Showing posts with label ಚಿತ್ರಸಿರಿ. Show all posts
Showing posts with label ಚಿತ್ರಸಿರಿ. Show all posts

‘ಚಿತ್ರಸಿರಿ’ ಸಮಾರೋಪ: ಪ್ರಶಸ್ತಿ ಪ್ರದಾನ


ಮೂಡುಬಿದಿರೆ: ಕಳೆದ ಮೂರು ದಿನಗಳಿಂದ ವಿದ್ಯಾಗಿರಿ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯುತ್ತಿದ್ದ ‘ಆಳ್ವಾಸ್ ಚಿತ್ರಸಿರಿ’ಯ ಸಮಾರೋಪ ಸಮಾರಂಭ ಶನಿವಾರ ನಡೆಯಿತು. ಈ ಸಂದರ್ಭ ಮೈಸೂರು ಲಲಿತಕಲಾ ಮಹಾ ಸಂಸ್ಥಾನದ ಡಿಎಂಎಸ್ ಪ್ರೊ. ಬಿ.ವಿ.ಹಿರೇಗೌಡರ್‌ಗೆ ಆರನೆ ವರ್ಷದ ‘ಆಳ್ವಾಸ್ ಚಿತ್ರಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
     ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಕರ್ನಾಟಕ ಲಲಿತಕಲಾ ಅಕಾಡಮಿಯ ಅಧ್ಯಕ್ಷ ಚಿ.ಸು ಕೃಷ್ಣ ಸೆಟ್ಟಿ, ಸಾಹಿತ್ಯಕ್ಕೆ ಸಿಗುವಷ್ಟು ಮಾನ್ಯತೆಯು ಇಂದು ಕಲಾ ಮಾಧ್ಯಮಕ್ಕೆ ಸಿಗುತ್ತಿಲ್ಲ. ಕಲೆಯ ಬಗ್ಗೆ ಅಜ್ಞಾನವೇ ಹೆಚ್ಚಿದೆ. ಕಲೆಯ ಶಕ್ತಿಯನ್ನು ಅರ್ಥೈಸಿಕೊಳ್ಳದಿದ್ದರೆ ಸಮಾಜದ ಪರಿವರ್ತನೆ ಸಾಧ್ಯವಿಲ್ಲ ಎಂದು ಹೇಳಿದರು.
     ನಮ್ಮ ಭಾವನೆಗಳನ್ನು ಅಭಿವ್ಯಕ್ತ ಪಡಿಸುವಾಗ ನಕಾರತ್ಮಕ ಅಂಶಗಳೇ ಹೆಚ್ಚಾಗುತ್ತದೆ. ಇದು ಸರಿಯಲ್ಲ ಅದರ ಬದಲು ಬದುಕನ್ನು ಸಂಭ್ರಮಿಸಬೇಕು ಎಂದರು.
      ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರೊ. ಹಿರೇಗೌಡರ್, ಬದುಕಿನಲ್ಲಿರುವ ಹಲವು ನೋವುಗಳನ್ನು ಬದಿಗೊತ್ತಿ ನಾನು ಆಯ್ದುಕೊಂಡ ಕ್ಷೇತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಲೆಯಲ್ಲಿ ತೊಡಗಿದ್ದೇನೆಯೇ ವಿನಹ ಇದು ಹಣಗಳಿಸಲು ಅಲ್ಲ. ನನಗೆ ಬಂದ ಪ್ರಶಸ್ತಿ ಎಲ್ಲಾ ಸಾಧಕ ಕಲಾವಿದರಿಗೆ ಸಂದ ಪ್ರಶಸ್ತಿ ಎಂದರು.
     ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಲಲಿತಕಲಾ ಅಕಾಡಮಿಯ ಸದಸ್ಯ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು.
ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಸನ್ಮಾನಿತರನ್ನು ಪರಿಚಯಿಸಿದರು. ಭಾಸ್ಕರ್ ನೆಲ್ಯಾಡಿ ಸ್ವಾಗತಿಸಿದರು. ಗುರುಪ್ರಸಾದ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
Read more...

ಆಳ್ವಾಸ್ ಚಿತ್ರಸಿರಿಗೆ ಚಾಲನೆ

ಆಳ್ವಾಸ್ ನುಡಿಸಿರಿಗೆ ಪೂರ್ವಭಾವಿಯಾಗಿ ಆಳ್ವಾಸ್ ಚಿತ್ರಸಿರಿ ರಾಜ್ಯಮಟ್ಟದ ಚಿತ್ರಕಲಾ ಶಿಬಿರವನ್ನು ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಮೂಡಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು. ಡಾ.ಎಂ.ಮೋಹನ ಆಳ್ವ ಅಧ್ಯಕ್ಷತೆ ವಹಿಸಿದ್ದರು. ರಾಜೇಂದ್ರ ಕೇದಿಗೆ, ಕ್ಯಾ.ಗಣೇಶ್ ಕಾರ್ಣಿಕ್ ಉಪಸ್ಥಿತರಿದ್ದರು.
Read more...

