15 ಸಾಧಕರಿಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಪ್ರಶಸ್ತಿ

ಮೂಡುಬಿದಿರೆ: ಕನ್ನಡ ನಾಡು ನುಡಿ ಸಂಸ್ಕೃತಿಗೆ ನಿಡುಗಾಲದ ಸೇವೆ ಸಲ್ಲಿಸಿದ 15 ಮಂದಿ ಸಾಧಕರಿಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕವಿ ಡಾ.ಎಚ್. ಎಸ್. ವೆಂಕಟೇಶಮೂರ್ತಿ, ಡಾ. ಡಿ.ಕೆ ಚೌಟ, ಹಿರೇಮಗಳೂರು ಕಣ್ಣನ್, ಮೂಡ್ನಾಕೋಡು ಚಿನ್ನಸ್ವಾಮಿ, ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ, ಲೇಖಕ ಫಕೀರ್ ಮೊಹಮ್ಮದ್ ಕಟ್ಪಾಡಿ, ಡಾ.ಬಿ.ಎಂ.ಹೆಗ್ಡೆ, ಜಯಂತ ಕಾಯ್ಕಿಣಿ, ಅನುವಾದಕಿ ಉಮಾಕುಲಕರ್ಣಿ, ಪುಣೆ, ಡಾ.ಕಮಲಾ ಹಂಪನಾ, ಡಾ. ಪಿ. ದಯಾನಂದ ಪೈ, ಡಾ. ನಾ. ಮೊಗಸಾಲೆ, ಕುಂಬ್ಳೆ ಸುಂದರ ರಾವ್, ಸಂಸ್ಥೆಗಳಾದ ಮಂಗಳೂರಿನ ಬಾಸೆಲ್ ಮಿಶನ್, ಶಿವಮೊಗ್ಗ ಕರ್ನಾಟಕ ಸಂಘವನ್ನು ಈ ಬಾರಿಯ ಪ್ರತಿಷ್ಠಿತ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಡಾ.ಎಂ ಮೋಹನ ಆಳ್ವ ಇವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
     ಡಿ. 22ರಂದು ಸಂಜೆ 3.30ಕ್ಕೆ ನಡೆಯಲಿರುವ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿಯು ಸನ್ಮಾನ, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ 25,000 ರೂ ನಗದನ್ನು ಒಳಗೊಂಡಿದೆ.