Showing posts with label ಮೂಡಬಿದಿರೆ. Show all posts
Showing posts with label ಮೂಡಬಿದಿರೆ. Show all posts

ಇಂದು ಎಚ್‌.ಎಲ್‌. ನಾಗೇಗೌಡ ವೇದಿಕೆಯಲ್ಲಿ ಜಾನಪದ ಸಿರಿ

ಮೂಡುಬಿದಿರೆ: ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ - 2013ರ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ಒಂದಾದ ನಾಡೋಜ ಎಚ್‌.ಎಲ್‌. ನಾಗೇಗೌಡರ ಹೆಸರಿನ ವೇದಿಕೆಯಲ್ಲಿ 'ಜಾನಪದ ಸಿರಿ' ಕಾರ್ಯಕ್ರಮ ನಡೆಯಲಿದೆ. ಕರ್ನಾಟಕದ ಜಾನಪದದ ಅಮೂಲಾಗ್ರ ತಿಳುವಳಿಕೆಯನ್ನು ಪ್ರಾತ್ಯಕ್ಷಿಕೆ ಮೂಲಕ ಪ್ರಸ್ತುತಪಡಿಸಲಿರುವ ಜನಪದ ಕಲಾವಿದರು ಕಲಾಸಕ್ತರಿಗೆ ಗಾಢ ಅನುಭವ ನೀಡಲಿದ್ದಾರೆ.

ಹಾವೇರಿ ಜಿಲ್ಲೆಯ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ| ಅಂಬಳಿಕೆ ಹಿರಿಯಣ್ಣ ಅವರ ಆಶಯ ಭಾಷಣ, ಗುಲ್ಬರ್ಗಾ ವಿಶ್ವವಿದ್ಯಾನಿಲಯದ ಜಾನಪದ ತಜ್ಞ ಡಾ| ವೀರಣ್ಣ ದಂಡೆಯವರ ಸಮಾರೋಪ ಭಾಷಣ ಜಾನಪದ ಸಿರಿಯ ವಿಶೇಷತೆ.

ಕರಾವಳಿ ಮತ್ತು ದಕ್ಷಿಣ ಕರ್ನಾಟಕ ಮೌಖೀಕ ಪರಂಪರೆ, ಮಧ್ಯ ಮತ್ತು ಉತ್ತರ ಕರ್ನಾಟಕ ಮೌಖೀಕ ಪರಂಪರೆ, ಕರಾವಳಿ ಜನಪದ ಕುಣಿತ, ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಜನಪದ ಕುಣಿತ, ದಕ್ಷಿಣ ಕರ್ನಾಟಕದ ಜನಪದ ಆರಾಧನೆ, ಮಧ್ಯ ಮತ್ತು ಉತ್ತರ ಕರ್ನಾಟಕದ ಜನಪದ ಆರಾಧನೆ, ದಕ್ಷಿಣ ಕರ್ನಾಟಕದ ಜನಪದ ವಾದ್ಯ, ಉತ್ತರ ಕರ್ನಾಟಕದ ಜನಪದ ವಾದ್ಯ, ಕರ್ನಾಟಕದ ಯಕ್ಷಗಾನ ಮತ್ತು ಸಮಾನಾಂತರ ಕಲಾಪ್ರಕಾರಗಳು ಎಂಬ ವಿಚಾರವಾಗಿ ಉಪನ್ಯಾಸ - ಪ್ರಾತ್ಯಕ್ಷಿಕೆ ನಡೆಯಲಿವೆ. ವಿದ್ವಾಂಸರಾದ ಡಾ| ಕೆ. ಚಿನ್ನಪ್ಪ ಗೌಡ, ಡಾ| ಪೂವಪ್ಪ ಕಣಿಯೂರು, ಡಾ| ಕೃಷ್ಣಮೂರ್ತಿ ಹನೂರು, ಡಾ| ರಂಗಾರೆಡ್ಡಿ ಕೋಡಿರಾಂಪುರ, ಡಾ| ಅಭಯ ಕುಮಾರ್‌, ಯದುಪತಿ ಗೌಡ, ಡಾ| ಚಕ್ಕೆರೆ ಶಿವಶಂಕರ್‌, ಡಾ| ಮೀರಸಾಬಿಹಳ್ಳಿ ಶಿವಣ್ಣ, ಪ್ರೊ| ಎ.ವಿ. ನಾವಡ, ಡಾ| ಅಶೋಕ ಆಳ್ವ, ಡಾ| ತೀ.ನಂ. ಶಂಕರ ನಾರಾಯಣ, ಡಾ| ಚಂದ್ರಪ್ಪ ಸೊಬಡಿ, ಡಾ| ಕುರುವ ಬಸವರಾಜ್‌, ಡಾ| ಕಿಶೋರ್‌ ಕುಮಾರ್‌ ಶೇಣಿ, ಡಾ| ಪಿ.ಕೆ. ಖಂಡೋಬ, ಡಾ| ಎಚ್‌.ಡಿ. ಪೋತೆ, ಡಾ| ಎಂ. ಪ್ರಭಾಕರ ಜೋಷಿ, ಉಜಿರೆ ಅಶೋಕ ಭಟ್‌, ಡಾ| ಶ್ರೀ ಶೈಲ ಹುದ್ದಾರ್‌, ಡಾ| ಬಸವಲಿಂಗಪ್ಪ ಹಿರೇಮಠ ವಿಚಾರ ಮಂಡನೆ ಮಾಡಲಿದ್ದಾರೆ.

