ಚಿತ್ರ ಮಾಧ್ಯಮದಲ್ಲಿ ಸಾಕ್ಷ ಚಿತ್ರದ ಪಾತ್ರ ಮಹತ್ವದ್ದು - ಕಾಸರವಳ್ಳಿ

ಮೂಡುಬಿದಿರೆ: ನಾವು ಬದುಕಿರುವ ವಾತಾವರಣ ಉಸಿರುಗಟ್ಟಿಸುವಂತಾದಾಗ ಅದಕ್ಕೆ ಪ್ರತಿಯಾಗಿ ಚಳವಳಿಗಳು ಹುಟ್ಟಿಕೊಳ್ಳುತ್ತದೆ. ಪ್ರಭಲ ಮಾಧ್ಯಮಗಳ ಸಹಾಯ ಇಲ್ಲದಿರುವುದರಿಂದ ಉಳಿದ ಮಾಧ್ಯಗಳಂತೆ ಹಿರಿತೆರೆ-ಕಿರುತೆರೆ ಮಾಧ್ಯಮಗಳಲ್ಲಿ ಚಳವಳಿಗಳು ತೀವ್ರ ಸ್ವರೂಪ ಪಡೆಯಲು ಸಾಧ್ಯವಾಗಿಲ್ಲ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಹೇಳಿದರು.
     ಅವರು ಆಳ್ವಾಸ್ ನುಡಿಸಿರಿ - 2012 ರ ಅಂತಿಮ ದಿನವಾದ ನ.18,ಭಾನುವಾರ ನಡೆದ ವಿಚಾರಗೋಷ್ಠಿಯಲ್ಲಿ ಚಲನಚಿತ್ರ ಕಿರುತೆರೆ ಚಳವಳಿ ಎಂಬ ವಿಷಯದ ಬಗ್ಗೆ ವಿಚಾರ ವಿನಿಮಯ ಮಾಡಿದರು.
     ಸಾಮಾಜಿಕ, ಐತಿಹಾಸಿಕ, ಪುರಾಣ ಕಥೆಗಳನ್ನು ಆಧರಿಸಿ ಚಲನ ಚಿತ್ರ ತಯಾರಿಸುವ ಮೂಲಕ ಮೊದಲು ಚಳವಳಿ ಆರಂಭವಾಗಿ ನಂತರ ಸಮಾಜದ ಸ್ಥಿತಿಗತಿಯನ್ನು ವ್ಯಕ್ತಿ ಮೂಲಕ ತೋರಿಸುವ ಚಿತ್ರಗಳು ನಂತರ ವ್ಯಕ್ತಿಗೆ ಕಾರಣವಾದ ಸಮಾಜದ ಸ್ಥಿತಿಗತಿ ಬಗ್ಗೆ ತದನಂತರದಲ್ಲಿ ಕೇವಲ ವೈಭೋಗವನ್ನು ಹೊಂದಿರುವ ಚಲನಚಿತ್ರಗಳು ತೆರೆ ಕಾಣುತ್ತಿದೆ. ಧಾರವಾಹಿ ಮತ್ತು ಸಿನೆಮಾಗಳು ಮಾತ್ರ ಕಥಾ ಚಿತ್ರಗಳಲ್ಲ ಸಾಕ್ಷ್ಯ ಚಿತ್ರಗಳು ಕೂಡ ಚಿತ್ರ ಮಾಧ್ಯಮದಲ್ಲಿ ದೊಡ್ಡ ಚಳವಳಿಯನ್ನು ಹುಟ್ಟುಹಾಕುವ ಶಕ್ತಿಯನ್ನು ಹೊಂದಿದೆ ಎಂದರು.