ಮೂಡುಬಿದ್ರೆ: ಮುಂಜಾನೆ ರತ್ನಾಕರ ವರ್ಣಿ ವೇದಿಕೆಯಲ್ಲಿ ಪಂಡಿತ್ ಜಯತೀರ್ಥ ಮೇವುಂಡಿ ಅವರ ಉದಯರಾಗ, ರಾಯಚೂರು ಶೇಷಗಿರಿ ದಾಸ್ ಬಳಗದವರಿಂದ ದಾಸರ ಪದಗಳು, 9.30ರಿಂದ ಕೆ.ಪಿ. ಮೃತ್ಯುಂಜಯ ಅವರಿಂದ ಕವಿ ಸಮಯ-ಕವಿ ನಮನ
9.50ರಿಂದ ಎರಡನೇ ವಿಚಾರಗೋಷ್ಠಿ. 'ಸಾಮುದಾಯಿಕ ಚಳವಳಿಗಳು' ಶೀರ್ಷಿಕೆಯ ಈ ಗೋಷ್ಠಿಯಲ್ಲಿ ಚುಕ್ಕಿ ನಂಜುಂಡ ಸ್ವಾಮಿ (ರೈತ ಚಳವಳಿ), ಧರಣೀ ದೇವಿ ಮಾಲಗತ್ತಿ (ಮಹಿಳಾ ಚಳವಳಿ) ಹಾಗೂ ಸುರೇಶ್ ಹೆಬ್ಳೀಕರ್ (ಪರಿಸರ ಚಳವಳಿ) ಭಾಗವಹಿಸುವರು.
11.40ಕ್ಕೆ ಡಾ| ಭಾಳಾ ಸಾಹೇಬ್ ಲೋಕಾಪುರ ಅವರಿಂದ ಕಥಾ ಸಮಯ. 12ಕ್ಕೆ ಡಾ| ಎಂ. ಮೋಹನ ಆಳ್ವರು ಡಾ| ವಿ.ಎಸ್. ಆಚಾರ್ಯರ ನೆನಪು ಕಟ್ಟಿಕೊಡುವರು. ನಾಗೇಶ್ ಜೆ. ನಾಯಕ್ ಅವರಿಂದ ಕವಿ ಸಮಯ - ಕವಿ ನಮನ, 1.15ಕ್ಕೆ ಸುಳ್ಯದ ಕೆ. ಆರ್. ಗೋಪಾಲಕೃಷ್ಣ ಭಾವನಾ ಬಳಗದವರಿಂದ ಕನ್ನಡ ಗಝಲ್ಸ್, ಬಸು ಬೇವಿನ ಗಿಡದ ಅವರಿಂದ ಕವಿ ಸಮಯ - ಕವಿ ನಮನ.
2.20ರಿಂದ 4ರ ವರೆಗೆ ಸಮ್ಮೇಳನದ ಮೂರನೇ ಗೋಷ್ಠಿ- ಅಖಂಡ ಕರ್ನಾಟಕದ ಅಸ್ತಿತ್ವ - ಹೋರಾಟ. ಡಾ| ಮಹಾಬಲೇಶ್ವರ ರಾವ್ (ಶಿಕ್ಷಣದಲ್ಲಿ ಕನ್ನಡ), ಅಡೂxರು ಕೃಷ್ಣರಾವ್ (ನೆಲ ಜಲ ಹೋರಾಟ) ಮತ್ತು ಸ.ರ. ಸುದರ್ಶನ (ಕನ್ನಡ ಸಂಘ ಸಂಸ್ಥೆಗಳು ಮತ್ತು ಹೋರಾಟ) ಗೋಷ್ಠಿಯಲ್ಲಿ ಭಾಗವಹಿಸುವರು.
4.10ರಿಂದ ಅಮರೇಶ ನುಗಡೋಣಿ ಅವರಿಂದ ಕಥಾ ಸಮಯ, ಡಾ| ಕುಂ. ವೀರಭದ್ರಪ್ಪ ಅವರಿಂದ ವಿಶೇಷ ಉಪನ್ಯಾಸ, 5.20ಕ್ಕೆ ಬಾಲಕೃಷ್ಣ ಕಂಜರ್ಪಣೆ ಅವರಿಂದ ಕವಿ ಸಮಯ-ಕವಿನಮನ, 5.50ರಿಂದ 6.50ರ ವರೆಗೆ ಮಿಮಿಕ್ರಿ ದಯಾನಂದ ಅವರಿಂದ ಮಾತಿನ ಮಂಟಪ ಕಾರ್ಯಕ್ರಮ.
.jpg)

