Showing posts with label ಕಾರ್ಯಕ್ರಮಗಳು. Show all posts
Showing posts with label ಕಾರ್ಯಕ್ರಮಗಳು. Show all posts

ಇಂದು ನುಡಿಸಿರಿಗೆ ತೆರೆ


 ಮೂಡುಬಿದಿರೆ : ಇಂದು ಅಪರಾಹ್ನ 3.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ರೈ|ರೆ| ಡಾ| ಅಲೋಶಿಯಸ್‌ ಪಾವ್‌É ಡಿ'ಸೋಜಾ, ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ| ಸಿ.ಪಿ. ಕೃಷ್ಣ ಕುಮಾರ್‌, ಗಿರೀಶ್‌ ಕಾಸರವಳ್ಳಿ, ಡಾ| ಸಿದ್ಧಲಿಂಗಯ್ಯ, ವೈಜಯಂತಿ ಕಾಶಿ, ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ, ಡಾ| ವಿಷ್ಣು ನಾಯ್ಕ ಅಂಕೋಲಾ, ಸುಭದ್ರಮ್ಮ ಮನ್ಸೂರು ಅವರಿಗೆ ಹಾಗೂ 'ಲೋಕ ಶಿಕ್ಷಣ ಟ್ರಸ್ಟ್‌ ಬೆಂಗಳೂರು - ಹುಬ್ಬಳ್ಳಿ' ಸಂಸ್ಥೆಗೆ ಆಳ್ವಾಸ್‌ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು ಸಮಾರೋಪ ಭಾಷಣ ಮಾಡುವರು.

ಸಾಂಸ್ಕೃತಿಕ : ಹಗಲಿನ ಬಿಡುವೇಳೆಯಲ್ಲಿ ಆಳ್ವಾಸ್‌ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾಪಗಳಿರುತ್ತವೆ.

ಉಡುಪಿ ಕೊಡವೂರು ನೃತ್ಯ ನಿಕೇತನದವರಿಂದ ನಂದಗೋಕುಲ -ನೃತ್ಯ ರೂಪಕ, ನಾಟ್ಯ ನಿಲಯಂ ಮಂಜೇಶ್ವರ ಅವರಿಂದ ನಾಟ್ಯ ಸಮ್ಮೊàಹನಂ, 2.ಬಿ.ಆರ್‌. ಛಾಯಾ ಬಳಗದವರಿಂದ ಸುಗಮ ಸಂಗೀತ, ಆಳ್ವಾಸ್‌ ರಂಗ ಅಧ್ಯಯನ ಕೇಂದ್ರದವರಿಂದ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಭಾಸನ ದೂತ ವಾಕ್ಯ ಏಕಾಂಕ ನಾಟಕ, ಮಂಡ್ಯ ರಮೇಶ ನಿರ್ದೇಶನದಲ್ಲಿ ಚೋರ ಚರಣದಾಸ ನಾಟಕ, 3.ಕಲಾನಿಕೇತನ ಬೆಳ್ತಂಗಡಿ ಇವರಿಂದ ಭರತನಾಟ್ಯ, ಪಂಚಭೂತ ನೃತ್ಯ ರೂಪಕ, ಕಾರ್ಕಳದ ಶ್ರೀ ನೃತ್ಯಾಲಯದಿಂದ ಭರತನೃತ್ಯ, 4.ಸಂಜನಾ ವಿ. ಮರಾಠೆ- ಅರ್ಚನಾ ವಿ. ಮರಾಠೆ ಸಹೋದರಿಯರಿಂದ ಶಾಸ್ತ್ರೀಯ ಸಂಗೀತ, ಗದಗ್‌ನ ಸಮರ್ಥ ಡಿ. ದೇಸಾಯಿ ಅವರಿಂದ ಹಿಂದೂಸ್ತಾನಿ ಗಿಟಾರ್‌ ವಾದನ, ಬೆಂಗಳೂರು ಸಂಗೀತ ಪನೀಶ್‌ ಅವರಿಂದ ಕೂಚಿಪುಡಿ, 5. ಶಾಂತೇರಿ ಕಾಮತ್‌ ತೀರ್ಥಹಳ್ಳಿ ಅವರಿಂದ ವಚನ ಗಾಯನ, ಉಪ್ಪಿನ ಕುದ್ರು ಶ್ರೀ ಗಣೇಶ ಯಕ್ಷಗಾನ ಬೊಂಬೆಯಾಟ ಮಂಡಳಿಯಿಂದ ಗೊಂಬೆಯಾಟ ಕಾರ್ಯಕ್ರಮ.

Read more...

ನುಡಿಸಿರಿಯಲ್ಲಿ ಇಂದು...

ಮೂಡುಬಿದ್ರೆ: ಮುಂಜಾನೆ ರತ್ನಾಕರ ವರ್ಣಿ ವೇದಿಕೆಯಲ್ಲಿ ಪಂಡಿತ್‌ ಜಯತೀರ್ಥ ಮೇವುಂಡಿ ಅವರ ಉದಯರಾಗ, ರಾಯಚೂರು ಶೇಷಗಿರಿ ದಾಸ್‌ ಬಳಗದವರಿಂದ ದಾಸರ ಪದಗಳು, 9.30ರಿಂದ ಕೆ.ಪಿ. ಮೃತ್ಯುಂಜಯ ಅವರಿಂದ ಕವಿ ಸಮಯ-ಕವಿ ನಮನ

