ಅದೇ ದಾರಿ. ಯುವ ಹಾದಿ - ಸಂಫಟನಾ ಚತುರ ವಿವೇಕ ಆಳ್ವ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿಭಿನ್ನ ಕಾರ್ಯಕ್ರಮಗಳಿಗೆ ಡಾ ಮೋಹನ್ ಆಳ್ವರೊಂದಿಗೆ ಅವರ ಹಿರಿಯ ಮಗ ಎಂಬಿಎ ಪದವೀಧರ ವಿವೇಕ ಆಳ್ವ ಕೈ ಜೋಡಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ತನ್ನ ತಂದೆಯ ಅದ್ಭುತ ಸಾಹಸಮಯ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿ ಅನುಭವ ಪಡೆದ ಅವರು ಇತ್ತಿಚಿನ ದಿನಗಳಲ್ಲಿ ಸಂಘಟನೆಯ ಪ್ರಮುಖ ಪಾತ್ರವನ್ನು ಸದ್ದಿಲ್ಲದೆ ನಿರ್ವಹಿಸತೊಡಗಿದ್ದಾರೆ. ಆಳ್ವಾಸ್ ಎಜುಕೇಶನ್ ಫೌಂಡೆಶನ್ ನ  ಒರ್ವ ಟ್ರಸ್ಟಿಯೂ ಆಗಿರುವ ಅವರು  ವಿಶ್ವ ನುಡಿಸಿರಿ ವಿರಾಸತ್ ನಂತಹ ಬೃಹತ್ ಸಮ್ಮೇಳನದ ತಯಾರಿಯಲ್ಲಿ ರಾತ್ರಿ ಹಗಲೆನ್ನದೇ ತಮ್ಮ ಯುವ ತಂಡದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾನು ಸುದ್ದಿಯಾಗಬೇಕು ವೇದಿಕೆ ಹಂಚಿಕೊಳ್ಳಬೇಕು ಎಂಬುದಕ್ಕಿಂತ ಹೆಚ್ಚು ತಮ್ಮ ಸಂಸ್ಥೆ ಬೆಳಗಬೇಕು, ಬೆಳಗಿ ಇನ್ನಷ್ಟು ಜನರಿಗೆ ಸಹಾಯವಾಗಬೇಕು, ಮಾರ್ಗದರ್ಶನವಾಗಬೇಕು ಎಂಬುದರ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ವಿರಾಸತ್ ನುಡಿಸಿರಿಗಳು ನಿರಂತರವಾಗಿ ಸೂರ್ಯ ಚಂದ್ರರಿರುವರೆಗೆ ನಡೆಯುತ್ತಾ ಹೋಗಬೇಕು ಎಂಬ ಡಾ ಆಳ್ವ ಮತ್ತು ಅವರ ಅಭಿಮಾನಿಗಳ ಆಸೆಗೆ ಬೇಳಕಾಗುವಂತೆ ಬೆಳೆಯುತ್ತದ್ದಾರೆ. 
  14ನೇಯ ಕರಾವಳಿ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಅವರ ಸಂಘಟನಾಶೀಲತೆಯನ್ನು ಗುರುತಿಸಿ ಸನ್ಮಾನಿಸಿದೆ. ವರ್ಷದಿಂದ ವರ್ಷಕ್ಕೆ ವಿವೇಕ್ ಆಳ್ವ ಡಾ ಆಳ್ವರಂತೆ ಪ್ರಬುದ್ಧ ಸಂಫಟಕರಾಗುವ ಭರವಸೆ ಮೂಡಿಸಿದ್ದಾರೆ.
ವಿಮೇಕ್ ಆಳ್ವ ರಾತ್ರಿ 12:30ಕ್ಕೆ ಆಳ್ವಾಸ್ ಕ್ಯಾಂಪಸ್ ನ ನಾಟ್ಯ ಗಣಪತಿ ಎದುರು ಮರುದಿನದ ತಯಾರಿಗಾಗಿ ತಮ್ಮ ತಂಡದೊಂದಿಗೆ ಕ್ರೀಯಾಶಿಲರಾಗಿದ್ದ ಹೊತ್ತಿಗೆ ಮಾತಿಗೆ ಸಿಕ್ಕರು. ನನ್ನ ಬಗ್ಗೆ ಬರೆಯುವುದು ನನಗೆ ಮಖ್ಯ ಅನಿಸುವುದಿಲ್ಲ ನಮ್ಮ ಸಂಸ್ಥೆಯ ಸಾಧನೆ ವಿರಾಸತ್ ನ ಒಪ್ಪ ಒರಣಗಳ ಬಗ್ಗೆ ಬರೆದರೆ ಅದು ನಮಗೆ ಸಲ್ಲವುದಲ್ಲವೇ ಎಂಬ ಅವರ ಮಾತುಗಳ ನಮ್ಮಲ್ಲಿ ಅನೇಕ ವಿಚಾರಗಳನ್ನು ಚಿಂತಿಸುವಂತೆ ಮಾಡಿದವು. ಸಮ್ಮೇಳನದ ಹಿಂದಿನ ದಿನದಿಂದ  ಇಲ್ಲಿಯತನಕ ನಡುರಾತ್ರಿಯ ಹೊತ್ತಲ್ಲೂ ಅವರು ಕಾರ್ಯಪ್ರವೃತ್ತರಾಗಿದ್ದರು. ಯುವಕರಿಗೆ ವಿದ್ಯಾರ್ಥಿಗಳಿಗೆ ಮಹತ್ವ ನೀಡಲಾಗುತ್ತಿರುವ ಸಂಭ್ರಮಗಳಲ್ಲಿ ಯುವ ನಾಯಕ ವಿವೇಕ ಆಳ್ವರ ಮಿಂಚಿನ ಸಂಚಾರ ಹೆಚ್ಚು ಆಶಾದಾಯಕ.
      ಡಾ ಆಳ್ವ ಅವರು ಮೆಡಿಕಲ್ ಕಾಲೇಜು ತೆರೆಯುವ ಕುರಿತು ಸಂವಾದದಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ನಾನು ಎಲಿಮೆಂಟರಿ ಶಾಲೆಗಳನ್ನು ತೆರೆಯಲು ಶಕ್ತನಿದ್ದೇನೆ. ಮೆಡಿಕಲ್ ಕಾಲೇಜು ಆರಂಭವೆಂದರೆ ಅದು ದುಡ್ಡಿನ ಲೆಕ್ಕಾಚಾರದ ಆರಂಭ ಹಾಗಾಗಿ ಅದನ್ನು ನನ್ನ ಮಕ್ಕಳು ಬೇಕಾದರೆ ಮಾಡಲಿ ಎಂಬ ಮಾತು ಆಳ್ವರು ಅವರ ಬಗೆಗೆ ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ.

