ಡಾ. ವಿ. ಎಸ್. ಆಚಾರ್ಯರಂತಹ ಸಜ್ಜನ ಸರಳ ರಾಜಕಾರಣಿ ಮತ್ತೋಬ್ಬರಿಲ್ಲ: ಆಳ್ವ


ಮೂಡುಬಿದಿರೆ:   ಡಾ. ವಿ. ಎಸ್. ಆಚಾರ್ಯರಂತಹ ಸಜ್ಜನ ಸರಳ ರಾಜಕಾರಣಿ ಮತ್ತೋಬ್ಬರಿಲ್ಲ. ಅವರ ಶಿಪ್ಯನಾಗಿ ದೀರ್ಘಕಾಲದ ಒಡನಾಟ ಹೊಂದಿದ್ದ ತನಗೆ ಅವರ ಅಗಲಿಕೆ ಬಹಳ ನೋವು ತಂದಿದೆ ಎಂದು ನುಡಿಸಿರಿಯ ರೂವಾರಿ ಡಾ ಮೋಹನ್ ಆಳ್ವ ಹೇಳಿದರು. ಅವರು ನುಡಿಸಿರಿ ಎರಡನೇ ದಿನವದ ಇಂದು ರತ್ನಾಕರವರ್ಣ ವೇದಿಕೆಯಲ್ಲಿ ಡಾ. ವಿ. ಎಸ್. ಅಚಾರ್ಯ ನೆನಪು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
         ಉತ್ತಮ ರಾಜಕಾರಣಿಯಾಗಿ, ರಾಜಕೀಯ ತಜ್ಞರಾಗಿ, ಚಿಂತಕರಾಗಿ ಜನಮಾನಸದಲ್ಲಿ ಗುರುತಿಸಿಕೊಂಡ ಆಚಾರ್ಯರ ಉದಾರತೆ, ಸೇವಾ ಮನೋಭಾವ ಗಾಂಭೀರ್ಯತೆಗಳಿಂದಲೇ ರಾಜಕೀಯದಲ್ಲೊಂದು ಘನತೆ ಉಳಿಸಿಕೊಂಡಿದ್ದರು ಎಂದು ಅವರು ಹೇಳಿದರು.
ವೇದಿಕೆಯಲ್ಲಿ ನುಡಿಸಿರಿಯ ಸವರ್ಾಧ್ಷಕ್ಷ ನಿಸಾರ್ ಅಹಮ್ಮದ್, ಡಾ ಬಾಳಾ ಸಾಹೇಬ್ ಲೋಕಾಪುರ ಉಪಸ್ಥಿತರಿದ್ದರು