ಕರ್ನಾಟಕದ ಜನಪದ ಮೌಖೀಕ ಪರಂಪರೆ, ಜನಪದ ಕುಣಿತ, ಜನಪದ ಆರಾಧನೆ, ಜನಪದ ವಾದ್ಯ, ತೆಂಕುತಿಟ್ಟು - ಬಡಗುತಿಟ್ಟು ಯಕ್ಷಗಾನ, ದೊಡ್ಡಾಟ, ಸಣ್ಣಾಟ ಹಾಗೂ ಶ್ರೀ ಕೃಷ್ಣ ಪಾರಿಜಾತ ಪರಂಪರೆಗೆ ಸಂಬಂಧಿಧಿಸಿದಂತೆ ಕರ್ನಾಟಕದ ವಿವಿಧ ತಂಡಗಳಿಂದ ಪ್ರಾತ್ಯಕ್ಷಿಕೆ ನಡೆಯಲಿವೆ.
Read more...

ನುಡಿ ವಿರಾಸತ್ ವಿಶೇಷ: ನವ ವೇದಿಕೆಗಳಲ್ಲಿ ಏಕಕಾಲಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು

ಮೂಡುಬಿದಿರೆ: ನಾವು ಸಾಮಾನ್ಯವಾಗಿ ಹಿಂದೂ ಪುರಾಣಗಳಲ್ಲಿ ನವಗ್ರಹ, ನವರತ್ನ, ನವದುರ್ಗೆ ಹಾಗೂ ನವರಸಗಳನ್ನು ಕೇಳಿರುತ್ತೇವೆ ಆದರೆ ನವ ವೇದಿಕೆಯನ್ನು ನೀವು ಕೇಳಿದ್ದೀರಾ? ಹೌದು ಇದು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನಲ್ಲಿ ಕಾಣಸಿಗುತ್ತದೆ.
      ಕಲೆ ಸಾಹಿತ್ಯಕ್ಕೆ ವಿಶ್ವ ವಿಖ್ಯಾತಿಯಾದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ ವಿರಾಸತ್‍ಗೆ ಇದೀಗಾಗಲೇ ಅಮೃತ ಘಳಿಗೆ ಬಂದೊದಗಿದೆ. ಇಲ್ಲಿ ಒಂಭತ್ತು ವೇದಿಕೆಗಳು ಸಾಂಸ್ಕøತಿಕ ವರ್ಷಾಧಾರೆಗೆ ಸಜ್ಜುಗೊಂಡಿದೆ. ನವ ವೇದಿಕೆಯು ಆಳ್ವಾಸ್ ವಿರಾಸತ್ ವೇದಿಕೆ, ರತ್ನಾಕರವರ್ಣಿ ವೇದಿಕೆ, ಪಂಜೆಮಂಗೇಶರಾಯ ವೇದಿಕೆ, ನಾಡೋಜ ಎಚ್.ಎಲ್ ನಾಗೇಗೌಡ ವೇದಿಕೆ, ಪದ್ಮವಿಭೂಷಣ ವರ್ಗಿಸ್ ಕುರಿಯನ್ ವೇದಿಕೆ , ಕೆ.ವಿ ಸುಬ್ಬಣ್ಣ ಬಯಲು ರಂಗಮಂದಿರ ವೇದಿಕೆ, ಕು.ಶಿ ಹರಿದಾಸ ಭಟ್ಟ ವೇದಿಕೆ , ಸಂತ ಭದ್ರಗಿರಿ ಅಚ್ಯುತದಾಸ ವೇದಿಕೆ ಹಾಗೂ , ಡಾ,ವಿ.ಎಸ್ ಆಚಾರ್ಯ ವೇದಿಕೆಗಳಾಗಿ ನಾಮಾಂಕಿತಗೊಂಡಿವೆ.
         