    9.50ರಿಂದ ಎರಡನೇ ವಿಚಾರಗೋಷ್ಠಿ. 'ಸಾಮುದಾಯಿಕ ಚಳವಳಿಗಳು' ಶೀರ್ಷಿಕೆಯ ಈ ಗೋಷ್ಠಿಯಲ್ಲಿ ಚುಕ್ಕಿ ನಂಜುಂಡ ಸ್ವಾಮಿ (ರೈತ ಚಳವಳಿ), ಧರಣೀ ದೇವಿ ಮಾಲಗತ್ತಿ (ಮಹಿಳಾ ಚಳವಳಿ) ಹಾಗೂ ಸುರೇಶ್‌ ಹೆಬ್ಳೀಕರ್‌ (ಪರಿಸರ ಚಳವಳಿ) ಭಾಗವಹಿಸುವರು.
   11.40ಕ್ಕೆ ಡಾ| ಭಾಳಾ ಸಾಹೇಬ್‌ ಲೋಕಾಪುರ ಅವರಿಂದ ಕಥಾ ಸಮಯ. 12ಕ್ಕೆ ಡಾ| ಎಂ. ಮೋಹನ ಆಳ್ವರು ಡಾ| ವಿ.ಎಸ್‌. ಆಚಾರ್ಯರ ನೆನಪು ಕಟ್ಟಿಕೊಡುವರು. ನಾಗೇಶ್‌ ಜೆ. ನಾಯಕ್‌ ಅವರಿಂದ ಕವಿ ಸಮಯ - ಕವಿ ನಮನ, 1.15ಕ್ಕೆ ಸುಳ್ಯದ ಕೆ. ಆರ್‌. ಗೋಪಾಲಕೃಷ್ಣ ಭಾವನಾ ಬಳಗದವರಿಂದ ಕನ್ನಡ ಗಝಲ್ಸ್‌, ಬಸು ಬೇವಿನ ಗಿಡದ ಅವರಿಂದ ಕವಿ ಸಮಯ - ಕವಿ ನಮನ.
   2.20ರಿಂದ 4ರ ವರೆಗೆ ಸಮ್ಮೇಳನದ ಮೂರನೇ ಗೋಷ್ಠಿ- ಅಖಂಡ ಕರ್ನಾಟಕದ ಅಸ್ತಿತ್ವ - ಹೋರಾಟ. ಡಾ| ಮಹಾಬಲೇಶ್ವರ ರಾವ್‌ (ಶಿಕ್ಷಣದಲ್ಲಿ ಕನ್ನಡ), ಅಡೂxರು ಕೃಷ್ಣರಾವ್‌ (ನೆಲ ಜಲ ಹೋರಾಟ) ಮತ್ತು ಸ.ರ. ಸುದರ್ಶನ (ಕನ್ನಡ ಸಂಘ ಸಂಸ್ಥೆಗಳು ಮತ್ತು ಹೋರಾಟ) ಗೋಷ್ಠಿಯಲ್ಲಿ ಭಾಗವಹಿಸುವರು.
    4.10ರಿಂದ ಅಮರೇಶ ನುಗಡೋಣಿ ಅವರಿಂದ ಕಥಾ ಸಮಯ, ಡಾ| ಕುಂ. ವೀರಭದ್ರಪ್ಪ ಅವರಿಂದ ವಿಶೇಷ ಉಪನ್ಯಾಸ, 5.20ಕ್ಕೆ ಬಾಲಕೃಷ್ಣ ಕಂಜರ್ಪಣೆ ಅವರಿಂದ ಕವಿ ಸಮಯ-ಕವಿನಮನ, 5.50ರಿಂದ 6.50ರ ವರೆಗೆ ಮಿಮಿಕ್ರಿ ದಯಾನಂದ ಅವರಿಂದ ಮಾತಿನ ಮಂಟಪ ಕಾರ್ಯಕ್ರಮ.

Read more...

