Showing posts with label ರತ್ನಾಕರವರ್ಣಿ ವೇದಿಕೆ. Show all posts
Showing posts with label ರತ್ನಾಕರವರ್ಣಿ ವೇದಿಕೆ. Show all posts

15ರಂದು ಆಳ್ವಾಸ್ ನುಡಿಸಿರಿಯಲ್ಲಿ ’ಕೊಂಕಣಿ ಸಿರಿ’

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನ.14ರಿಂದ 16ರ ವರೆಗೆ ವಿದ್ಯಾಗಿರಿಯಲ್ಲಿ ನಡೆಯಲಿರುವ 'ಆಳ್ವಾಸ್ ನುಡಿಸಿರಿ-2014'ಕ್ಕೆ ಪೂರಕವಾಗಿ ಆಳ್ವಾಸ್ ಕೊಂಕಣಿ ಸಿರಿ- 2014 ನ.15ರಂದು ವಿದ್ಯಾಗಿರಿಯಲ್ಲಿ ನಡೆಯಲಿದೆ. 

ನ.15 ರ ಸಂಜೆ 5.30ರಿಂದ 10.30ರವರೆಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆಯಲಿರುವ ಈ ಆಳ್ವಾಸ್ ಕೊಂಕಣಿ ಸಿರಿ ನಡೆಯುವ ವೇದಿಕೆಗೆ ವಿಲ್ಫಿ ರೆಬಿಂಬಸ್ ವೇದಿಕೆ ಎಂದು ಹೆಸರಿಸಲಾಗಿದ್ದು ಬಿ.ವಿ.ಬಾಳಿಗಾ ದ್ವಾರದ ಟಿ.ಎಂ.ಎ.ಪೈ ಸಭಾಂಗಣದಲ್ಲಿ ಕೊಂಕಣಿ ಸಿರಿ ಮೂಡಿ ಬರಲಿದೆ. 

ಸಂಜೆ 5.30ರಿಂದ ಮೂಡುಬಿದಿರೆಯ ನೂರು ಗಾಯಕರಿಂದ ಸ್ವಾಗತಗೀತೆಯೊಂದಿಗೆ ಆರಂಭವಾಗುವ ಕೊಂಕಣಿ ಸಿರಿಯನ್ನು ಮಂಗಳೂರಿನ ಬಿಷಪ್ ಅತೀ ವಂದನೀಯ ಅಲೋಶಿಯಸ್ ಪಾವ್ಲ್ ಡಿಸೋಜ ಉದ್ಘಾಟಿಸಲಿದ್ದಾರೆ. ಕೊಂಕಣಿ ಭಾಷೆ ಮತ್ತು ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ರೋಯ್ ಕ್ಯಾಸ್ತೆಲಿನೋ ಮುಖ್ಯ ಅತಿಥಿಯಾಗಿ ಹಾಗೂ ಅತಿಥಿಗಳಾಗಿ ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೋ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷರಾದ ಎರಿಕ್ ಒಝಾರಿಯೋ, ಕಾಸರಗೋಡು ಚಿನ್ನಾ, ಕುಡುಬಿ ಸಮಾಜ ಸಂಘದ ರಾಜ್ಯಾಧ್ಯಕ್ಷ ಎಂ.ರಾಮ ಗೌಡ, ಮೂಡುಬಿದಿರೆಯ ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಭಾಗವಹಿಸಲಿದ್ದಾರೆ. 

ಮಂಗಳೂರಿನ ಮಾಂಡ್ ಸೊಭಾಣ್, ವಿಶ್ವ ಕೊಂಕಣಿ ಕೇಂದ್ರ ಶಕ್ತಿನಗರ, ಭಟ್ಕಳದ ಅಂಜುಮಾನ್ - ಇ-ರಹಮ್ಮಾನಿಯಾ ಅಹಮ್ಮದೀಯ ಸುನ್ನಿ ಟ್ರಸ್ಟ್, ಯಕ್ಷಗಾನ ಕಲಾವಿದ ಮಿಜಾರು ಅಣ್ಣಪ್ಪ, ಗಿನ್ನೆಸ್ ದಾಖಲೆಯ ಈಜುಗಾರ ಗೋಪಾಲ ಖಾರ್ವಿ ಅವರಿಗೆ ಸಮ್ಮಾನ ಕಾರ್ಯಕ್ರಮವಿದೆ. 

