ವಿದ್ಯಾಗಿರಿಯಲ್ಲಿ ಭರದಿಂದ ಸಾಗುತ್ತಿದೆ ಕೊನೆ ಕ್ಷಣದ ತಯಾರಿ

ಕುಂದಾಪ್ರ ಡಾಟ್ ಕಾಂ; ವಿದ್ಯಾಗಿರಿ: ನಾಡು-ನುಡಿಯ ರಾಷ್ಟೀಯ ಸಮ್ಮೇಳನ  ''ಆಳ್ವಾಸ್ ನುಡಿಸಿರಿ'' ನಾಳೆಯಿಂದ ಆರಂಭಗೊಳ್ಳಲಿದ್ದು ಸಿದ್ದತೆಗಳು ಭರದಿಂದ ಸಾಗಿವೆ. ಸಾಹಿತ್ಯಾಸಕ್ತರಿಗೆ  ಸಾಲು ಸಾಲು ಸೂರ್ಯನ ಮುಖಗಳು, ಆನೆಯ ಪ್ರತಿಮೆಗಳು, ನಾಟ್ಯ ಗಣಪ- ಯಕ್ಷಗಾನದ ಪ್ರತೀಮೆಗಳು ಸ್ವಾಗತವನ್ನು ಕೋರಲು ತಯಾರಾಗುತ್ತಿದ್ದಿರೇ, ಬೃಹತ್ ವೇದಿಕೆ ಗೂಡು ದೀಪಗಳು, ಕಲಾಕೃತಿಗಳಿಂದ ಸಿಂಗಾರಗೊಳ್ಳುತ್ತಿದೆ. ಜಗಮಗಿಸುವ ವಿದ್ಯುದಲಂಕಾರ, ಕಾರಂಜಿ ಕಣ್ಮನ ಸೆಳೆಯುತ್ತಿವೆ. 

ಎಲ್ಲೆಲ್ಲೂ ಕನ್ನಡದ ಬಾವುಟ ಹಾರಾಡುತ್ತಿದೆ, ಕವಿಸಾಲುಗಳು ಕೈಬೀಸಿ ಕರೆಯುತ್ತಿದೆ. ಕೊಠಡಿಗಳಲ್ಲಿ ಸಾಲುಗಟ್ಟುತ್ತಿದ್ದ ಪುದ್ತಕದಂಗಡಿ, ವಿದ್ಯಾರ್ಥಿಗಳ ರಿಹರ್ಸಲ್, ಕ್ಯಾಂಪಸ್ ನಲ್ಲಿ ಕೊನೆ ಕ್ಷಣದ ಅಂಲಂಕಾರಗಳು ನಡೆಯುತ್ತಿವೆ.