ವಿವೇಕ್ ಆಳ್ವರೊಂದಿಗೆ ನಡೆಸಿದ ಚುಟುಕು ಸಂದರ್ಶನ ಇಲ್ಲಿದೆ.

*ವಿಶ್ವ ನುಡಿಸಿರಿ ವಿರಾಸತ್ ಅನುಭವ ಹೇಗಿದೆ?
ವಿವೇಕ್ ಆಳ್ವ: ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ. ಸಮ್ಮೇಳನಕ್ಕೆ ಜನಸಾಗರವೇ ಹರಿದ ಬರುತ್ತಿರುವುದನ್ನು ನೋಡುವುದೇ ಖಷಿ ಎನಿಸುತ್ತಿದೆ.

*ವಿಶ್ವ ನುಡಿಸಿರಿಯ ಕುರಿತಾಗಿ ಸಾಹಿತ್ಯಾಭಿಮಾನಿಗಳು ಎನೆನ್ನುತ್ತಿದ್ದಾರೆ?
ವಿವೇಕ್ ಆಳ್ವ: ಇಲ್ಲಿನ ವ್ಯವಸ್ಥೆಗಳನ್ನು ನೋಡಿ ಎಲ್ಲರೂ ಖಷಿ ಪಟ್ಟುಕೊಂಡಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಒಂದು ದಿನ ಉಳಿದಿದ್ದು ಕಾರ್ಯಕ್ರಮಗಳ ಉತ್ತಮವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ..

