ವಿಶ್ವ ನುಡಿಸಿರಿ ವಿರಾಸತ್ ಗೆ ತೆರೆ; ಸಾಧಕರಿಗೆ ಪ್ರಶಸ್ತಿ ಪ್ರಧಾನಕಳೆದ ಮೂರು ದಿನಗಳಿಂದ ಸಂಭ್ರದಿಂದ ಜರುಗಿದ ಕಲೆ, ಸಾಹಿತ್ಯ, ಸಂಸ್ಕೃತಿಯ ಹಬ್ಬ ಆಳ್ವಾಸ್ ವಿಶ್ವ ನುಡಿಸಿರಿಗೆ ಇಂದು ತೆರೆಬಿದ್ದಿತು. ನಾಡಿನ ಹತ್ತು ಸಾಧಕರಿಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013ರ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿಯ ತನಕ ಮುಂದುವರಿದವು.
ಮೂಡುಬಿದಿರೆ: ಸಾಹಿತಿಗಳ ಸಮಾಜವನ್ನು ಕಟ್ಟುವಂತಹ ಕೆಲಸ ಮಾಡಬೇಕು. ಭಾಷಾ ಸಮೃದ್ಧಿಯಿಂದ ಕನ್ನಡಕ್ಕೆ ಏಳು ಜ್ಛಾನಪೀಠ ಪ್ರಶಸ್ತಿಗಳು ದೊರೆಯುವಂತಾಯಿತು ಎಂದು ಕೇಂದ್ರ ಸಚಿವ ಡಾ ವಿರಪ್ಪ ಮೋಯ್ಲಿ ಹೇಳದರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ಸಮಾರೋಪ ಸಮಾರಂಭದಲ್ಲಿ ಸಮಾರೋಪ ಭಾಷಣ ಮಾಡುತ್ತಿದ್ದರು. ದೇಶದಲ್ಲಿಯೇ ನುಡಿಸಿರಿ ವಿರಾಸತ್ ನಂತಹ ಕಾರ್ಯಕ್ರಮಗಳು ನಡೆದ ಉದಾಹರಣೆಗಳಿಲ್ಲ. ಐತಿಹಾಸಿಕ ವೈವಿಧ್ಯವನ್ನು ಹೊಂದಿರುವ ಮೂಡುಬಿದಿರೆ ಐತಿಹಾಸಿಕ ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಅರ್ಹತೆ ಹೊಂದಿದೆ. ರಾಜ್ಯ ಪ್ರವಾಸೋದ್ಯಮ ಸಚಿವರಿಗೆ ಪತ್ರ ಬರೆಯಲಾಗಿದೆ ಎಂದರು. ಅನ್ಯೂನ್ಯತೆಯನ್ನು ಕೇವಲ ಮಾತಿನ ಮೂಲಕ ತೋರಿಸಿದೆ ಕೃತಿಯ ಮೂಲಕ ತೊರಿಸಿಬೇಕು.ಜಾಗತೀಕರಣದ ಹಿಂದೆ ಹೋಗದೆ ಮುಖಾಮುಕಿಯಾಗಿ ಎದುರಿಸಬೇಕು ಎಂದವರು ನುಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ ಡಿ. ವಿರೇಂದ್ರ ಹೆಗ್ಗಡೆ ಪ್ರಶಸ್ತಿ ಪ್ರಧಾನಿತರನ್ನು ಗೌರವಿಸಿ ಮಾತನಾಡಿ ಹೊಸ ಜನಾಂಗವೊಂದನ್ನು ಆಳ್ವರು ಕಟ್ಟುತ್ತಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳಿಗೆ ಸಂಸ್ಕಾರ, ಆತ್ಮಬೈತನ್ಯವನ್ನು ತುಂಬಿ ಅವರನ್ನು ಸುಸಂಸೃತರನ್ನಾಗಿ ಮಾಡುತ್ತಿದ್ದಾರೆ ಎಂದವರು ನುಡಿದರು.
