ಮೂಡುಬಿದಿರೆ : ಇಂದು ಅಪರಾಹ್ನ 3.30ರಿಂದ ನಡೆಯುವ ಸಮಾರೋಪ ಸಮಾರಂಭದಲ್ಲಿ ರೈ|ರೆ| ಡಾ| ಅಲೋಶಿಯಸ್ ಪಾವ್É ಡಿ'ಸೋಜಾ, ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಡಾ| ಸಿ.ಪಿ. ಕೃಷ್ಣ ಕುಮಾರ್, ಗಿರೀಶ್ ಕಾಸರವಳ್ಳಿ, ಡಾ| ಸಿದ್ಧಲಿಂಗಯ್ಯ, ವೈಜಯಂತಿ ಕಾಶಿ, ಪದ್ಮಶ್ರೀ ರಾಮಚಂದ್ರ ಹೆಗಡೆ ಚಿಟ್ಟಾಣಿ, ಡಾ| ವಿಷ್ಣು ನಾಯ್ಕ ಅಂಕೋಲಾ, ಸುಭದ್ರಮ್ಮ ಮನ್ಸೂರು ಅವರಿಗೆ ಹಾಗೂ 'ಲೋಕ ಶಿಕ್ಷಣ ಟ್ರಸ್ಟ್ ಬೆಂಗಳೂರು - ಹುಬ್ಬಳ್ಳಿ' ಸಂಸ್ಥೆಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಡಾ| ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಅವರು ಸಮಾರೋಪ ಭಾಷಣ ಮಾಡುವರು.
ಸಾಂಸ್ಕೃತಿಕ : ಹಗಲಿನ ಬಿಡುವೇಳೆಯಲ್ಲಿ ಆಳ್ವಾಸ್ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಲಾಪಗಳಿರುತ್ತವೆ.
ಉಡುಪಿ ಕೊಡವೂರು ನೃತ್ಯ ನಿಕೇತನದವರಿಂದ ನಂದಗೋಕುಲ -ನೃತ್ಯ ರೂಪಕ, ನಾಟ್ಯ ನಿಲಯಂ ಮಂಜೇಶ್ವರ ಅವರಿಂದ ನಾಟ್ಯ ಸಮ್ಮೊàಹನಂ, 2.ಬಿ.ಆರ್. ಛಾಯಾ ಬಳಗದವರಿಂದ ಸುಗಮ ಸಂಗೀತ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದವರಿಂದ ಜೀವನ್‌ರಾಂ ಸುಳ್ಯ ನಿರ್ದೇಶನದಲ್ಲಿ ಭಾಸನ ದೂತ ವಾಕ್ಯ ಏಕಾಂಕ ನಾಟಕ, ಮಂಡ್ಯ ರಮೇಶ ನಿರ್ದೇಶನದಲ್ಲಿ ಚೋರ ಚರಣದಾಸ ನಾಟಕ, 3.ಕಲಾನಿಕೇತನ ಬೆಳ್ತಂಗಡಿ ಇವರಿಂದ ಭರತನಾಟ್ಯ, ಪಂಚಭೂತ ನೃತ್ಯ ರೂಪಕ, ಕಾರ್ಕಳದ ಶ್ರೀ ನೃತ್ಯಾಲಯದಿಂದ ಭರತನೃತ್ಯ, 4.ಸಂಜನಾ ವಿ. ಮರಾಠೆ- ಅರ್ಚನಾ ವಿ. ಮರಾಠೆ ಸಹೋದರಿಯರಿಂದ ಶಾಸ್ತ್ರೀಯ ಸಂಗೀತ, ಗದಗ್‌ನ ಸಮರ್ಥ ಡಿ. ದೇಸಾಯಿ ಅವರಿಂದ ಹಿಂದೂಸ್ತಾನಿ ಗಿಟಾರ್ ವಾದನ, ಬೆಂಗಳೂರು ಸಂಗೀತ ಪನೀಶ್ ಅವರಿಂದ ಕೂಚಿಪುಡಿ, 5. ಶಾಂತೇರಿ ಕಾಮತ್ ತೀರ್ಥಹಳ್ಳಿ ಅವರಿಂದ ವಚನ ಗಾಯನ, ಉಪ್ಪಿನ ಕುದ್ರು ಶ್ರೀ ಗಣೇಶ ಯಕ್ಷಗಾನ ಬೊಂಬೆಯಾಟ ಮಂಡಳಿಯಿಂದ ಗೊಂಬೆಯಾಟ ಕಾರ್ಯಕ್ರಮ.
.jpg)

