ತಂತ್ರಜ್ಞಾನ ಕಲೆಯನ್ನು ಒಡೆದು ಹಾಕುತ್ತಿದೆ - ರಘುನಂದನ

ಮೂಡುಬಿದಿರೆ: ದುಡ್ಡೇ ದೊಡ್ಡಪ ಏಂಬ ಲೋಕದಲ್ಲಿ ನಾವು ಬದುಕುತ್ತಿದೇವೆ ಈಗಿನ ಯುವಜನತೆ ರಂಗಭೂಮಿಯತ್ತ ಆಸಕ್ತಿ ಕಳೆದುಕೊಳ್ಳುತ್ತಿದೆ ಎಂದು ರಂಗಭೂಮಿ ನಿರ್ದೇಶಕ ರಘುನಂದನ ಅಭಿಪ್ರಾಯಪಟ್ಟರು.
 ಅವರು ಆಳ್ವಾಸ್ ನುಡಿಸಿರಿ - 2012 ರ ಮೂರನೇ ದಿನವಾದ ಭಾನುವಾರ,ನ.18 ರಂದು ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಕಲೆ-ಮಾಧ್ಯಮ ಚಳುವಳಿಗಳ ವಿಚಾರ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
          ಮನುಷ್ಯನ ಬುದ್ದಿಮತ್ತೆ ಹುಟ್ಟು ಹಾಕಿದ ತಂತ್ರಜ್ಞಾನ ಕಲೆಯನ್ನು ಒಡೆದುಹಾಕುತ್ತಿದೆ. ಇದರಿಂದ ಬೀದಿ ನಾಟಕಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ. ಈ ನಮ್ಮ ಸ್ವಾತಂತ್ರ್ಯ ದೇಶಕ್ಕೆ ಸ್ವಾತಂತ್ರ್ಯವಾದ ರಂಗಭೂಮಿ ಮಾಡಬೇಕು. ಕೇವಲ ಸಿನಿಮಾ ಮಾತ್ರವಲ್ಲದೆ ರಂಗಭೂಮಿಯೂ ಬೇಕು. ಬೀದಿನಾಟಕ,ಯಕ್ಷಗಾನ,ಕೂಚಿಪುಡಿ, ನಾಟಕ ಗಳ ಮೂಲಕ ಜನರಿಗೆ ಸಮಾಜದಲ್ಲಿ ನಡೆಯುವ ಘಟನೆಗಳ ಬಗ್ಗೆ ಹಾಡು ಹೇಳಿ , ನಟಿಸಿ, ಚಳುವಳಿಗಳನ್ನು ಮಾಡಿ ಸುದ್ದಿ ಮುಟ್ಟಿಸುವ ಈ ನಿಟ್ಟಿನಲ್ಲಿ ರಂಗಭೂಮಿ ಚಳುವಳಿಗಳು ಯಶಸ್ವಿಯಾಗಬೇಕು ಎಂದರು.