ಆಳ್ವಾಸ್ ಚಿತ್ರಸಿರಿ ಪ್ರಶಸ್ತಿಗೆ ವಿ.ಬಿ.ಹಿರೇಗೌಡರ್ ಆಯ್ಕೆ

ಆಳ್ವಾಸ್ ಚಿತ್ರಸಿರಿ ರಾಜ್ಯ ಪ್ರಶಸ್ತಿಗೆ ದಾವಣಗೆರೆಯ ವಿ.ಬಿ.ಹಿರೇಗೌಡರ್ ಅವರನ್ನು ಆಯ್ಕೆಮಾಡಲಾಗಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ. ಪ್ರೊ.ವಿ.ಬಿ.ಹಿರೇಗೌಡರ್ ದಾವಣಗೆರೆ ವಿಶ್ವವಿದ್ಯಾಲಯ ಲಲಿತಕಲಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರು. ಚಿತ್ರಕಲಾ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಯನ್ನು ಗುರುತಿಸಿ ಈ ಬಾರಿಯ ಪ್ರಶಸ್ತಿಗೆ ಇವರನ್ನು ಆಯ್ಕೆಮಾಡಲಾಗಿದೆ. ಆಳ್ವಾಸ್ ನುಡಿಸಿರಿಗೆ ಪೂರ್ವಭಾವಿಯಾಗಿ ಆಳ್ವಾಸ್ ಚಿತ್ರಸಿರಿ 2012 ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಮತ್ತು ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ನವೆಂಬರ್ 8ರಿಂದ 11ರ ತನಕ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.
     ಚಿತ್ರಸಿರಿ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನ.11ರಂದು ಬೆಳಗ್ಗೆ 9.30ಕ್ಕೆ ನಡೆಯಲಿದೆ. ಪ್ರಶಸ್ತಿ ಪ್ರದಾನವನ್ನು ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣ ಸೆಟ್ಟಿ ನೆರವೇರಿಸುವರು. ನವೆಂಬರ್ 8ರಂದು ಬೆಳಗ್ಗೆ 10.15ಕ್ಕೆ ಮೂಡಬಿದಿರೆ ಜೈನ ಮಠದ ಶ್ರೀಶ್ರೀಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ದ.ಕ.ಜಿಲ್ಲಾ ಸಂಚಾಲಕ ರಾಜೇಂದ್ರ ಕೇದಿಗೆ ಉಪಸ್ಥಿತರಿರುವರು.

ಚಿತ್ರಸಿರಿಯಲ್ಲಿ ಪಾಲ್ಗೊಳ್ಳುವ 
ರಾಜ್ಯದ ಕಲಾವಿದರು
      ಚಂದ್ರಕಾಂತ ಬಾಗಲಕೋಟೆ, ಜೀವನ್ ಎ.ಎಸ್.ಮಂಗಳೂರು, ಪರಮೇಶ್ ಡಿ.ಜೋಲದ್, ಬಾಗಲಕೋಟೆ, ಹರೀಶ್ ಸಾಗಾ,ಕುಂದಾಪುರ, ಬಿ.ವಿ.ಕಾಮಾಜಿ, ಗುಲಬರ್ಗಾ, ದೇವೇಂದ್ರ ಎಮ್ ಬಡಿಗೇರ್ ಧಾರಾವಾಡ, ಶಹೆದ್ ಪಾಷಾ ಗುಲಬರ್ಗಾ, ವಿಶ್ವಕರ್ಮ ಆಚಾರ್, ಚಿಕ್ಕಮಗಳೂರು, ನಾಗರಾಜ್ ಕೆ.ಟಿ. ಮಂಗಳೂರು, ನವೀನ್ ಕುಮಾರ್ ಎ ಬೆಂಗಳೂರು, ಹರಿಪ್ರಸಾದ್ ಬಿ.ಎನ್.ತುಮಕೂರು, ಈರಣ್ಣ ದಂಡಿನ್ ಕೋಲಾರ, ಬಸವರಾಜ್ ಗವಿಮಠ್ ಬಾಗಲಕೋಟೆ, ಸಿ.ಡಿ.ಜಟ್ಟಣವರ್ ಹುಬ್ಬಳ್ಳಿ, ಶಿವಾನಂದ ಎಸ್. ಹೂಗಾರ್ ಗದಗ, ಅಭಿಲಾಶ್ ಡಿ. ಮೈಸೂರು, ಜಿ.ಎಮ್.ಹೆಗ್ಡೆ ಶಿರಸಿ, ಚಿತ್ರ ಆಚಾರ್ಯ ಉಡುಪಿ, ಆಶಾರಾಣಿ ನಡೋಣಿ ಬೆಳಗಾವಿ, ರಶ್ಮಿ ಟಿ.ಎನ್.ಬೆಂಗಳೂರು ಭಾಗವಹಿಸುವ ಕಲಾವಿದರು.
Read more...