ಇಂದಿನಿಂದ ನುಡಿಸಿರಿ ಸಂಭ್ರಮ

ಮೂಡಬಿದಿರೆ : ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಮೂಡಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಇಂದಿನಿಂದ ಮೂರು ದಿನಗಳ ಕಾಲ 'ಕನ್ನಡ ಮನಸ್ಸು: ಜನಪರ ಚಳವಳಿಗಳು' ಎಂಬ ಪರಿಕಲ್ಪನೆಯಲ್ಲಿ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಶುಭ ಸೇಸೆಯೊಂದಿಗೆ 9ನೇ ವರುಷದ ಆಳ್ವಾಸ್‌ ನುಡಿಸಿರಿ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಜರಗಲಿದೆ.
        ಬೆಳಿಗ್ಗೆ 9ಕ್ಕೆ ಸಾಂಸ್ಕೃತಿಕ ಮೆರವಣಿಗೆಯಿಂದ  ಆರಂಭಗೊಳ್ಳಲಿದೆ ನುಡಿಸಿರಿ ಸಂಭ್ರಮ. 9.30ಕ್ಕೆ ಉದ್ಘಾಟನಾ ಸಮಾರಂಭ  ಪದ್ಮಶ್ರೀ ನಾಡೋಜ ಪ್ರೊ| ಕೆ.ಎಸ್‌. ನಿಸಾರ್‌ ಅಹಮದ್‌ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಈ ಸಮ್ಮೇಳನವನ್ನು ಹಿರಿಯ ಸಾಹಿತಿ ಡಾ| ಯು.ಆರ್‌. ಅನಂತಮೂರ್ತಿ ಉದ್ಘಾಟಿಸಲಿದ್ದಾರೆ. ಕಸಾಪ ರಾಜ್ಯಾಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ಶಾಸಕರಾದ ಕೆ. ಅಭಯಚಂದ್ರ ಹಾಗೂ ಕ್ಯಾ| ಗಣೇಶ್‌ ಕಾರ್ಣಿಕ್‌ ಉಪಸ್ಥಿತರಿರುವರು. ಅನಂತಮೂರ್ತಿ ಅವರು 'ಕನ್ನಡ ಮನಸ್ಸು: ಸಂಘರ್ಷ ಮತ್ತು ಸಾಮರಸ್ಯ' ಕಳೆದ ಸಾಲಿನ ನುಡಿಸಿರಿ ನೆನಪಿನ ಸಂಚಿಕೆ ಅನಾವರಣಗೈಯುವರು.
         ಶತಾಯುಷಿ ವಿದ್ವಾಂಸ ಪ್ರೊ| ಜಿ. ವೆಂಕಟಸುಬ್ಬಯ್ಯ ಅವರನ್ನು ಡಾ| ಪಿ.ವಿ. ನಾರಾಯಣ ಅವರ ಅಭಿವಂದನೆಯೊಂದಿಗೆ    ಪದ್ಮವಿಭೂಷಣ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಗೌರವಿಸುವರು.
       ಕನಕಗಿರಿ ಹುಸೇನ್‌ ಸಾಬ್‌ ಅವರಿಂದ ದಾಸವಾಣಿ, ಜಿನದತ್ತ ದೇಸಾಯಿ ಅವರಿಂದ ಕವಿ ಸಮಯ- ಕವಿನಮನ 2.20ರ ವರೆಗೆ ನಡೆಯಲಿದೆ.
     ಅಪರಾಹ್ನ 2.20ರಿಂದ 4ರ ವರೆಗೆ ನಡೆಯುವ 'ಕನ್ನಡ ಸಾಹಿತ್ಯಕ ಚಳವಳಿಗಳು' ಶೀರ್ಷಿಕೆಯ ಮೊದಲ ವಿಚಾರಗೋಷ್ಠಿಯಲ್ಲಿ ಡಾ| ರಂಜಾನ್‌ ದರ್ಗಾ (ಹಳೆಗನ್ನಡಾನಂತರ ಚಳವಳಿಗಳು), ಡಾ| ನಿತ್ಯಾನಂದ ಬಿ. ಶೆಟ್ಟಿ ( ಅಚ್ಚಗನ್ನಡದ ಎಚ್ಚರ) ಹಾಗೂ ಡಾ| ಸಿ.ಆರ್‌. ಗೋವಿಂದ ರಾಜು ( ಕನ್ನಡ ಭಾಷಾ ಚಳವಳಿಗಳು) ಭಾಗವಹಿಸುವರು.
      ಡಾ| ಪಾದೆಕಲ್ಲು ವಿಷ್ಣು ಭಟ್ಟರು ಡಾ| ವೆಂಕಟರಾಜ ಪುಣಿಂಚಿತ್ತಾಯ ನೆನಪು ಕಟ್ಟಿಕೊಡುವರು. ಎಸ್‌. ದಿವಾಕರ್‌ ಅವರಿಂದ ಕಥಾ ಸಮಯ, ನಾಗತಿ ಹಳ್ಳಿ ಚಂದ್ರಶೇಖರ್‌ ಅವರಿಂದ 'ನಮ್ಮ ಹಳ್ಳಿ ನಮ್ಮ ಜಗತ್ತು' ವಿಶೇಷ ಉಪನ್ಯಾಸ, ವಿನಯಾ ವಕ್ಕುಂದ ಅವರಿಂದ ಕವಿಸಮಯ - ಕವಿನಮನ, ಸಂಜೆ 6.05ಕ್ಕೆ ಡಾ| ಕೃಷ್ಣೇ ಗೌಡರಿಂದ ಮಾತಿನ ಮಂಟಪ ಕಾರ್ಯಕ್ರಮಗಳಿರುತ್ತವೆ.

Read more...

‘ಚಿತ್ರಸಿರಿ’ ಸಮಾರೋಪ: ಪ್ರಶಸ್ತಿ ಪ್ರದಾನ


ಮೂಡುಬಿದಿರೆ: ಕಳೆದ ಮೂರು ದಿನಗಳಿಂದ ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯುತ್ತಿದ್ದ ‘ಆಳ್ವಾಸ್ ಚಿತ್ರಸಿರಿ’ಯ ಸಮಾರೋಪ ಸಮಾರಂಭ ಶನಿವಾರ ನಡೆಯಿತು. ಈ ಸಂದರ್ಭ ಮೈಸೂರು ಲಲಿತಕಲಾ ಮಹಾ ಸಂಸ್ಥಾನದ ಡಿಎಂಎಸ್ ಪ್ರೊ. ಬಿ.ವಿ.ಹಿರೇಗೌಡರ್‌ಗೆ ಆರನೆ ವರ್ಷದ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
     ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕ ಲಲಿತಕಲಾ ಅಕಾಡಮಿಯ ಅಧ್ಯಕ್ಷ ಚಿ.ಸು ಕೃಷ್ಣ ಸೆಟ್ಟಿ, ಸಾಹಿತ್ಯಕ್ಕೆ ಸಿಗುವಷ್ಟು ಮಾನ್ಯತೆಯು ಇಂದು ಕಲಾ ಮಾಧ್ಯಮಕ್ಕೆ ಸಿಗುತ್ತಿಲ್ಲ. ಕಲೆಯ ಬಗ್ಗೆ ಅಜ್ಞಾನವೇ ಹೆಚ್ಚಿದೆ. ಕಲೆಯ ಶಕ್ತಿಯನ್ನು ಅರ್ಥೈಸಿಕೊಳ್ಳದಿದ್ದರೆ ಸಮಾಜದ ಪರಿವರ್ತನೆ ಸಾಧ್ಯವಿಲ್ಲ ಎಂದು ಹೇಳಿದರು.
     ನಮ್ಮ ಭಾವನೆಗಳನ್ನು ಅಭಿವ್ಯಕ್ತ ಪಡಿಸುವಾಗ ನಕಾರತ್ಮಕ ಅಂಶಗಳೇ ಹೆಚ್ಚಾಗುತ್ತದೆ. ಇದು ಸರಿಯಲ್ಲ ಅದರ ಬದಲು ಬದುಕನ್ನು ಸಂಭ್ರಮಿಸಬೇಕು ಎಂದರು.
      ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಹಿರೇಗೌಡರ್, ಬದುಕಿನಲ್ಲಿರುವ ಹಲವು ನೋವುಗಳನ್ನು ಬದಿಗೊತ್ತಿ ನಾನು ಆಯ್ದುಕೊಂಡ ಕ್ಷೇತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಲೆಯಲ್ಲಿ ತೊಡಗಿದ್ದೇನೆಯೇ ವಿನಹ ಇದು ಹಣಗಳಿಸಲು ಅಲ್ಲ. ನನಗೆ ಬಂದ ಪ್ರಶಸ್ತಿ ಎಲ್ಲಾ ಸಾಧಕ ಕಲಾವಿದರಿಗೆ ಸಂದ ಪ್ರಶಸ್ತಿ ಎಂದರು.
     ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಲಿತಕಲಾ ಅಕಾಡಮಿಯ ಸದಸ್ಯ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.
ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಸನ್ಮಾನಿತರನ್ನು ಪರಿಚಯಿಸಿದರು. ಭಾಸ್ಕರ್ ನೆಲ್ಯಾಡಿ ಸ್ವಾಗತಿಸಿದರು. ಗುರುಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Read more...