ಬಳಿಕ ಕೊಂಕಣಿ ನಿನ್ನೆ ಇಂದು ಮತ್ತು ನಾಳೆ ಪರಿಕಲ್ಪನೆಯಲ್ಲಿ ಕೊಂಕಣಿ ಕಲೆ ಮತ್ತು ಸಂಸ್ಕೃತಿ ಕುರಿತು ಪ್ರೊ. ಜಯವಂತ ನಾಯಕ್, ಕೊಂಕಣಿ ಭಾಷೆ ಮತ್ತು ಸಾಹಿತ್ಯದ ಕುರಿತು ಪ್ರೊ. ವಿನ್ಸೆಂಟ್ ಆಳ್ವ ಪಾಂಬೂರು ಅವರಿಂದ ಉಪನ್ಯಾಸ ನಡೆಯಲಿದೆ. 

ಸಂಜೆ 7ರಿಂದ 10.30ರವರೆಗೆ ನಡೆಯಲಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಎಡಪದವಿನ ಕುಡ್ಮಿ ಜಾನಪದ ಕಲಾವೇದಿಕೆಯಿಂದ ಕುಡ್ಮಿ ಗುಮ್ಟಾಂ ತ್ತು ಕೋಲಾಟ, ಭಟ್ಕಳದ ಖಾರ್ವಿ ಕಲಾಮಾಂಡ್ ವತಿಯಿಂದ ಖಾರ್ವಿ ಕಲಾ ಪ್ರದರ್ಶನ, ಮುಂಡಗೋಡದ ಸಿದ್ಧಿ ಕಲಾತಂಡದಿಂದ ಸಿದ್ಧಿ ಕಲಾ ಪ್ರದರ್ಶನ, ಶೀರೂರಿನ ನಾಕುದಾ ದಫ್ ಸಮಿತಿ ವತಿಯಿಂದ ದಾಲ್ದಿ-ದಫ್, ಕೊಂಕಣಿ ಸಾಂಸ್ಕೃತಿಕ ಸಂಘದಿಂಧ ಜಿ.ಎಸ್.ಬಿ. ಸಾಂಸ್ಕೃತಿಕ ಪ್ರದರ್ಶನ, ಕೊಂಕ್ಣಿ ಮ್ಹಜೊ ಫುಡಾರ್ -ಕಲಾಕುಲ್ ತಂಡದಿಂದ ಬೀದಿ ನಾಟಕ, ಮಂಗಳೂರಿನ ನಾಚ್ ಸೊಭಾಣ್ ವತಿಯಿಂದ ಕೊಂಕಣಿ ನೃತ್ಯ , ಕಾರ್ಕಳದ ಮಹಾಲಕ್ಷ್ಮೀ ಶೆಣೈ ಅವರಿಂದ ಹಾಡುಗಾರಿಕೆ ನಡೆಯಲಿದೆ. 

ಭಾಷಾ ಸಾಮರಸ್ಯ ಇಂದಿನ ಬಹು ಮುಖ್ಯ ಅಗತ್ಯವಾಗಿರುವುದರಿಂದ ಪ್ರಾದೇಶಿಕ ಭಾಷೆಯ ಜನರು ಒಂದೆಡೆ ಸೇರಿ ವಿಚಾರ ವಿನಿಮಯ ಮಾಡಿಕೊಳ್ಳುವ ಅವಕಾಶದ ಮೂಲಕ ಪ್ರಧಾನ ಭಾಷೆಯಾದ ಕನ್ನಡದ ಜತೆಗೆ ಅನುಸಂಧಾನ ನಡೆಸಿದಂತಾಗುತ್ತದೆ. ಜತೆಗೆ ಆಯಾ ಭಾಷಾ ಸಂಸ್ಕೃತಿಯನ್ನು ಇತರ ಭಾಷಾ ಬಾಂಧವರಿಗೆ ಪರಿಚಯಿಸಿ ಪರಸ್ಪರ ಗೌರವ, ತಮ್ಮ ತಮ್ಮ ಭಾಷೆ - ಸಂಸ್ಕೃತಿಗಳಲ್ಲಿ ಗೌರವನ್ನಿಟ್ಟುಕೊಂಡು ಅನ್ಯ ಭಾಷಾ ಸಂಸ್ಕೃತಿಗಳನ್ನು ಗೌರವಿಸುವ ಮನೋಭಾವ ನಮ್ಮದಾಗಬೇಕು. ಆ ಮೂಲಕ ಪ್ರದೇಶ-ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಸಾಮರಸ್ಯ ಮೂಡಬೇಕು. ಈ ಸಣ್ಣ ಪ್ರಯತ್ನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲಿಸುವ ಮೂಲಕ ಕೊಂಕಣಿ ಭಾಷಾ ನುಡಿವೈಭವದ ಯಶಸ್ಸಿಗೆ ಸಹಕರಿಸುವಂತೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ ಆಳ್ವ ವಿನಂತಿಸಿದ್ದಾರೆ.
Read more...

