂಜಯ ಕುಂಬ್ಳೆ, ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.  
Read more...