ಗರಿಗೆದರಿದ ವಿದ್ಯಾರ್ಥಿ ಸಿರಿ- ತುಂಬಿದ ಸಭೆ- ಮಕ್ಕಳ ಸಂಭ್ರಮ

ಮೂಡುಬಿದಿರೆ: ನೀವು ನಮಗಿಂತ ದೊಡ್ಡವರಾಗುತ್ತೀರಿ ಎಂಬ ಆಶಯ ನಮ್ಮದು. ನಮಗೆ ಇರದ ಅಪೂರ್ವ ಅವಕಾಶ ನಿಮಗಿದೆ. ಶಾಲೆಗಿಂತ ಹೆಚ್ಚು ತಿಳುವಳಿಕೆ ಹೊರ ಪ್ರಪಂಚದಲ್ಲಿ ಸಿಗುತ್ತೆ ಎಂಬುದನ್ನು ಯುವ ಮನಸ್ಸುಗಳು ತಿಳಿಯ ಬೇಕು ಎಂದು ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್ ಸಮ್ಮೇಳನಾಧ್ಯಕ್ಷ ಡಾ.ಬಿ.ಎ. ವಿವೇಕ ರೈ ಅವರು ಹೇಳಿದರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನ ವಿದ್ಯಾರ್ಥಿ ಸಿರಿಯನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಾವು ಪರಿಸರವನ್ನು ತಿಳಿಯಿರಿ, ಹಕ್ಕಿಗಳನ್ನು, ಚಿಟ್ಟೆಗಳನ್ನು , ಪ್ರಾನೀಳನ್ನು ಗಿಡಮರಗಳನ್ನು ತಿಳಿಯಲು ಪ್ರಯತ್ನಿಸಿ ಎಂದು ಅವರು ಕರೆ ನೀಡಿದರು.
     ನಮಗಿಲ್ಲ ಇಷ್ಟೆಲ್ಲಾ ಅವಕಾಶಗಳಿರಲಿಲ್ಲ. ನಿಮಗೆಷ್ಟು ಅವಕಾಶ ಇದೆ ಎಂದು ಹೊಟ್ಟೆ ಕಿಚ್ಚು ಆಗುತ್ತದೆ. ಆದರೆ ವಿದ್ಯಾರ್ಥಿಗಳೆಂದರೆ ಬೆಳಕು ನಕ್ಷತ್ರಗಳು ಅವರು ಬೆಳಗಲಿ ಎಂದು ಆಶಯ ಭಾಷಣ ಂಆಡಿದ ವೈದೇಹಿ ಅವರು ಹೇಳಿದರು.
ಇಂದು ಐಟಿ ಬಿಟಿಯ ಜನ  18 ಗಂಟೆ ಕೆಲಸ ಮಾಡಿಯೂ ಉತ್ತಮ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಅದಕ್ಕೆ ಅವರ ಮನಸ್ಸಿನಲ್ಲಿ ಎಲ್ಲೋ ಇರುವ ಬರೆಯ ಬೇಕೆಂಬ ತುಡಿತ ಕಾರಣ. ಪ್ರತಿಯೊಬ್ಬರಲ್ಲೂ ಒಬ್ಬ ಕವಿ, ಸಾಹಿತಿ, ಕಲಾವಿದ ಇದ್ದೇ ಇರುತ್ತಾನೆ ಅವನನ್ನು ಜಾಗ್ರತೆ ಗೊಳಿಸಿಕೊಂಡು ಬೆಳೆಯಿರಿ ಎಂದು 12 ಮಕ್ಕಳ ನಾಟಕಗಳ ಮೂಲಕ ಜನಪ್ರಿಯರಾದ ಅವರು ಹೇಳಿದರು.
       ಜಾನಪದ ಸಂಸ್ಕøತಿ, ಬಾಷೆಯ ಬಗ್ಗೆ ಅಭಿಮಾನವಿರಲಿ. ನೂರಾರು ಕಾಲ ಅದನ್ನು ಮುಂದೆ ಕೊಂಡು ಹೋಗ ಬೇಕಾದವರು ವಿದ್ಯಾರ್ಥಿಗಳು ಹಾಗಾಗಿ ಈ ವಿದ್ಯಾರ್ಥಿ ಸಿರಿ ನನಗೆ ಬಹಳ ಖುಷಿ ಎಂದು ಸಂಘಟಕ ಡಾ. ಮೋಹನ ಆಳ್ವ ಅವರು ಹೇಳಿದರು.ಕಷ್ಟಕಾಲದಲ್ಲಿ ನಾವಿದ್ದೆವು, ಬೆಎದೆವು ಈಗ ನೀವು ಸುಖ ಕಾಲದಲ್ಲಿ ಒಳ್ಳೆಯ ಕನ್ಡಡದ ಮನಸ್ಸು ಕಟ್ಟೋಣ. ಆಳ್ವಾಸ್ ವಿಶ್ವ ನುಡಿಸಿರಿ ಗೌಜಿ ಗಮ್ಮತ್ತಿನ ಕಾರ್ಯಕ್ರಮ ಅಲ್ಲ ಎಂದು ಹೇಳಿದರು.
ವಿದ್ಯಾರ್ಥಿ ಸಿರಿಯ ಸಮಗ್ರ ಸಂಚಾಲಕ ಶ್ರೀಧರ್ ಜೈನ್ ಅವರು ಅತಿಥಿಗಳನ್ನು ಗೌರವಿಸಿದರು. ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ರೂಪಿಸಿದರು.

 ಮೂರೂ ದಿನ ರಂಜಿಸಿ ರಂಗೇರಲಿರುವ ವಿದ್ಯಾರ್ಥಿಸಿರಿ.
ಕಳೆದ ಒಂಭತ್ತು ನುಡಿಸಿರಿ ಮತ್ತು 19 ವಿರಾಸತ್‍ಗಳಲ್ಲಿ ಸಾವಿರಾರು ಯುವ ಮನಸ್ಸುಗಳನ್ನು ಮುಟ್ಟುವ ಪ್ರಯತ್ನವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿರುವ ಡಾ. ಮೋಹನ ಆಳ್ವ ಅವರು ಈ ಬಾರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವೇದಿಕೆಯನ್ನು ವಿಶ್ವಕ್ಕೆ ತೆರೆದು ಕೊಳ್ಳುವ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ.
    9.00 ಗಂಟೆಗೆ ಆರಂಭವಾದ ವಿದ್ಯಾರ್ಥಿಸಿರಿಯ ಸಭಾಂಗಂಣ ತುಂಬಿ ತುಳುಕುತ್ತಿತ್ತು. ಸುಮಾರು ಇನ್ನೂರಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ಅವಕಾಶ ಪಡೆದುದು ವಿಶ್ವ ನುಡಿಸಿರಿಗೆ ಹೊಸ ಆಯಾಮ ನೀಡಿತು.