ವಿಶ್ವ ನುಡಿಸಿರಿ ವಿರಾಸತ್ ಗೆ ತೆರೆ: ಸಾಂಸ್ಕೃತಿಕ ಸಾರ್ಥಕ್ಯ ಮೆರೆದ ಸಮ್ಮೇಳನ

ವಿಶ್ವ ನುಡಿಸಿರಿ ವಿರಾಸತ್ ಗೆ ತೆರೆ; ಸಾಧಕರಿಗೆ ಪ್ರಶಸ್ತಿ ಪ್ರಧಾನಕಳೆದ ಮೂರು ದಿನಗಳಿಂದ ಸಂಭ್ರದಿಂದ ಜರುಗಿದ ಕಲೆ, ಸಾಹಿತ್ಯ, ಸಂಸ್ಕೃತಿಯ ಹಬ್ಬ ಆಳ್ವಾಸ್ ವಿಶ್ವ ನುಡಿಸಿರಿಗೆ ಇಂದು ತೆರೆಬಿದ್ದಿತು. ನಾಡಿನ ಹತ್ತು ಸಾಧಕರಿಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013ರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಯ ತನಕ ಮುಂದುವರಿದವು.

ಮೂಡುಬಿದಿರೆ: ಸಾಹಿತಿಗಳ ಸಮಾಜವನ್ನು ಕಟ್ಟುವಂತಹ ಕೆಲಸ ಮಾಡಬೇಕು. ಭಾಷಾ ಸಮೃದ್ಧಿಯಿಂದ ಕನ್ನಡಕ್ಕೆ ಏಳು ಜ್ಛಾನಪೀಠ ಪ್ರಶಸ್ತಿಗಳು ದೊರೆಯುವಂತಾಯಿತು ಎಂದು ಕೇಂದ್ರ ಸಚಿವ ಡಾ ವಿರಪ್ಪ ಮೋಯ್ಲಿ  ಹೇಳದರು. 
ಅವರು ಆಳ್ವಾಸ್ ವಿಶ್ವ ನುಡಿಸಿರಿ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಿದ್ದರು. ದೇಶದಲ್ಲಿಯೇ ನುಡಿಸಿರಿ ವಿರಾಸತ್ ನಂತಹ ಕಾರ್ಯಕ್ರಮಗಳು ನಡೆದ ಉದಾಹರಣೆಗಳಿಲ್ಲ. ಐತಿಹಾಸಿಕ ವೈವಿಧ್ಯವನ್ನು ಹೊಂದಿರುವ ಮೂಡುಬಿದಿರೆ ಐತಿಹಾಸಿಕ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಅರ್ಹತೆ ಹೊಂದಿದೆ. ರಾಜ್ಯ ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು. ಅನ್ಯೂನ್ಯತೆಯನ್ನು ಕೇವಲ ಮಾತಿನ ಮೂಲಕ ತೋರಿಸಿದೆ ಕೃತಿಯ ಮೂಲಕ ತೊರಿಸಿಬೇಕು.ಜಾಗತೀಕರಣದ ಹಿಂದೆ ಹೋಗದೆ ಮುಖಾಮುಕಿಯಾಗಿ ಎದುರಿಸಬೇಕು ಎಂದವರು ನುಡಿದರು.  

    ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವಿರೇಂದ್ರ ಹೆಗ್ಗಡೆ ಪ್ರಶಸ್ತಿ ಪ್ರಧಾನಿತರನ್ನು ಗೌರವಿಸಿ ಮಾತನಾಡಿ ಹೊಸ ಜನಾಂಗವೊಂದನ್ನು ಆಳ್ವರು ಕಟ್ಟುತ್ತಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಕಾರ, ಆತ್ಮಬೈತನ್ಯವನ್ನು ತುಂಬಿ ಅವರನ್ನು ಸುಸಂಸೃತರನ್ನಾಗಿ ಮಾಡುತ್ತಿದ್ದಾರೆ ಎಂದವರು ನುಡಿದರು.