ನವೆಂಬರ್ 8- 11 ಚಿತ್ರಸಿರಿ


      ಆಳ್ವಾಸ್ ನುಡಿಸಿರಿಗೆ ಪೂರ್ವಭಾವಿಯಾಗಿ ಆಳ್ವಾಸ್ ಚಿತ್ರಸಿರಿ 2012 ರಾಜ್ಯಮಟ್ಟದ ಚಿತ್ರಕಲಾ ಶಿಬಿರ ಮತ್ತು ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನ ನವೆಂಬರ್ 8ರಿಂದ 11ರ ತನಕ ಮೂಡಬಿದಿರೆ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆಯಲಿದೆ.
        ನವೆಂಬರ್ 8ರಂದು ಬೆಳಗ್ಗೆ 10.15ಕ್ಕೆ ಸರಿಯಾಗಿ ಮೂಡಬಿದಿರೆ ಜೈನ ಮಠದ ಶ್ರೀಶ್ರೀಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಉದ್ಘಾಟಿಸುವರು. ಅಧ್ಯಕ್ಷತೆಯನ್ನು ಆಳ್ವಾಸ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ವಹಿಸಲಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ದ.ಕ.ಜಿಲ್ಲಾ ಸಂಚಾಲಕ ರಾಜೇಂದ್ರ ಕೇದಿಗೆ ಉಪಸ್ಥಿತರಿರುವರು. ಒಟ್ಟು 20 ಮಂದಿ ರಾಜ್ಯದ ಕಲಾವಿದರು ಈ ಶಿಬಿರದಲ್ಲಿ ಪಾಲ್ಗೊಳ್ಳುವರು. ಚಂದ್ರಕಾಂತ ಬಾಗಲಕೋಟೆ, ಜೀವನ್ ಎ.ಎಸ್.ಮಂಗಳೂರು, ಪರಮೇಶ್ ಡಿ.ಜೋಲದ್, ಬಾಗಲಕೋಟೆ, ಹರೀಶ್ ಸಾಗಾ,ಕುಂದಾಪುರ, ಬಿ.ವಿ.ಕಾಮಾಜಿ, ಗುಲಬರ್ಗಾ, ದೇವೇಂದ್ರ ಎಮ್ ಬಡಿಗೇರ್ ಧಾರಾವಾಡ, ಶಹೆದ್ ಪಾಷಾ ಗುಲಬರ್ಗಾ, ವಿಶ್ವಕರ್ಮ ಆಚಾರ್, ಚಿಕ್ಕಮಗಳೂರು, ನಾಗರಾಜ್ ಕೆ.ಟಿ. ಮಂಗಳೂರು, ನವೀನ್ ಕುಮಾರ್ ಎ ಬೆಂಗಳೂರು, ಹರಿಪ್ರಸಾದ್ ಬಿ.ಎನ್.ತುಮಕೂರು, ಈರಣ್ಣ ದಂಡಿನ್ ಕೋಲಾರ, ಬಸವರಾಜ್ ಗವಿಮಠ್ ಬಾಗಲಕೋಟೆ, ಸಿ.ಡಿ.ಜಟ್ಟಣವರ್ ಹುಬ್ಬಳ್ಳಿ, ಶಿವಾನಂದ ಎಸ್.ಹೂಗಾರ್ ಗದಗ, ಅಭಿಲಾಶ್ ಡಿ. ಮೈಸೂರು, ಜಿ.ಎಮ್.ಹೆಗ್ಡೆ ಶಿರಸಿ, ಚಿತ್ರ ಆಚಾರ್ಯ ಉಡುಪಿ, ಆಶಾರಾಣಿ ನಡೋಣಿ ಬೆಳಗಾವಿ, ರಶ್ಮಿ ಟಿ.ಎನ್.ಬೆಂಗಳೂರು ಭಾಗವಹಿಸುವ ಕಲಾವಿದರು.
Read more...