    ವೇದಿಕೆಗೆ ಸೂಚಿಸಿರುವ ಎಲ್ಲಾ ಹೆಸರುಗಳು ಸಾಹಿತ್ಯ, ಕಲೆ, ಕೃಷಿ, ಜಾನಪದ, ನಾಟಕ, ಹರಿಕಥೆ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಾಧನೆಯ ಛಾಪನ್ನು ಮೂಡಿಸಿದವರದ್ದಾಗಿದೆ.ವೇದಿಕೆಗಳು ಭಾರತೀಯ ಸಂಸ್ಕøತಿಯನ್ನು ಸಾರುವಂತೆ ವಿವಿಧ ಪುಷ್ಪ, ಆಕೃತಿ ಹಾಗೂ ವಿವಿಧ ಭಂಗಿಗಳಿಂದ ಅಲಂಕೃತಗೊಂಡಿವೆ.
ವೇದಿಕೆಯಲ್ಲಿ ಕಲಾಸರಸ್ವತಿಯ ಆರಾಧನೆ ಮಾಡಿ ಕಲೆಯನ್ನು ಒಲಿಸಿಕೊಂಡಿರುವ ಕಲಾಗಾರರ ಕಲೆಯು ಇಲ್ಲಿ ಪ್ರದರ್ಶನಗೊಳ್ಳುವುದಲ್ಲದೆ ಇದೀಗಾಗಲೇ ಕಲಾರಂಗಕ್ಕೆ ಪ್ರವೇಶ ಹೊಂದಿದ ನವ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ಕರಾವಳಿಯ ಗಂಡುಕಲೆಯಾದ ಯಕ್ಷಗಾನ ಹಾಗೂ ತಾಳ ಮದ್ದಳೆ, ದಕ್ಷಿಣ ಭಾರತದಲ್ಲಿ ಪ್ರಸಿದ್ದವಾದ ಭರತನಾಟ್ಯ, ಉತ್ತರಭಾರತದ ಕಥಕ್, ಒಡಿಸ್ಸಿ, ದಾಸರ ಪದ, ವಚನಗಾಯನ ನೃತ್ಯ ರೂಪಕ, ಹರಿಕಥೆ,ಜಾನಪದ ನೃತ್ಯ-ಹಾಡು, ನಾದ ವಾದ್ಯ ಇಲ್ಲಿ ಮೈದೆಳೆದಿವೆ. ಇಷ್ಟು ಮಾತ್ರವಲ್ಲದೆ ಕೃಷಿಯು ನಮ್ಮ ಸಂಸ್ಕøತಿಯ ಕೈಗನ್ನಡಿ ಹಾಗಾಗಿ ಅದರ ಪ್ರದರ್ಶನ ಹಾಗೂ ಮಾಹಿತಿ ಕಾರ್ಯಕ್ರಮಗಳು ಇಲ್ಲಿ ನೆಲೆಗೊಂಡಿವೆ.
ಪಾಶ್ಚಾತ್ಯ ಸಂಸ್ಕøತಿಗೆ ವಾಲಿರುವ ಜನತೆಗೆ ಮತ್ತೆ ನಮ್ಮ ಸಂಸ್ಕøತಿಯತ್ತ ಎಚ್ಚೆತ್ತುಕೊಳ್ಳುವ ಕರೆಯೋಲೆಯಾಗಿದೆ ಈ ವಿಶ್ವ ನುಡಿಸಿರಿ ವಿರಾಸತ್. ಅದೇನೇ ಇರಲಿ ಇಲ್ಲಿ ಒಮ್ಮೆ ಕಲಾಸಕ್ತರು ಭೇಟಿಮಾಡಿದರೆ ಗಾಂಧರ್ವ ಲೋಕದ ಸಪ್ತ ಸ್ವರನೃತ್ಯಾವಳಿಯನ್ನು ಆಸ್ವಾದಿಸಿ, ಸಾಂಸ್ಕøತಿಕ ರಸ ಲೋಕದಲ್ಲಿ ಮಿಂದು ಎದ್ದಂತಹ ಅನುಭವವಾಗುವುದು ಖಂಡಿತ.

