ಕವಿಸಮಯ - ಕವಿನಮನ

ಮೂಡುಬಿದಿರೆ: ನುಡಿಸಿರಿಯ ಮೊದಲದಿನದಂದು ಪ್ರಖ್ಯಾತ ಕವಿ ಜೀನ್ ದತ್ತ್ ದೇಸಾಯಿಯವರು ಕವಿಸಮಯ - ಕವಿನಮನ ಕಾರ್ಯಕ್ರಮವನ್ನು ನೆಡೆಸಿಕೊಟ್ಟರು . ಇವರು ವೃತ್ತಿಯಲ್ಲಿ ವಕೀಲರಾದರೂ ಪ್ರವೃತ್ತಿಯಲ್ಲಿ ಕವಿಯಾಗಿ ಮಿಂಚಿದವರು. ಸುಮಾರು 34 ವರ್ಷ ವಕೀಲರಾಗಿ ದುಡಿದಿದ್ದಾರೆ.
   ಕವಿಸಮಯದಲ್ಲಿ ಮಾತಿನ ಮಹತ್ವವನ್ನು ಈ ರೀತಿಯಾಗಿ ವ್ಯಕ್ತಪಡಿಸಿದರು . ಹುಚ್ಚು ಹುಚ್ಚಾಗಿ ನೂರು ಮಾತುಗಳನ್ನಾಡುವ ಬದಲಿಗೆ ಎಚ್ಚೆತ್ತುಕೊಂಡು ಒಂದು ಮಾತನ್ನಾಡಿದರೆ ಸಾಕು . ಒಬ್ಬ ಕವಿಗೆ ಸ್ವಂತಿಕೆ ಎಂಬುದಿದ್ದರೆ ಮಾತ್ರ ಆತನ ಕವನಗಳಿಗೆ ಬೆಲೆ ಬರುತ್ತದೆ.ಕಾನೂನನ್ನು ಗದ್ಯದ ಮೂಲಕ ವಿವರಿಸುವುದನ್ನು ನಾವೆಲ್ಲಾ ನೋಡಿದ್ದೇವೆ ,ಓದಿದ್ದೇವೆ. ಆದರೆ ಕವನಗಳ ಮೂಲಕ ಕಾನೂನನ್ನು ವಿಮಶರ್ಿಸುವುದು ಬಹು ಕಷ್ಟ. ಆದರೆ ಅದನ್ನು ಜೀನ್ ದತ್ತ್ ದೇಸಾಯಿಯವರು ಸಾಧಿಸಿ ತೋರಿಸಿದ್ದಾರೆ.ಕೃತಿಕಾರರು ತಮ್ಮ ಕೃತಿಗಳನ್ನು ಕನ್ನಡದಲ್ಲಿ ವಿಮರ್ಶಣೆ ಮಾಡುವಲ್ಲಿ ಸೋತಿದ್ದಾರೆ.
    ನಾವು ಜೀವಿಸುವುದನ್ನು ಮರೆತಿದ್ದೇವೆ. ಮಾನವನಾಗಿ ಹೇಗೆ ಬದುಕಬೇಕೆಂಬ ಕಲೆ ಮರೆತು ಹೋಗಿದೆ. ಭೌತಿಕ ಶರೀರದ ಸಾವು ನಿಜವಾದ ಸಾವಲ್ಲ .ಮಾನವೀಯತೆಯ ಸಾವು ನಿಜವಾದ ಸಾವು ಎಂದು ಮಾಮರ್ಿಕವಾಗಿ ನುಡಿದರು. ಸಮಾಜದ ಕೆಡಕುಗಳ ಬಗ್ಗೆ ತಿಳಿಸಲು ಒಬ್ಬ ಮಾನವೀಯ ಮೌಲ್ಯಗಳನ್ನು ಹೊಂದಿದ ಕವಿಯ ಅಗತ್ಯವಿದೆ. ಎಂದು ಜೀನ್ ದತ್ತ್ ದೇಸಾಯಿಯವರು ಹೇಳಿದರು.