ಆಳ್ವಾಸ್ ನುಡಿಸಿರಿಗೆ ಬರದ ಸಿದ್ದತೆ; ಶಾಶ್ವತಚಪ್ಪರ

ಮೂಡಬಿದಿರೆ: ನಾಡು ನುಡಿಯ ಸಮ್ಮೆಳನ ಆಳ್ವಾಸ್ ನುಡಿಸಿರಿಗೆ ವಾರವಷ್ಟೇ ಬಾಕಿಯಿದ್ದು, ಸಿದ್ದತೆಗಳು ಬರದಿಂದ ಸಾಗಿವೆ. 2013ರಲ್ಲಿ ಮೂಡಬಿದಿರೆಯಲ್ಲಿ ನಡೆಸಲುದ್ದೇಶಿಸಲಾದ ಆಳ್ವಾಸ್ ವಿಶ್ವ ನುಡಿಸಿರಿಯ ಕಲ್ಪನೆಯನ್ನು ಮುಂದಿಟ್ಟುಕೊಂಡು ಶಾಶ್ವತಚಪ್ಪರದ ಕೆಲಸ ಕಾರ್ಯಗಳು ಚುರುಕಿನಿಂದ ಸಾಗುತ್ತಿದೆ. ಸುಮಾರು 12 ಸಾವಿರ ಆಸನ ವ್ಯವಸ್ಥೆಯ ಈ ಚಪ್ಪರ ಶಾಶ್ವತವಾಗಿ ವಿದ್ಯಾಗಿರಿಯಲ್ಲಿ ನಿರ್ಮಾಣವಾಗುತ್ತಿದೆ. 9ನೇ ವರುಷದ ಆಳ್ವಾಸ್ ನುಡಿಸಿರಿ ಈ ನೂತನ ಶಾಶ್ವತಚಪ್ಪರದಲ್ಲಿ ನಡೆಯಲಿದೆ.

ಬೃಹತ್ ವೇದಿಕೆ:
 ನುಡಿಸಿರಿಯ ಶಾಶ್ವತ ಚಪ್ಪರದೊಳಗೆ ಬೃಹತ್ “ರತ್ನಾಕರವರ್ಣಿ ” ವೇದಿಕೆಯನ್ನೂ ಶಾಶ್ವತವಾಗಿಯೇ ನಿರ್ಮಾ ಣಗೊಳಿಸಲಾಗುತ್ತಿದೆ. 160ಫೀಟ್ ಅಗಲ, 40 ಫೀಟ್ಉದ್ದ ಮತ್ತು 4ಫೀಟ್ ಎತ್ತರದ ವೇದಿಕೆ ,ಅದಕ್ಕೂ ಮೇಲ್ಛಾವಣಿಯೊಂದಿಗೆ ನಿರ್ಮಾ ಣಗೊಳ್ಳುತ್ತಿದೆ. 310ಫೀಟ್ ಉದ್ದ, 160ಫೀಟ್ ಅಗಲ, 28ಫೀಟ್ ಎತ್ತರದಚಪ್ಪರಅತ್ಯಂತ ಸುಂದರವಾಗಿ ಮೂಡಿಬರುತ್ತಿದೆ. 40*30 ವಿಸ್ತೀರ್ಣದ ಎರಡು ಗ್ರೀನ್ರೂಮ್, ಶಾಶ್ವತ ಶೌಚ ಗೃಹಗಳು, ಉತ್ತಮದರ್ಜೆಯ ಧ್ವನಿವರ್ಧಕ, ಲೈಟಿಂಗ್ ವ್ಯವಸ್ಥೆ, ಕ್ಲೋಸ್ಡ್  ಸರ್ಕ್ಯೂಟ್ ಟಿ.ವಿ ವ್ಯವಸ್ಥೆ, ಸುಸಜ್ಜಿತ ಆಸನ ವ್ಯವಸ್ಥೆ, ಚಪ್ಪರದ ಸುತ್ತಲೂ 1,500ಕ್ಕೂ ಮಿಕ್ಕಿದ ಆಕರ್ಷಕ ಗೂಡುದೀಪಗಳು ಶೃಂಗಾರಗೊಳ್ಳಲಿವೆ. ಶಿಕ್ಷಣ ಸಂಸ್ಥೆಯೊಂದರಲ್ಲಿ ಈ ರೀತಿಯ ಬೃಹತ್ ಮಟ್ಟದ ಶಾಶ್ವತಚಪ್ಪರ ನಿರ್ಮಾ ಣಕಾರ್ಯಇದೇ ಮೊದಲಾಗಿದೆ.