*ಯುವಜನರ ಪ್ರತಿಕ್ರಿಯೆ ಹೇಗಿದೆ?
ವಿವೇಕ್ ಆಳ್ವ: ವಿವಿಧ ಕಾಲೇಜುಗಳಿಂದ ಸಾವಿರಾರು ವಿದ್ಯಾರ್ಥಿಗಳು ನುಡಿಸಿರಿಗೆ ಆಗಮಿಸುತ್ತಿದ್ದು ಎನ್.ಎಸ್.ಎಸ್., ಎನ್.ಸಿ.ಸಿ, ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಸ್ವಯಂ ಸ್ಪೂರ್ತಿಯಿಂದ ನುಡಿಸಿರಿಯಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ತಮ್ಮ ಜವಾಬ್ಧಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ವಿದ್ಯಾರ್ಥಿಸಿರಿಯಿಂದಾಗಿ ಈ ಭಾರಿ ಯುವಜನರು ಮತ್ತಷ್ಟು ಸ್ಫೂರ್ತಿಯಿಂದ  ಸಮ್ಮೇಳನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ..

*ಸಾಗರೋಪಾದಿಯಲ್ಲಿ ಕೃತಾರ್ತ ಭಾವದಿಂದ ಬಂದು ಹೋಗುತ್ತಿರುವ ಜನಗಳನ್ನು ನೋಡಿದಾಗ ಎನೆನ್ನಿಸುತ್ತೆ? 
ವಿವೇಕ್ ಆಳ್ವ: ನಿಜಕ್ಕೂ ಖುಷಿಯಾಗುತ್ತಿದೆ. ಇಡೀ ಮೂಡುಬಿದಿರೆಯೇ ಕಳೆಗಟ್ಟಿದಂತಿದ್ದು ತಂಡೋಪ ತಂಡವಾಗಿ ಬರುತ್ತಿರುವ ಜನ ಸಂಭ್ರಮ ಪಡುವುದನ್ನು ನೋಡುವುದೇ ಒಂದು ಖುಷಿಯ ಸಂಗತಿಯಾಗಿದೆ. 

*ನುಡಿಸಿರಿಯಲ್ಲಿ ಯುವ ಪೀಳಿಗೆಯ ಪ್ರತಿನಿಧಿಯಂತಿರುವ ತಾವು ಯುವಕರಿಗೆ ಹೇಳುವುದೇನು?
ವಿವೇಕ್ ಆಳ್ವ:   ಬದುಕಿನಲ್ಲಿ ಹಣವೊಂದೇ ಸರ್ವಸ್ವವಲ್ಲ. ಮಾಡುವ ಕೆಲಸವನ್ನು ಶ್ರದ್ಧೆಯಿರಲಿ. ನಿಷ್ಠೆಯಿಂದ ಕೆಲಸ ಮಾಡಿದರೆ ಅದರ ಉಪಯೋಗವನ್ನು ಪಡೆದುಕೊಳ್ಳುವವರು ನಾವುಗಳೇ ಎಂಬುದನ್ನು ಮರೆಯಬಾರದು. ಆಳ್ವಾಸ್ ನುಡಿಸಿರಿ ವಿರಾಸತ್ ನಂತಹ ಕಾರ್ಯಕ್ರಮಗಳು ಅತೀ ವಿರಳವಾಗಿದ್ದು ಇದರಲ್ಲಿನ ಒಳ್ಳೆಯ ಅಂಶಗಳನ್ನು ಕಲಿಯುವ ಮನಸ್ಸು ನಮ್ಮೆಲ್ಲರದ್ದಾಗಲಿ ಎಂಬುದು ನನ್ನ ಆಶಯ 

ಚಿತ್ರ: ಶೇಖರ ಅಜೆಕಾರು