- ಅಕ್ಷತಾ ದೇವಾಡಿಗ
Read more...

ನುಡಿಸಿರಿಗೆ ಬೆರಗು ತಂದ ಶಿಲ್ಪಕಲೆಗಳು

 ಮೂಡುಬಿದಿರೆ: ಕರ್ನಾಟಕವೆಂದರೆ ಶಿಲ್ಪಕಲೆಗಳ ತವರೂರು.ಬೇಲೂರು, ಹಳೆಬೀಡಿನ ವಾಸ್ತುಶಿಲ್ಪವನ್ನು ಕರ್ನಾಟಕವು ವಿಶ್ವಕ್ಕೆ ಕೊಡುಗೆಯಗಿ ನೀಡಿದೆ. ಇದರ ದ್ಯೋತಕವಗಿ ಜೈನಕಾಶಿ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿ ಭಾರಿ ಉತ್ಸವದಿಂದ ನಡೆಯುತ್ತಿರುವ ಕನ್ನಡ ತೇರಿನ ಮಹಾಜಾತ್ರೆಯಲ್ಲಿಯೂ ಶಿಲ್ಪಕಲೆಗಳ ಮೆರುಗು ವಿಶ್ವನುಡಿಸಿರಿ ವಿರಾಸತ್‍ಗೆ ರಂಗುತಂದಿದೆ.
ಕಣ್ಣಿಗೆ ಮುದನೀಡುವ ಈ ಶಿಲ್ಪಕಲೆಗಳು ನೋಡುಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿದೆ.ಪ್ರವೇಶದ್ವಾರದಿಂದ ಹಿಡಿದು ಅಲ್ಲಲ್ಲಿ ಕಾಣಸಿಗುವಂತಹ ಪುಟ್ಟ ಪುಟ್ಟ ಕಲಾಕೃತಿಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಸಫಲವಾಗಿದೆ ಎಂದರೆ ತಪ್ಪಾಗಲಾರದು.
ಇಲ್ಲಿ ನಾನಾ ಬಗೆಯ ಮೂರ್ತಿಗಳನ್ನು ಬಲು ಚೆಂದವಾಗಿ ನಿರ್ಮಿಸಿದ್ದಾರೆ.ಅದರಲ್ಲೂ ತುಳುನಾಡ ಸೃಷ್ಟಿಕರ್ತ ಮುನಿ ಪರಶುರಾಮನ ಮೂರ್ತಿ ಮತ್ತು ತುಳುನಾಡಿನ ವೀರ ಶೂರರಾದ ಕೋಟಿ-ಚೆನ್ನಯರ ಶಿಲ್ಪಕಲೆಗಳಂತು ನೋಡುಗರ ಕಣ್ಣನ್ನು ತಂಪುಮಾಡುವಂತಿದೆ.
ಈ ಶಿಲ್ಪಕಲೆಗಳಲ್ಲಿ ಪ್ರಮುಖವಾದುದೆಂದರೆ ಋಷಿ ಶ್ರೇಷ್ಠ ಪರಶುರಾಮ,ತುಳುನಾಡಿನ ಹೆಮ್ಮೆಯ ಕುವರರಾದ ಕೋಟಿ-ಚೆನ್ನಯರು, ಅಹಿಂಸೆಯ ಮಹಾನ್ ಪ್ರತಿಪಾದಕ ಬಾಹುಬಲಿ ಹಾಗೂ ಗಣಪತಿಯ ಮೂರ್ತಿಗಳು ಸುಂದರವಾಗಿ ಕೆತ್ತಲ್ಪಟ್ಟಿವೆ. ಜೊತೆಗೆ ನಾವು ಇನ್ನಷ್ಟು ಪ್ರಾಮುಖ್ಯತೆಯನ್ನು ನೀಡುವ ಗಂಡುಕಲೆ ಎಂದೇ ಪ್ರಸಿದ್ದಿ ಪಡೆದಿರುವ ಯಕ್ಷಗಾನದ ಮೂರ್ತಿಗಳು ಮತ್ತಷ್ಟು ಶೋಭೆತರುತ್ತಿದೆ.
-ಶಿಲ್ಪಶ್ರೀ ಮನ್ನಡ್ಕ