Read more...

ನವೆಂಬರ್ 8- 11 ಚಿತ್ರಸಿರಿ


      ಆಳ್ವಾಸ್ ನುಡಿಸಿರಿಗೆ ಪೂರ್ವಭಾವಿಯಾಗಿ ಆಳ್ವಾಸ್ ಚಿತ್ರಸಿರಿ 2012 ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಮತ್ತು ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ನವೆಂಬರ್ 8ರಿಂದ 11ರ ತನಕ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.
        ನವೆಂಬರ್ 8ರಂದು ಬೆಳಗ್ಗೆ 10.15ಕ್ಕೆ ಸರಿಯಾಗಿ ಮೂಡಬಿದಿರೆ ಜೈನ ಮಠದ ಶ್ರೀಶ್ರೀಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ದ.ಕ.ಜಿಲ್ಲಾ ಸಂಚಾಲಕ ರಾಜೇಂದ್ರ ಕೇದಿಗೆ ಉಪಸ್ಥಿತರಿರುವರು. ಒಟ್ಟು 20 ಮಂದಿ ರಾಜ್ಯದ ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಳ್ಳುವರು. ಚಂದ್ರಕಾಂತ ಬಾಗಲಕೋಟೆ, ಜೀವನ್ ಎ.ಎಸ್.ಮಂಗಳೂರು, ಪರಮೇಶ್ ಡಿ.ಜೋಲದ್, ಬಾಗಲಕೋಟೆ, ಹರೀಶ್ ಸಾಗಾ,ಕುಂದಾಪುರ, ಬಿ.ವಿ.ಕಾಮಾಜಿ, ಗುಲಬರ್ಗಾ, ದೇವೇಂದ್ರ ಎಮ್ ಬಡಿಗೇರ್ ಧಾರಾವಾಡ, ಶಹೆದ್ ಪಾಷಾ ಗುಲಬರ್ಗಾ, ವಿಶ್ವಕರ್ಮ ಆಚಾರ್, ಚಿಕ್ಕಮಗಳೂರು, ನಾಗರಾಜ್ ಕೆ.ಟಿ. ಮಂಗಳೂರು, ನವೀನ್ ಕುಮಾರ್ ಎ ಬೆಂಗಳೂರು, ಹರಿಪ್ರಸಾದ್ ಬಿ.ಎನ್.ತುಮಕೂರು, ಈರಣ್ಣ ದಂಡಿನ್ ಕೋಲಾರ, ಬಸವರಾಜ್ ಗವಿಮಠ್ ಬಾಗಲಕೋಟೆ, ಸಿ.ಡಿ.ಜಟ್ಟಣವರ್ ಹುಬ್ಬಳ್ಳಿ, ಶಿವಾನಂದ ಎಸ್.ಹೂಗಾರ್ ಗದಗ, ಅಭಿಲಾಶ್ ಡಿ. ಮೈಸೂರು, ಜಿ.ಎಮ್.ಹೆಗ್ಡೆ ಶಿರಸಿ, ಚಿತ್ರ ಆಚಾರ್ಯ ಉಡುಪಿ, ಆಶಾರಾಣಿ ನಡೋಣಿ ಬೆಳಗಾವಿ, ರಶ್ಮಿ ಟಿ.ಎನ್.ಬೆಂಗಳೂರು ಭಾಗವಹಿಸುವ ಕಲಾವಿದರು.
Read more...

