ಕೇವಲ ಹಣದಿಂದ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸಲಾಗದು: ಉಮಾಶ್ರೀ

ಮೂಡುಬಿದಿರೆ: ನುಡಿಸಿರಿ, ವಿರಾಸತ್ ನಂತಹ ಕನ್ನಡದ ಕೆಲಸಗಳಿಗೆ ಸರಕಾರದ ಅನುದಾನವನ್ನು ನಿರೀಕ್ಷೀಸದೇ ವಿಶ್ವ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಮಾಘನೀಯವಾದುದು. ಸರಕಾರ ಕೂಡ ಇದು ತನ್ನ ಕರ್ತವ್ಯವೆಂಬಂತೆ ಈ ಕಾರ್ಯಕ್ರಮಕ್ಕೆ ಸಹಕಾರ ನೀಡಲಿದೆ ಎಂದು ಕರ್ನಾಟಕದ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಉಮಾಶ್ರೀ ಹೇಳಿದರು.
 ಅವರು ಮೂಡುಬಿದಿರೆಯ ವಿರಾಸತ್ ವೇದಿಕೆಯಲ್ಲಿ ವಿಶ್ವ ನುಡಿಸಿರಿ ವಿರಾಸತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕೇವಲ ಹಣದಿಂದ ಇಂತಹ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಿಲ್ಲ. ಸಾಹಿತ್ಯ ಹಾಗೂ ಸಂಸ್ಕೃತಿಯ ಬಗೆಗಿನ ಅಭಿಮಾನದಿಂದ ಡಾ. ಮೋಹನ್ ಆಳ್ವ ಇಂತಹ ಮನಸ್ಸನ್ನು ಮಾಡಿದ್ದಾರೆ ಎಂದು ಅವರು ನುಡಿದರು.

     ಸಮಾರಂಭದಲ್ಲಿ ಪ್ರಸಿದ್ಧ ಸಂಗೀತ ಕಲಾವಿದೆ ಛತ್ತೀಸ್ಗಢದ ಪದ್ಮಶ್ರೀ, ಪದವಿಭೂಷಣ ಪ್ರಶಸ್ತಿ ವಿಜೇತೆ ಡಾ. ತೀಜನ್ ಬಾಯಿ ಅವರಿಗೆ ಆಳ್ವಾಸ್ ವಿಶ್ವ ವಿರಾಸತ್ 2013 ಪ್ರಶಸ್ತಿ ಪ್ರಧಾನ ಮಾಡಲಾಯಿತು.

   ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ಎನ್. ವಿನಯ್ ಹೆಗ್ಡೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಸರ್ವಾಧ್ಯಕ್ಷ ಡಾ. ಬಿ. ಎ. ವಿವೇಕ್ ರೈ,  ಮೀನುಗಾರಿಕಾ ಸಚಿವ  ಅಭಯಚಂದ್ರ ಜೈನ್, ಉಡುಪಿ ಜಿಕ್ಕಮಂಗಳೂರು ಕ್ಷೇತ್ರದ ಸಂಸದ ಜಯಪ್ರಕಾಶ್ ಹೆಗ್ಡೆ, ಮಾಜಿ ಸಚಿವ ಅಮರನಾಥ ಶೆಟ್ಟಿ,  ಅಬುದಾಬಿಯ ಸರ್ವೋತ್ತಮ ಶೆಟ್ಟಿ, ಬೆಹರಿನ್ ಕನ್ನಡ ಸಂಘದ ಅಧ್ಯಕ್ಷ ರಾಜ್ ಕುಮಾರ್, ಧರ್ಮಸ್ಥಳದ ಸುರೇಂದ್ರಕುಮಾರ್ ಜೈನ್ ಮತ್ತು ಹರ್ಷೇಂದ್ರ ಕುಮಾರ್ ಜೈನ್, ಕಳೆದ ಹತ್ತೊಂಬತ್ತು ವರ್ಷಗಳಿಂದ ವಿರಾಸತ್ ಗೆ ಭೇಟಿನಿಡುತ್ತಿರುವ ಅಮೇರಿಕದ ಎಡ್ವಿನ್ ಹಾಗೂ ಜರ್ಮನ್ ನ ಪೀಟರ್ ಕಾರ್ಕ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನುಡಿಸಿರಿಯ ರುವಾರಿ ಡಾ ಎಂ. ಮೋಹನ್ ಆಳ್ವ ಅತಿಥಿಗನ್ನು ಸ್ವಾಗತಿಸಿದರು. ಉಪನ್ಯಾಸಕ ವೇಣುಗೋಪಾಲ್ ಕಾರ್ಯಕ್ರಮ ನಿರ್ವಹಿಸಿದರು.