Read more...

ಕಲ್ಲಂಗಡಿಯಲ್ಲರಳಿದ ಕವಿಗಳು

ಮೂಡುಬಿದಿರೆ: ಅಲ್ಲಂತೂ ಎಂಟೂ ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ನಮ್ಮ ಕನ್ನಡದ ಸಾಹಿತಿಗಳೂ ಒಟ್ಟಾಗಿ ಸೇರ್ಬಿಟ್ಟಿದ್ರು, ಅವ್ರ ಪಕ್ಕದಲ್ಲೇ ನಮ್ಮ ಖಾವಂದರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮೋಹನ್ ಆಳ್ವ ಅವರ ನಗು ಮೊಗಗಳು ನಮ್ಮನ್ನ ಇದಿರುಗೊಂಡವು. ಈ ಎಲ್ಲಾ ಗಣ್ಯರು ಒಟ್ಟಾಗಿ ಸಿಕ್ಕಿದ್ದು ಆಳ್ವಾಸ್ ನುಡಿಸಿರಿಯ ಫಲಪುಷ್ಪ ಮೇಳದಲ್ಲಿ. ಅದೂ ಕಂಡರೆ ಬಾಯಲ್ಲಿ ನೀರೂರಿಸುವ ಕಲ್ಲಂಗಡಿಗಳ ಮೇಲೆ.
ಈ ಕಲಾಕೃತಿಗಳಿಗೆ ಜೀವ ತುಂಬಿದವರು ಶಿವಮೊಗ್ಗದ ಹರೀಶ್ ಕುಮಾರ್ ಮತ್ತು ಶರಣಪ್ಪರು. ಕರ್ನಾಟಕದ ಎಲ್ಲಾ ಭಾಗಗಳಲ್ಲಿ ನಡೆಯುವ ಇಂತಹ ಮೇಳಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅವರೇ ಹೇಳೋ ಹಾಗೆ ಸುಮಾರು ಅರ್ಧಗಂಟೆಯ ಶೃದ್ಧೆ ಹಾಗೂ ನಿರತ ಪರಿಶೃಮ ಈ ಕಲಾಕೃತಿಗಳ ಹಿಂದಿವೆ. ಆಳ್ವಾಸ್ ನುಡಿಸಿರಿಯ ಪ್ರಮುಖ ಆಕóರ್ಷಣೆಯ ಎನಿಸಿದ ಈ ಕಲಾಕೃತಿಗಳ ಬಗ್ಗೆ ಅವರಲ್ಲಿ ಕೇಳಿದಾಗ, ತಮ್ಮ ಕೈಯಲ್ಲಿ ಮೂಡಿಬಂದ ಕಲಾಕೃತಿಗಳ ಬಗ್ಗೆ ಸಂತೃಪ್ತಿ ಅವರ ಮುಖದಲ್ಲಿತ್ತು. ಶರಣಪ್ಪನವರು ಮಾತನಾಡುತ್ತ ಮೊದಲೊಂದಲೂ ಚಿತ್ರಕಲೆಯಲ್ಲೇ ಆಸಕ್ತಿಯಿದ್ದ ನಮಗೆ ಈ ಕಲೆಯ ಅಷ್ಟೊಂದು ಕಷ್ಟದಾಯಕವಲ್ಲ ಬದಲಾಗಿ ಇದೊಂದು ಕಲಾ ಸೇವೆ ಎಂದರು.
