ನುಡಿಸಿರಿಯಿಂದ ನಾಡಿನ ಸಂಘಟಕರು ಕಲಿಯುಬುದು ಸಾಕಷ್ಟಿದೆ: ಹಾಲಂಬಿ


ಮೂಡುಬಿದಿರೆ: ನಾಡಿನ ಸಂಘಟಕರು ನುಡಿಸಿರಿಯಿಂದ ಶಿಸ್ತು, ಅಚ್ಚಕಟ್ಟುತನವನ್ನು ಕಲಿಯಬೇಕಾಗಿದೆ ಎಂದು ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಹೇಳಿದರು.     ಅವರು ಮೂಡಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ನಡೆದ  9ನೇ ಆಳ್ವಾಸ್ ನುಡಿಸಿರಿ ಉದ್ಘಾಟನಾ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.

 ಚರ್ಚೆ, ಗೋಷ್ಠಿಗಳ ಮೂಲಕ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸುವ ಕೆಲಸ ನುಡಿಸಿರಿಯಲ್ಲಿ ಆಗುತ್ತಿದೆ. ಕನ್ನಡ ಸಾಹಿತ್ಯ ಸಮ್ಮೇಳನದಿಂದ ಪ್ರೇರಣೆಯಿಂದ ನುಡಿಸಿರಿ ಆರಂಭಗೊಂಡಿರುವುದು ಸಂತೋಷದ ವಿಚಾರ. ಮಾತ್ರವಲ್ಲದೇ ಕಸಾಪ ಸಮ್ಮೇಳನದ ಮೂವರು ಅಧ್ಯಕ್ಷರುಗಳು ಈ ವೇದಿಕೆಯಲ್ಲಿರುವುದು ಖಶಿ ತಂದಿದೆ ಎಂದರು.