ಕಲ್ಲಂಗಡಿಯಲ್ಲರಳಿದ ಕವಿಗಳು

ಮೂಡುಬಿದಿರೆ: ಅಲ್ಲಂತೂ ಎಂಟೂ ಜನ ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರತ ನಮ್ಮ ಕನ್ನಡದ ಸಾಹಿತಿಗಳೂ ಒಟ್ಟಾಗಿ ಸೇರ್ಬಿಟ್ಟಿದ್ರು, ಅವ್ರ ಪಕ್ಕದಲ್ಲೇ ನಮ್ಮ ಖಾವಂದರಾದ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮೋಹನ್ ಆಳ್ವ ಅವರ ನಗು ಮೊಗಗಳು ನಮ್ಮನ್ನ ಇದಿರುಗೊಂಡವು. ಈ ಎಲ್ಲಾ ಗಣ್ಯರು ಒಟ್ಟಾಗಿ ಸಿಕ್ಕಿದ್ದು ಆಳ್ವಾಸ್ ನುಡಿಸಿರಿಯ ಫಲಪುಷ್ಪ ಮೇಳದಲ್ಲಿ. ಅದೂ ಕಂಡರೆ ಬಾಯಲ್ಲಿ ನೀರೂರಿಸುವ ಕಲ್ಲಂಗಡಿಗಳ ಮೇಲೆ.
ಈ ಕಲಾಕೃತಿಗಳಿಗೆ ಜೀವ ತುಂಬಿದವರು ಶಿವಮೊಗ್ಗದ ಹರೀಶ್ ಕುಮಾರ್ ಮತ್ತು ಶರಣಪ್ಪರು. ಕರ್ನಾಟಕದ ಎಲ್ಲಾ ಭಾಗಗಳಲ್ಲಿ ನಡೆಯುವ ಇಂತಹ ಮೇಳಗಳಲ್ಲಿ ತಮ್ಮ ಕೈಚಳಕ ತೋರಿಸಿದ್ದಾರೆ. ಅವರೇ ಹೇಳೋ ಹಾಗೆ ಸುಮಾರು ಅರ್ಧಗಂಟೆಯ ಶೃದ್ಧೆ ಹಾಗೂ ನಿರತ ಪರಿಶೃಮ ಈ ಕಲಾಕೃತಿಗಳ ಹಿಂದಿವೆ. ಆಳ್ವಾಸ್ ನುಡಿಸಿರಿಯ ಪ್ರಮುಖ ಆಕóರ್ಷಣೆಯ ಎನಿಸಿದ ಈ ಕಲಾಕೃತಿಗಳ ಬಗ್ಗೆ ಅವರಲ್ಲಿ ಕೇಳಿದಾಗ, ತಮ್ಮ ಕೈಯಲ್ಲಿ ಮೂಡಿಬಂದ ಕಲಾಕೃತಿಗಳ ಬಗ್ಗೆ ಸಂತೃಪ್ತಿ ಅವರ ಮುಖದಲ್ಲಿತ್ತು. ಶರಣಪ್ಪನವರು ಮಾತನಾಡುತ್ತ ಮೊದಲೊಂದಲೂ ಚಿತ್ರಕಲೆಯಲ್ಲೇ ಆಸಕ್ತಿಯಿದ್ದ ನಮಗೆ ಈ ಕಲೆಯ ಅಷ್ಟೊಂದು ಕಷ್ಟದಾಯಕವಲ್ಲ ಬದಲಾಗಿ ಇದೊಂದು ಕಲಾ ಸೇವೆ ಎಂದರು.
ಕಲ್ಲಂಗಡಿಗಳನ್ನು ತಿನ್ನೋಕೆ ಮಾತ್ರ ಅಂಥ ತಿಳಿದವರಿಗೆ ಇದೊಂದು ವಿಶೇಷ ಅನ್ನಿಸೋದಂತೂ ಸುಳ್ಳಲ್ಲ. ಫಲಪುಷ್ಪವನ್ನು ನೋಡಲು ಬಂದವರು ಗಣ್ಯರ ಮುಖ ನೋಡಿ ಕಣ್ಣು ತಂಪಾಗಿಸಿಕೊಂಡರು. ಕಲ್ಲಂಗಡಿಯ ಕೆಂಪಿನ ಮೇಲೆ ಬಿಳಿ ಬಣ್ಣದಲ್ಲಿ ಮೂಡಿಬಂದ ಆಳ್ವಾಸ್ ಲಾಂಛನ ಕೂಡಾ ನುಡಿಸಿರಿಯನ್ನು ಪ್ರತಿಬಿಂಬಿಸುವಂತಿತ್ತು.
ಈ ಕಲಾಕೃತಿಗಳ ಪಕ್ಕದಲ್ಲೇ ವಿಶಿಷ್ಟ ರಿತೀಯ ಜಾನುವಾರ್ ಆರ್ಟ ಇನ್ನೊಂದು ಪ್ರಮುಖ ಆಕರ್ಷಣೆ.ಜರ್ಮನಿ ಹಾಗೂ ಜಪಾನ್ ದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ಈ ಕಲೆ ನುಡಿಸಿರಿಯಲ್ಲಿ ಭಾರತೀಯತೆಯ ಲೇಪದೊಂದಿಗೆ ಆವರಣಗೊಂಡಿತ್ತು.ತೆಂಗಿನ ಗರಿ ಹಾಗೂ ಬಾಳೆ ದಿಂಡಿನಿಂದ ಮಾಡಿರುವ ಗಣೇಶ ಹಾಗೂ ಯಕ್ಷಗಾನದ ಕಲಾಕೃತಿಗಳು ಜೊತೆಗೆ ಕುಂಬಳ ಹಾಗೂ ಸೋರೆಯಿಂದ ಜೀವತಳೆದ ಮಹಿಳೆ ಎಲ್ಲರನ್ನು ಆಕರ್ಶಿಸತೊಡಗಿದ್ದಾರೆ. ಫಲಪುಷ್ಪ ಪ್ರದರ್ಶನ ಪ್ರಾರಂಭಗೊಂಡ ದಿನದಿಂದಲೇ ಈ ಕಲಾಕೃತಿಗಳ ಸುತ್ತ ನೆರೆದು, ಆಶ್ಚರ್ಯ ಬೆರೆತ ಸಡಗರದಲ್ಲಿ ಜನರು ಇದನ್ನು ವೀಕ್ಷಿಸ ತೊಡಗಿದ್ದಾರೆ.
ಈ ಬಿಸಿಲಿನ ಜಳದಲ್ಲಿ ನುಡಿಸಿರಿಗೆ ಬೇಟಿಕೊಟ್ಟವರಿಗೆ ಇದು ಮನಸ್ಸಿಗೆ ಮುದನೀಡೂದಂತೂ ಸುಳ್ಳಲ್ಲ. ನೀವು ಬರೋದಾದ್ರೆ ಈ ಅವಕಾಶವನ್ನು ಖಂಡಿತಾ ತಪ್ಪಿಸಿಕೊಳ್ಳಬೇಡಿ.
ಸುಷ್ಮಿತಾ ಶೆಟ್ಟಿ, ಉಜಿರೆ