ಮೂಡುಬಿದಿರೆ: ಪುರಾಣದ ಪಾತ್ರಗಳು ಆದರ್ಶದಿಂದ ಕೂಡಿದೆ ಅವು ಇಂದಿಗೂ ಪ್ರಸ್ತುತ. ಹಾಗಾಗಿ ‘ಪುರಾಣ’ ಎಂದು ನಿರ್ಲಕ್ಷ ಸಲ್ಲದು ಎಂದು ತಾರನಾಥ ಬಲ್ಯಾಯ ನುಡಿದರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ಪುರಾಣ ಕಾಲದ ಬಾಲಕರು ಎಂಬ ಕಥನ ಕುತೂಹಲ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಇದೇವೇಳೆ ಗದ್ದೆಯ ಬಡು ಕಟ್ಟಲಿಕ್ಕೆ ಹೋದ ಬಾಲಕನ ಕಥೆಯನ್ನೂ ಸೇರಿ ಹಲವು ಕಥೆಯನ್ನು ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಎಮ್ ಉಪಸ್ತಿತರಿದ್ದರು.ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು, ನಾಡಿನ ಗಣ್ಯರು ಹಾಗೂ ಪ್ರೇಕ್ಷಕ ವೃಂದ ನೆರೆದಿದ್ದರು.