ಕಲ್ಲಂಗಡಿಗಳನ್ನು ತಿನ್ನೋಕೆ ಮಾತ್ರ ಅಂಥ ತಿಳಿದವರಿಗೆ ಇದೊಂದು ವಿಶೇಷ ಅನ್ನಿಸೋದಂತೂ ಸುಳ್ಳಲ್ಲ. ಫಲಪುಷ್ಪವನ್ನು ನೋಡಲು ಬಂದವರು ಗಣ್ಯರ ಮುಖ ನೋಡಿ ಕಣ್ಣು ತಂಪಾಗಿಸಿಕೊಂಡರು. ಕಲ್ಲಂಗಡಿಯ ಕೆಂಪಿನ ಮೇಲೆ ಬಿಳಿ ಬಣ್ಣದಲ್ಲಿ ಮೂಡಿಬಂದ ಆಳ್ವಾಸ್ ಲಾಂಛನ ಕೂಡಾ ನುಡಿಸಿರಿಯನ್ನು ಪ್ರತಿಬಿಂಬಿಸುವಂತಿತ್ತು.
ಈ ಕಲಾಕೃತಿಗಳ ಪಕ್ಕದಲ್ಲೇ ವಿಶಿಷ್ಟ ರಿತೀಯ ಜಾನುವಾರ್ ಆರ್ಟ ಇನ್ನೊಂದು ಪ್ರಮುಖ ಆಕರ್ಷಣೆ.ಜರ್ಮನಿ ಹಾಗೂ ಜಪಾನ್ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಕಲೆ ನುಡಿಸಿರಿಯಲ್ಲಿ ಭಾರತೀಯತೆಯ ಲೇಪದೊಂದಿಗೆ ಆವರಣಗೊಂಡಿತ್ತು.ತೆಂಗಿನ ಗರಿ ಹಾಗೂ ಬಾಳೆ ದಿಂಡಿನಿಂದ ಮಾಡಿರುವ ಗಣೇಶ ಹಾಗೂ ಯಕ್ಷಗಾನದ ಕಲಾಕೃತಿಗಳು ಜೊತೆಗೆ ಕುಂಬಳ ಹಾಗೂ ಸೋರೆಯಿಂದ ಜೀವತಳೆದ ಮಹಿಳೆ ಎಲ್ಲರನ್ನು ಆಕರ್ಶಿಸತೊಡಗಿದ್ದಾರೆ. ಫಲಪುಷ್ಪ ಪ್ರದರ್ಶನ ಪ್ರಾರಂಭಗೊಂಡ ದಿನದಿಂದಲೇ ಈ ಕಲಾಕೃತಿಗಳ ಸುತ್ತ ನೆರೆದು, ಆಶ್ಚರ್ಯ ಬೆರೆತ ಸಡಗರದಲ್ಲಿ ಜನರು ಇದನ್ನು ವೀಕ್ಷಿಸ ತೊಡಗಿದ್ದಾರೆ.
ಈ ಬಿಸಿಲಿನ ಜಳದಲ್ಲಿ ನುಡಿಸಿರಿಗೆ ಬೇಟಿಕೊಟ್ಟವರಿಗೆ ಇದು ಮನಸ್ಸಿಗೆ ಮುದನೀಡೂದಂತೂ ಸುಳ್ಳಲ್ಲ. ನೀವು ಬರೋದಾದ್ರೆ ಈ ಅವಕಾಶವನ್ನು ಖಂಡಿತಾ ತಪ್ಪಿಸಿಕೊಳ್ಳಬೇಡಿ.
ಸುಷ್ಮಿತಾ ಶೆಟ್ಟಿ, ಉಜಿರೆ












Read more...