   ಸನ್ಮಾನಿತರ ಪರವಾಗಿ  ಡಾ ಬಿ. ಎಂ. ಶೆಟ್ಟಿ ಮಾತನಾಡಿ ಭಾಷೆ ವ್ಯಾಮೋಹಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು. ಇದು ನಮ್ಮ ವೈಜ್ಞಾನಿಕ ಧರ್ಮವಾಗಿದ್ದು ನಾವೆಲ್ಲರೂ ಭಾಷಿಕರು ಎಂದು ಹೇಳುವುದಕ್ಕಿಂತ ಭಾರತೀಯರು ಎಂಬ ಭಾವನೆ ಇರಲಿ. ನುಡಿಸಿರಿ ವಿರಾಸತ್ ವೇದಿಕೆಯಲ್ಲಿ ಗೌರವನ್ನು ಪಡೆಯುವುದು ದೊಡ್ಡ ವಿಚಾರವಾಗಿದ್ದು ಗೌರವವನ್ನು ವಿನಮೃತೆಯಿಂದ ಸ್ವೀಕರಿಸುತ್ತೆನೆ ಎಂದರು.

 ಸನ್ಮಾನ ಸ್ವೀಕರಿಸಿದ ಜಯಂತ ಕಾಯ್ಕಿಣಿ ಮಾತನಾಡಿ ಎಲ್ಲಿ 15000 ವಿದ್ಯಾರ್ಥಿಗಳು ಸೇರುತ್ತಾರೋ ಅಲ್ಲಿ ಸಾಂಸ್ಕೃತಿಕ ಕಾರ್ಯಕರ್ತ ಭೇಟಿನೀಡಬೇಕಾದುದು ಅವನ ಕರ್ತವ್ಯ. ಕನ್ನಡವನ್ನು ನಾವು ಬೆಳೆಸಬೇಕಿಲ್ಲ ಅದೇ ನಮ್ಮನ್ನು  ಬೆಳೆಸುತ್ತದೆ ಎಂದರು. 

ಸಚಿವ ಆಭಯಚಂದ್ರ ಜೈನ್,  ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಮಾಜಿ ಸಚಿವರುಗಳಾದ ಸಿ. ಟಿ. ರವಿ, ಅವರನಾಥ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

ವಿಶ್ವ ನುಡಿಸಿರಿ ವಿರಾಸತ್ 2013ರ ಪ್ರಶಸ್ತಿಗೆ ನಾಮಾಂಕಿತರಾದ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ, ಡಾ ಡಿ.ಕೆ. ಚೌಟ, ಹಿರೇಮಂಗಳೂರು ಕಣ್ಣನ್, ಮೂಡ್ನಾಕೂಡು ಚಿನ್ನಸ್ವಾಮಿ, ಫಕೀರ್ ಮೊಹಮ್ಮದ್ ಕಟ್ಪಾಡಿ, ಡಾ ಬಿ. ಎಂ ಹೆಗ್ಡೆ, ಜಯಂತ ಕಾಯ್ಕಿಣಿ, ಉಮಾ ಕುಲಕರ್ಣಿ, ಡಾ. ಕಮಲಾ ಹಂಪನಾ,ಡಾ ನಾ ಮೊಗಸಾಲೆ, ಕುಂಬಳೆ ಸುಂದರ ರರಾವ್,ಕರ್ನಾಟಕ ತಿಯಾಲಾಜಿಕಲ್ ಸೊಸೈಟಿಯ ಪರವಾಗಿ ಹುಸೈನ್ , ಶಿವಮೊಗ್ಗ ಕರ್ನಾಟಕ ಸಂಫದ ಪರವಾಗಿ ಸಂಘದ ಕಾರ್ಯದರ್ಶಿ ಎಚ್. ಎಸ್. ನಾಗಭೂಶಣ ಅವರಿಗೆ  ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿಯು ಸನ್ಮಾನ ಪತ್ರ ಹಾಗೂ 25000 ರೂ ನಗದನ್ನು ಒಳಗೊಂಡಿತ್ತು.
    ಇದೇ ಸಂದರ್ಭದಲ್ಲಿ ವಿಶ್ವ ವಿರಾಸತ್ ನುಡಿಸಿರಿ ಸಮಿತಿಯ ಪರವಾಗಿ ಡಾ ಮೋಹನ್ ಆಳ್ವರನ್ನು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ ಬಿ ಎ ವಿವೇಕ್ ರೈ ಅವರನ್ನು ಸನ್ಮಾನಿಸಲಾಯಿತು. . ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮವನ್ನು ನಿರೂಪಿಸಿದರು.






















































Read more...