ಜನಪದ ಕಲೆ ಬದುಕಿನ ಭಾಗವಾಗಲಿ: ಡಾ ಅಂಬಳಿಕೆ ಹಿರಿಯಣ್ಣ

ಮೂಡುಬಿದಿರೆ: ವಿಜ್ಞಾನಕ್ಕೆ ನೆಚ್ಚಿಕೊಂಡವರಿಂದ ಮತ್ತು ವೈಜ್ಞಾನಿಕ ಕ್ರಾಂತಿಯಿಂದಾಗಿ ಜನಪದ ಕಲೆಗಳು ನಶಿಸುತ್ತಿದೆ ಎಂಬ ಆಂತಕ ಎದುರಾಗಿದ್ದು ಸಂಸ್ಕೃತಿಯ ಮೂಲ ಬೇರಾಗಿರುವ ಜನಪದ ಕಲೆಯನ್ನು ಉಳಿಸಬೇಕಾದುದು ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ ಅಂಬಳಿಕೆ ಹಿರಿಯಣ್ಣ ಹೇಳಿದರು. ಅವರು ನಾಡೋಜ ಹೆಚ್. ಎಲ್. ನಾಗೇಗೌಡ ವೇದಿಕೆಯಲ್ಲಿ ಜರುಗುತ್ತಿರುವ ಜನಪದ ಸಿರಿಯಲ್ಲಿ ಮಾತನಾಡಿತ್ತಿದ್ದರು.
ರಾಷ್ಟ್ರೀಯತೆಯನ್ನು ಒಡೆಯುವ ಜಾತೀಕರಣದ ಸಮಸ್ಯೆಗಳಿಗೆ ಸಂಸ್ಕೃತಿಯ ಮೂಲ ಬೇರುಗಳಲ್ಲಿಯೇ ಉತ್ತರವನ್ನು ಕಂಡುಕೊಳ್ಳಲು ಸಾಧ್ಯ. ಜನಪದದ ಬೇರೆ ಬೇರೆ ಕಲೆಗಳತ್ತ ಬೆಳಕನ್ನು ಚಲ್ಲುವ ಮತ್ತು ಕಲಿಕೆ ತರಬೇತಿ 

ಮತ್ತು ಪ್ರಾತ್ಯಕ್ಷೀತೆಗಳ ಮೂಲಕ ಇಂದಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ. ಜನಪದ ನಮ್ಮ ಬದುಕಿನ ಅಂಗವಾದಾಗ ಮಾತ್ರ ಅದನ್ನು ಉಳಿಸಿ ಬೆಳೆಸಲು ಸಾಧ್ಯ ಎಂದವರು ಹೇಳಿದರು.

ವಿಶ್ವ ನುಡಿಸಿರಿ ವಿರಾಸತ್ ನ ಸರ್ವಾಧ್ಯಕ್ಷ ಡಾ. ಬಿ.ಎ. ವಿವೇಕ್ ರೈ ಜನಪದ ಸಿರಿಯನ್ನು ಡೋಲನ್ನು ಬಾರಿಸುವುದರ ಕಾರ್ಯಕ್ರಮವನ್ನು ಮೂಲಕ ಉದ್ಘಾಟಿಸಿದರು. ನುಡಿಸಿರಿಯ ರೂವಾರಿ ಡಾ ಮೋಹನ್ ಆಳ್ವ ಪ್ರಸ್ತಾವನೆಗೈದರು.