ಮನಸೂರೆಗೊಳಿಸಿದ ವಿಶ್ವ ನುಡಿಸಿರಿ ವಿರಾಸತ್ ಮೆರವಣಿಗೆ

ಮೂಡಬಿದಿರೆ: ಜಾನಪದ ಕಲೆ ಮತ್ತು ಕಲಾವಿದರನ್ನು ಬಿಂಬಿಸಿದ ಸುಂದರ ಮೆರವಣಿಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗೆ ಸುಂದರ ಮುನ್ನುಡಿಯನ್ನು ಬರೆಯಿತು. ಆಳ್ವಾಸ್ ಸಮಯದಂತೆ ಮಧ್ಯಾಹಣ 3 ಗಂಟೆಗೆ ಕರಾವಳಿಯ ಕದೋನಿಗಳ ಸದ್ದಿನೊಂದಿಗೆ ಅನುರಣಿಸಿ ಸಾವಿರಾರು ಕಲಾವಿದರ ಸಂಭ್ರಮದೊಂದಿಗೆ ಮೂಡುಬಿದಿರೆಯ ಹನುಮಾನ್ ದೇಮಾಲಯದಿಂದ ವಿದ್ಯಾಗಿರಿಯ ರತ್ನಾಕರವಣರ್ಿ ವೇದಿಕೆಯ ವರೆಗೆ ಸಾಗಿಬಂತು. 25 30 ಅಡಿ ಉದ್ದದ ಭಾರತೀಯ ಡೈನೋಸರ್ ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿ ಮೂಡಿಬಂತು. ಕೆರಳದ ಶಕ್ತಿ ದೈವಗಳು ಮೆರವಣಿಗೆಗೆ ದೈವ ಕಳೆ ನೀಡಿದರೆ ಕರಾವಳಿ ಒಂದೇ ಒಂದು ದೈವಗಳ ವೇಷವಾಗಲಿ ನೆನಪಾಗಲಿ ಮೆರವಣಿಗೆಯಲ್ಲಿ ತಾಂತ್ರಿಕ ಕಾರಣಗಳಿಗಾಗಿ ಇರದಿದ್ದುದು ಎದ್ದು ಕಾಣುತ್ತಿತ್ತು. ಕಂಸಾಳೆ, ದೊಳ್ಳು ಕುಣಿತ, ಗೊಂಬೆ ಕುಣಿತ, ವಿದ್ಯಾಥರ್ಿಗಳ ದಂಡು, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿವಿಧ ವೇಷಗಳು, ಕೀಲು ಕುದುರೆ ನೃತ್ಯ, ಹಲಗೆ ಕಣಿತ, ಯಕ್ಷಗಾನದ ವೇಷಗಳು, ಕೋಲಾಟ, ನವಿಲು ನೃತ್ಯ, ಕಡುಬಿ ನೃತ್ಯ, ಭಜನಾ ತಂಡ, ಮಡಿಕೇರಿಯ ಮಹಿಳಾ ತಂಡ, ಕೋಲು ಕುಣಿತ, ಚಂಡೆ ಬಳಗ, ದೈವ ದೇವ, ದೇವರ ವೇಷಗಳು, ಶ್ರೀಲಂಕಾ ಕುಣಿತ, ಬಂಜಾರು ನೃತ್ಯ, ಮಹಿಳಾ ಚಂಡೆ ಸೇರಿದಂತೆ ಹಿಂದೆದೂ ಸಾಹಿತ್ಯ ಸಮ್ಮೇಳನಗಳು ಕಾಣದ ರೀತಿಯಲ್ಲಿ ಮೇರವಣಿಗೆ ಮೂಡಿಬಂದವು.
ಎನ್ ಎಸ್ ಎಸ್, ಎನ್.ಸಿ.ಸಿ ಸೇರಿದಂತೆ ಸಾವಿರಾರು ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ರಸ್ತೆಯ ಇಕ್ಕೆಗಳಲ್ಲಿ ಊಹೆಗೆ ನಿಲುಕದಷ್ಟು ಸಂಖೆಯಲ್ಲಿ ಜನರು ಭಾಗವಹಿಸಿದ್ದು ಮೆರವಣಿಗೆಗೆ ಉತ್ತಮ ಚಾಲನೆ ನಿಡಿದಂತಾಯಿತು.




























































































































































































































Read more...