ವಿಚಾದ ಗೋಷ್ಠಿ: ಡಾ. ರಂಜಾನ್ ದರ್ಗಾ, ಡಾ. ನಿತ್ಯಾನಂದ ಶೆಟ್ಟಿ ಅವರಿಂದ ವಿಚಾರ ಮಂಡನೆ

ಮೂಡುಬಿದಿರೆ: ಆಳ್ವಾಸ್ ನುಡಿಸಿರಿ 2012ರ ಮೊದಲ ದಿನದ ವಿಚಾರಗೋಷ್ಟಿಯಲ್ಲಿ ಖ್ಯಾತ ಪ್ರಬಂಧ ಹಾಗೂ ಲೇಖಕಕರುಗಲಾದ ಡಾ. ರಂಜಾನ್ ದರ್ಗಾ ,  ಹಳೆಗನ್ನಡಾಂತರ ಚಳವಳಿಗಳು, ಅಚ್ಚಗನ್ನಡದ ಎಚ್ಚರ, ಹಾಗೂ ಕನ್ನಡ ಭಾಷಾ ಚಳವಳಿಗಳು ಎಂಬ ವಿಷಯಗಳ ಮೇಲೆ ತಮ್ಮ ಪ್ರಬಂಧ ಮಂಡಿಸಿದರು.
  ಕನ್ನಡ ಬೆಳೆದಿದ್ದೇ ಚಳವಳಿಗಳ ಮೂಲಕ, ಈ ಚಳವಳಿಗಳಲ್ಲಿ ಶರಣರ ಪಾತ್ರ ಬಹಳ ದೊಡ್ಡದು. ಹೊಸದನ್ನು ರೂಪಿಸುವುದು ಈ ಚಳವಳಿಗಳ ಉದ್ದೇಶ. ಇಂಗ್ಲೀಷ್ ಭಾಷೆಗಿಂತ ಮೊದಲೇ ಕನ್ನಡದಲ್ಲಿ ಸಾವಿರಾರು ಕೃತಿಗಳು ರಚನೆಯಾಗಿದ್ದವು. ಜಗತ್ತು ಮಾನವ ಹಕ್ಕುಗಳನ್ನು ರೂಪಿಸುವದರ ಮೊದಲೇ ಬಸವನ್ಣನವರು ಅವೆಲ್ಲವುಗಳನ್ನು ತಮ್ಮ ವಚನಗಳ ಮೂಲಕ ಸಾರಿದ್ದರು ಎಂದು ಲೇಖಕ ರಂಜಾನ್ ದರ್ಗಾ ಹೇಳಿದರು.
     ತುಮಕೂರು ವಿವಿಯ ಪ್ರಾಂಶುಪಾಲರಾಗಿರುವ ಡಾ. ನಿತ್ಯಾನಂದ ಶೆಟ್ಟಿ ತಮ್ಮ ಪ್ರಬಂಧ ಮಂಡಿಸಿ ಅಚ್ಚಗನ್ನಡದ ಬಗ್ಗೆ ಎಲ್ಲರನ್ನು ಎಚ್ಚರಿಸಿದರು. ಆಡುಭಾಷೆಯಲ್ಲಿ ಯಾವುದೇ ಎಚ್ಚರಗಳಿರುವುದಿಲ್ಲ ಅದು ಸಾಮಾನ್ಯವಾಗಿ ನಿಯಮಗಳಿಂದ ಮುಕ್ತ, ಲಿಖಿತ ಭಾಷೆಯಲ್ಲಿ ಮಾತ್ರ ಎಚ್ಚರವಿದೆ ಎಂದರು. ಕನ್ನಡಿಗರಿಗೆ ಕನ್ನಡ ಮಾತ್ರ ಗೊತ್ತಿದ್ದರೆ ಸಾಲದು, ಅದು ಅಪೂರ್ಣ ಮತ್ತು ಅಚ್ಚಗನ್ನಡದ ಬಗ್ಗೆ ಗೌರವ ಬೇಕು, ಅದು ತೆರೆದ ಬಾಗಿಲು ಎಂದರು.
ಕೇವಲ ವೀರಕನ್ನಡಿಗರೆಂದು ಹೇಳಿಕೊಂಡರೆ ಸಾಲದು, ಕನ್ನಡದ ಬಗ್ಗೆ ಗೊತ್ತಿರಬೇಕು. ಕನ್ನಡ, ಕನರ್ಾಟಕದ ಇತಿಹಾಸ ತಿಳಿದುಕೊಳ್ಳಬೇಕು. ನೂರೈವತ್ತು ವರ್ಷಗಳ ಕಾಲ ನಡೆದ ಶ್ರಮ, ಹೋರಾಟ ಮರೆತು ಮತ್ತೊಮ್ಮೆ ವಿಭಜನೆಗೆ ಮುಂದಾಗುವುದು ನೋವಿನ ಸಂಗತಿ ಎಂದು ಲೇಖಕ ಡಾ. ಸಿ.ಆರ್. ಗೋವಿಂದರಾಜು ತಿಳಿಸಿದರು.
ಮಹಾಕವಿ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಈ ವಿಚಾರಗೋಷ್ಠಿಯಲ್ಲಿ ನಾ.ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.