ಆಳ್ವಾಸ್ ನುಡಿಸಿರಿ - 2012 ರಾಷ್ಟ್ರೀಯ ಪ್ರಶಸ್ತಿ ಪ್ರಕಟ

ಕುಂದಾಪ್ರ ಡಾಟ್ ಕಾಂ, ಮಂಗಳೂರು: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ - 2012"ರ ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿಗೆ ಕನ್ನಡ ನಾಡು ನುಡಿಗೆ ಸೇವೆ ಸಲ್ಲಿಸಿದ ಒಂಭತ್ತು ಮಂದಿ ಗಣ್ಯರನ್ನು ಹಾಗೂ ಒಂದು ಸಂಸ್ಥೆಯನ್ನು ಆಯ್ಕೆ ಮಾಡಲಾಗಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಆಳ್ವ ಈ ವಿವರ ನೀಡಿದರು.
     ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಕ್ರೈಸ್ತ ಸಮುದಾಯ ನೀಡಿದ ಕೊಡುಗೆಗಾಗಿ ಅತಿ.ವಂದನೀಯ ಡಾ.ಅಲೋಶಿಯಸ್ ಪಾವ್ಲ್ ಡಿ’ಸೋಜ, ಧರ್ಮಾಧ್ಯಕ್ಷರು, ಮಂಗಳೂರು, ಕನ್ನಡ ಸಾಂಸ್ಕೃತಿಕ ಸೇವೆಗಾಗಿ ಶ್ರೀ ಶ್ರೀ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ  ಸಾಣೇಹಳ್ಳಿ, ಡಾ.ಸಿ.ಪಿ.ಕೃಷ್ಣ ಕುಮಾರ್ (ಸಾಹಿತ್ಯ ), ಗಿರೀಶ್ ಕಾಸರವಳ್ಳಿ (ಚಲನಚಿತ್ರ), ಡಾ.ಜಿ.ಸಿದ್ದಲಿಂಗಯ್ಯ (ಸಾಹಿತ್ಯ), ವೈಜಯಂತಿ ಕಾಶಿ( ನೃತ್ಯ ಮತ್ತು ಕಿರುತೆರೆ), ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ (ಯಕ್ಷಗಾನ) ಡಾ.ವಿಷ್ಣುನಾಯ್ಕ (ಸಾಹಿತ್ಯ), ಸುಭದ್ರಮ್ಮ ಮನ್ಸೂರು (ರಂಗಭೂಮಿ) ಮತ್ತು ಲೋಕ ಶಿಕ್ಷಣ ಟ್ರಸ್ಟ್ (ಪ್ರಕಾಶನ) ಇವರನ್ನು 2012ರ ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಪ್ರಶಸ್ತಿಗೆ  ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರುಪಾಯಿ ಹತ್ತುಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆ,  ಗೌರವ ಸನ್ಮಾನವನ್ನು ಒಳಗೊಂಡಿರುತ್ತದೆ.
      ನವೆಂಬರ್ 18 ರವಿವಾರ ಇಳಿಹಗಲು 3.30ರಿಂದ ನಡೆಯಲಿರುವ ಒಂಭತ್ತನೇ ವರುಷದ ಆಳ್ವಾಸ್ ನುಡಿಸಿರಿಯ ಸಮಾರೋಪ ಸಮಾರಂಭದಲ್ಲಿ ಸನ್ಮಾನ್ಯರ ಮೆರವಣಿಗೆ ಬಳಿಕ ನುಡಿಸಿರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ. ಹಿರಿಯ ಸಾಹಿತಿ ಡಾ.ಏರ್ಯ ಲಕ್ಷ್ಮೀನಾರಾಯಣ ಆಳ್ವ ಸಮಾರೋಪ ಭಾಷಣ ಮಾಡಲಿದ್ದು, ನಾಡೋಜ ಡಾ.ಕೆ.ಎಸ್.ನಿಸಾರ್ ಅಹಮದ್ ಅಧ್ಯಕ್ಷತೆ ವಹಿಸಲಿದ್ದಾರೆ.


      ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುಂಡಲೀಕ ಹಾಲಂಬಿ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಮೂಡಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ , ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾ ರ್ಣಿಕ್ ಅತಿಥಿಗಳಾಗಿ ಪಾಲ್ಗೊಳ್ಳುವರು. ಉದ್ಘಾಟನಾ ಸಮಾರಂಭಕ್ಕೆ ಮೊದಲು ಸಮ್ಮೇಳನಾಧ್ಯಕ್ಷರನ್ನೊಳಗೊಂಡಂತೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
       ಶತಾಯುಷಿ, ವಿದ್ವಾಂಸ ಪ್ರೊ.ಜಿ.ವೆಂಕಟ ಸುಬ್ಬಯ್ಯ  ಅವರಿಗೆ ವಿಶೇಷ ಗೌರವ ಸನ್ಮಾನ ಕಾರ್ಯಕ್ರಮ ನವಂಬರ 16 ರಂದು ಪೂರ್ವಾಹ್ನ 12 ರಿಂದ ನಡೆಯಲಿದೆ. ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು  ಶತಾಯುಷಿಗೆ ಗೌರವ ಸಮರ್ಪಿಸಲಿದ್ದಾರೆ. ಡಾ.ಪಿ.ವಿ. ನಾರಾಯಣ ಅವರು ಅಭಿವಂದನೆ ಭಾಷಣ ಮಾಡಲಿದ್ದಾರೆ.
ಕನ್ನಡ ಸಾಹಿತ್ಯಕ ಚಳವಳಿಗಳು, ಸಾಮುದಾಯಿಕ ಚಳವಳಿಗಳು, ಅಖಂಡ ಕರ್ನಾಟಕ  ಅಸ್ತಿತ್ವ – ಹೋರಾಟ, ಕಲೆ – ಮಾಧ್ಯಮ ಚಳವಳಿಗಳು ಎಂಬ ಪ್ರಮುಖ ನಾಲ್ಕು ಗೋಷ್ಠಿಗಳನ್ನು ಈ ಬಾರಿಯ ನುಡಿಸಿರಿಯಲ್ಲಿ ಆಯೋಜಿಸಲಾಗಿದೆ. ಇದಲ್ಲದೇ ಕಥಾ ಸಮಯ, ಕವಿಸಮಯ- ಕವಿನಮನ, ವಿಶೇಷೋಪನ್ಯಾಸ, ಮಾತಿನ ಮಂಟಪ ಮೊದಲಾದ ಹಲವು ಕಾರ್ಯಕ್ರಮಗಳಲ್ಲಿ ಕನ್ನಡದ ಪ್ರಸಿದ್ಧ ಸಾಹಿತಿಗಳು, ಚಿಂತಕರು ಭಾಗವಹಿಸಲಿದ್ದಾರೆ.

ಕುಂದಾಪ್ರ ಡಾಟ್ ಕಾಂ - editor@kundapra.com
Read more...

ನುಡಿಸಿರಿಯಲ್ಲಿ ಪಾಲ್ಗೋಳ್ಳೊಣ ಬನ್ನಿ ಸಾಹಿತ್ಯ - ಕಲಾಭಿಮಾನಿಗಳೇ...


        ಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯುತ್ತಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ "ಆಳ್ವಾಸ್ ನುಡಿಸಿರಿ"  ನವೆಂಬರ್ 16,17 ಮತ್ತು 18 ರಂದು ಕವಿ, ಸಾಹಿತಿ ಡಾ.ಕೆ.ಎಸ್.ನಿಸಾರ್ ಅಹಮದ್ ಸರ್ವಾಧ್ಯಕ್ಷತೆಯಲ್ಲಿ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ. ಕನ್ನಡ ಮನಸ್ಸು : ಜನಪರ ಚಳುವಳಿಗಳು ” ಎಂಬ ಪ್ರಮುಖ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು ಈ ಬಾರಿಯ ಆಳ್ವಾಸ್ ನುಡಿಸಿರಿ ಮೂಡಿಬರಲಿದೆ.
    ಉದ್ಘಾಟನೆಯನ್ನು ನಾಡಿನ ಹಿರಿಯ ಸಾಹಿತಿ ಡಾ.ಯು.ಆರ್.ಅನಂತ ಮೂರ್ತಿ ನಡೆಸಿಕೊಡಲಿದ್ದಾರೆ.  ಮೂರು ವಿಶೇಷ ಉಪನ್ಯಾಸಗಳು, ನಾಲ್ಕು ಕಥಾ ಸಮಯ, 9 ಕವಿಸಮಯ ಕವಿನಮನ, 3 ಸಂಸ್ಮರಣಾ ಗೋಷ್ಠಿಗಳು, ಹತ್ತು ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ, ವಿಶೇಷ ಸನ್ಮಾನ ಕಾರ್ಯಕ್ರಮ, ಸಮಾನಾಂತರ ವೇದಿಕೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ನವೆಂಬರ್ 16ರಂದು ಸಮ್ಮೇಳನಾಧ್ಯಕ್ಷರ ಮೆರವಣಿಗೆಯೊಂದಿಗೆ ಉದ್ಘಾಟನೆ ನಡೆಯಲಿದೆ.

 ಸಾಂಸ್ಕೃತಿಕ ವೈಭವ
       ಪಶ್ಚಿಮ ಬಂಗಾಳದ ಪುರುಲಿಯಾ ಸಿಂಹ ನೃತ್ಯ, ದೇವ ವೃದ್ಧರು ಎಂಬ ಕಿರು ನಾಟಕ, ಭರತ ನಾಟ್ಯ – ನವಗ್ರಹ, ಮೋಹಿನಿ ಆಟ್ಟಂ, ಕಥಕ್ ನೃತ್ಯ, ಆಂಧ್ರದ ಜನಪದ ಬಂಜಾರ ನೃತ್ಯ, ಮಹಿಳಾ ಕಂಸಾಳೆ, ಮಿಮಿಕ್ರಿ, ಮಣಿಪುರಿ ಶಾಸ್ತ್ರೀಯ ನೃತ್ಯ ‘ರಾಸಲೀಲ’ ಮತ್ತು ಜನಪದ ನೃತ್ಯ, ಮಣಿಪುರಿ ಸ್ಟಿಕ್ ಡ್ಯಾನ್ಸ್, ಮಣಿಪುರಿ ಡೋಲ್ ಚಲಮ್, ಮಣಿಪುರಿ ಮಾರ್ಷಲ್ ಆರ್ಟ್ಸ್ , ಮಹಾರಾಷ್ಟ್ರದ ಲಾವಣಿ ನೃತ್ಯ, ಬಡಗುತಿಟ್ಟು ಯಕ್ಷಗಾನದ – ‘ಶೃಂಗಾರ ವೈಭವ’, ತೆಂಕುತಿಟ್ಟು ಯಕ್ಷಗಾನದ – ‘ ಹನುಮ ಒಡ್ಡೋಲಗ ‘, ಶ್ರೀಲಂಕಾದ ನವಿಲು ನೃತ್ಯ, ಜನಪದ ವಾದ್ಯ ಝೇಂಕಾರ, ಮಾತನಾಡುವ ಗೊಂಬೆ ಮತ್ತು ಶ್ಯಾಡೋ ಪ್ಲೇ ಪ್ರದರ್ಶನಗೊಳ್ಳಲಿದೆ. ಸುಮಾರು ಮೂರೂವರೆ ಗಂಟೆಗಳ ಕಾಲ ನಡೆಯಲಿರುವ ಈ ಸಾಂಸ್ಕೃತಿಕ ವೈಭವ ನೋಡುಗರನ್ನು ನಿಬ್ಬೆರಗಾಗಿಸುವುದರಲ್ಲಿ ಸಂದೇಹವಿಲ್ಲ. ಈ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.

ಶತಾಯುಷಿಗೆ ವಿಶೇಷ ಗೌರವ: 
      ಕನ್ನಡ ನಾಡು ನುಡಿಗೆ ವಿಶೇಷ ಸೇವೆ ಸಲ್ಲಿಸಿರುವ, ವಿದ್ವಾಂಸ ನಿಘಂಟು ಶಾಸ್ತ್ರ, ಪ್ರಾಚೀನ ಸಾಹಿತ್ಯಾಧ್ಯಯನದಲ್ಲಿ ಸಾಧನೆ ಮೆರೆದ ಶತಾಯುಷಿ ಪ್ರೊ.ಜಿ.ವೆಂಕಟ ಸುಬ್ಬಯ್ಯ ಅವರನ್ನು ಉದ್ಘಾಟನಾ ಸಮಾರಂಭದಲ್ಲಿ ವಿಶೇಷ ರೀತಿಯಲ್ಲಿ ಗೌರವಿಸಿ ಸನ್ಮಾನಿಸಲಾಗುವುದು. 2007ರಲ್ಲಿ ನಡೆದ ನಾಲ್ಕನೇ ವರುಷದ ಆಳ್ವಾಸ್ ನುಡಿಸಿರಿಯ ಸವರ್ಾಧ್ಯಕ್ಷತೆಯನ್ನು ವೆಂಕಟ ಸುಬ್ಬಯ್ಯರವರು ವಹಿಸಿದ್ದರು