ಸನ್ಮಾನಿತರ ಪರವಾಗಿ ಡಾ ಬಿ. ಎಂ. ಶೆಟ್ಟಿ ಮಾತನಾಡಿ ಭಾಷೆ ವ್ಯಾಮೋಹಕ್ಕಿಂತ ಮನುಷ್ಯ ಪ್ರೀತಿ ದೊಡ್ಡದು. ಇದು ನಮ್ಮ ವೈಜ್ಞಾನಿಕ ಧರ್ಮವಾಗಿದ್ದು ನಾವೆಲ್ಲರೂ ಭಾಷಿಕರು ಎಂದು ಹೇಳುವುದಕ್ಕಿಂತ ಭಾರತೀಯರು ಎಂಬ ಭಾವನೆ ಇರಲಿ. ನುಡಿಸಿರಿ ವಿರಾಸತ್ ವೇದಿಕೆಯಲ್ಲಿ ಗೌರವನ್ನು ಪಡೆಯುವುದು ದೊಡ್ಡ ವಿಚಾರವಾಗಿದ್ದು ಗೌರವವನ್ನು ವಿನಮೃತೆಯಿಂದ ಸ್ವೀಕರಿಸುತ್ತೆನೆ ಎಂದರು.
ಸನ್ಮಾನ ಸ್ವೀಕರಿಸಿದ ಜಯಂತ ಕಾಯ್ಕಿಣಿ ಮಾತನಾಡಿ ಎಲ್ಲಿ 15000 ವಿದ್ಯಾರ್ಥಿಗಳು ಸೇರುತ್ತಾರೋ ಅಲ್ಲಿ ಸಾಂಸ್ಕೃತಿಕ ಕಾರ್ಯಕರ್ತ ಭೇಟಿನೀಡಬೇಕಾದುದು ಅವನ ಕರ್ತವ್ಯ. ಕನ್ನಡವನ್ನು ನಾವು ಬೆಳೆಸಬೇಕಿಲ್ಲ ಅದೇ ನಮ್ಮನ್ನು ಬೆಳೆಸುತ್ತದೆ ಎಂದರು.
ಸಚಿವ ಆಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಮಾಜಿ ಸಚಿವರುಗಳಾದ ಸಿ. ಟಿ. ರವಿ, ಅವರನಾಥ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿಶ್ವ ನುಡಿಸಿರಿ ವಿರಾಸತ್ 2013ರ ಪ್ರಶಸ್ತಿಗೆ ನಾಮಾಂಕಿತರಾದ ಡಾ. ಎಚ್. ಎಸ್. ವೆಂಕಟೇಶ್ ಮೂರ್ತಿ, ಡಾ ಡಿ.ಕೆ. ಚೌಟ, ಹಿರೇಮಂಗಳೂರು ಕಣ್ಣನ್, ಮೂಡ್ನಾಕೂಡು ಚಿನ್ನಸ್ವಾಮಿ, ಫಕೀರ್ ಮೊಹಮ್ಮದ್ ಕಟ್ಪಾಡಿ, ಡಾ ಬಿ. ಎಂ ಹೆಗ್ಡೆ, ಜಯಂತ ಕಾಯ್ಕಿಣಿ, ಉಮಾ ಕುಲಕರ್ಣಿ, ಡಾ. ಕಮಲಾ ಹಂಪನಾ,ಡಾ ನಾ ಮೊಗಸಾಲೆ, ಕುಂಬಳೆ ಸುಂದರ ರರಾವ್,ಕರ್ನಾಟಕ ತಿಯಾಲಾಜಿಕಲ್ ಸೊಸೈಟಿಯ ಪರವಾಗಿ ಹುಸೈನ್ , ಶಿವಮೊಗ್ಗ ಕರ್ನಾಟಕ ಸಂಫದ ಪರವಾಗಿ ಸಂಘದ ಕಾರ್ಯದರ್ಶಿ ಎಚ್. ಎಸ್. ನಾಗಭೂಶಣ ಅವರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಪ್ರಶಸ್ತಿಯು ಸನ್ಮಾನ ಪತ್ರ ಹಾಗೂ 25000 ರೂ ನಗದನ್ನು ಒಳಗೊಂಡಿತ್ತು.
ಇದೇ ಸಂದರ್ಭದಲ್ಲಿ ವಿಶ್ವ ವಿರಾಸತ್ ನುಡಿಸಿರಿ ಸಮಿತಿಯ ಪರವಾಗಿ ಡಾ ಮೋಹನ್ ಆಳ್ವರನ್ನು ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಡಾ ಬಿ ಎ ವಿವೇಕ್ ರೈ ಅವರನ್ನು ಸನ್ಮಾನಿಸಲಾಯಿತು. . ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮವನ್ನು ನಿರೂಪಿಸಿದರು.