ದಶಕದ ಸಂಭ್ರಮ:
        ಮುಂದಿನ ವರುಷ ಆಳ್ವಾಸ್ ನುಡಿಸಿರಿಗೆ ದಶಕದ ಸಂಭ್ರಮ. ಈ ಹಿನ್ನಲೆಯಲ್ಲಿ ಈ ಬಾರಿಯ ಆಳ್ವಾಸ್ ನುಡಿಸಿರಿ ಅತ್ಯಂತ ಮಹತ್ವಪೂರ್ಣವಾಗಿದೆ. ದಶಕದ ಸಂಭ್ರಮದ ನುಡಿಸಿರಿಯನ್ನು ವಿಶ್ವಮಟ್ಟದಲ್ಲಿ ನಡೆಸಲುದ್ದೇಶಿಸಲಾಗಿದ್ದು, ಅದರ ಪೂರ್ವಭಾವಿಯಾಗಿ ಈ ಬಾರಿಯ ನುಡಿಸಿರಿಯಿಂದಲೇ ಕೆಲಸ ಕಾರ್ಯಗಳು ಆರಂಭಗೊಳ್ಳಲಿದೆ. ಈಗಾಗಲೇ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ  ತುಮುಕೂರು, ಮೈಸೂರು, ಧಾರಾವಾಡ,ಚಿಕ್ಕಮಗಳೂರು, ಮಂಡ್ಯ,ತೀರ್ಥಹಳ್ಳಿ,ಮಂಗಳೂರು, ಕುಂದಾಪುರ, ಪುತ್ತೂರು,ಬಂಟ್ವಾಳ, ಬೆಳ್ತಂಗಡಿ, ಭಾಗಗಳಲ್ಲಿ ಆಳ್ವಾಸ್ ನುಡಿಸಿರಿ ಘಟಕಗಳನ್ನು ರಚಿಸಿ ಆ ಮೂಲಕ ಜನತೆಯಲ್ಲಿ ನುಡಿಸಿರಿಯ ಸ್ಪಷ್ಟ ಕಲ್ಪನೆ ಮೂಡುವಂತಹ ಕಾರ್ಯಕ್ರಮ ರೂಪಿಸಲಾಗಿದೆ.

 ಪ್ರತಿನಿಧಿಗಳಾಗಿ ಬನ್ನಿ
       ಯುವ ಜನತೆಯಲ್ಲಿ, ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬಗೆಗಿನ ಆಸಕ್ತಿ ಮೂಡಿಸುವಂತಹ ಕಾರ್ಯಗಳನ್ನು ಮಾಡುವ ಸದುದ್ದೇಶದಿಂದ ಈ ಬಾರಿಯೂ ವಿದ್ಯಾರ್ಥಿ ಪ್ರತಿನಿಧಿಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ. ನಾಡು, ಹೊರನಾಡು, ಹೊರ ರಾಜ್ಯಗಳಿಂದ ಆಳ್ವಾಸ್ ನುಡಿಸಿರಿಗೆ ಪ್ರತಿನಿಧಿಗಳಾಗಿ ಸಾಹಿತ್ಯಾಸಕ್ತರು ಆಗಮಿಸಬೇಕು. ಪ್ರತಿನಿಧಿಗಳಾಗುವವರು ರು.100ನ್ನು ಕಾರ್ಯಾಧ್ಯಕ್ಷರು, ಆಳ್ವಾಸ್ ನುಡಿಸಿರಿ ಹೆಸರಿನಲ್ಲಿ ಎಂ.ಒ, ಡಿ.ಡಿ. ಮೂಲಕ ಸಲ್ಲಿಸಬಹುದು. ಪ್ರತಿನಿಧಿಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ವಿದ್ಯಾರ್ಥಿಗಳು ತಮ್ಮ ಮನೆ ವಿಳಾಸ, ದೂರವಾಣಿ ಸಂಖ್ಯೆ ಸಹಿತ ಶಾಲೆಯ ಮೂಲಕ ಅರ್ಜಿ ಸಲ್ಲಿಸಬೇಕು. ತಮ್ಮ ಸಂಸ್ಥೆ ನೀಡಿದ ಗುರುತು ಚೀಟಿಯ ಜತೆಗೆ ಮೂರೂ ದಿನಗಳಲ್ಲೂ ಸಮ್ಮೇಳನದ ಕ್ಯಾಂಪಸ್‌ನಲ್ಲಿರಬೇಕು. ಉಚಿತ ವಸತಿ ಮತ್ತು ಊಟೋಪಚಾರವಿದೆ. ಅಶಿಸ್ತಿಗೆ ಅವಕಾಶವಿಲ್ಲ. ಸಮ್ಮೇಳನದ ಕುರಿತು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ; ವಿಜೇತರಿಗೆ ಬಹುಮಾನವಿದೆ. ಭಾಗವಹಿಸಿದವರಿಗೆ ಪ್ರಮಾಣ ಪತ್ರ ನೀಡಲಾಗುವುದು (ವಿವರಗಳಿಗೆ 08258-238104ರಿಂದ 238111, ಫ್ಯಾಕ್ಸ್‌: 08258-261229 )ಎಂದು ಸಂಸ್ಥೆಯ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ನ ಮಾಧ್ಯಮ ಸಂಪರ್ಕಾಧಿಕಾರಿ ಹರೀಶ್ ಕೆ.ಆದೂರು, ಉಪನ್ಯಾಸಕರುಗಳಾದ ಡಾ.ಧನಂಜಯ ಕುಂಬ್ಳೆ, ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು.  
Read more...