ಸಮಾಪನಗೊಂಡ 9ನೇ ನುಡಿಸಿರಿ; ಮೆಚ್ಚುಗೆಯ ಸುರಿಮಳೆ

ಮೂಡುಬಿದಿರೆ:  26 ಅಕ್ಷರದ ಇಂಗ್ಲೀಷ್ ಭಾಷೆಯು ಕನ್ನಡ ಭಾಷೆಯನ್ನು ಧಮನಿಸುತ್ತಿದೆ. ಹಳೆಗನ್ನಡ ಕಷ್ಟವೆಂದು ಇಂಗ್ಲೀಷ್ ಭಾಷೆಯತ್ತ ವಾಲುತ್ತಿರುವ ಯುವ ಜನಾಂಗವು ಹಳೆಗನ್ನಡ ಕಷ್ಟದ ಭಾಷೆಯಲ್ಲ ಎಂಬುದನ್ನು ತಿಳಿಯಬೇಕಿದೆ ಎಂದು  ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ಹೇಳಿದರು. ಅವರು ಅವರು ಆಳ್ವಾಸ್ ಪ್ರಶಸ್ತಿ ಪ್ರದಾನಗೈದು ಭಾನುವಾರ ನ.18 ರಂದು ಆಳ್ವಾಸ್ ನುಡಿಸಿರಿ - 2012 ರ ಸಮಾರೋಪ ಭಾಷಣದಲ್ಲಿ ಹೇಳಿದರು  ಈವರೆಗೆ ನಡೆದ ನುಡಿಸಿರಿಯಲ್ಲಿಯೂ ಹಳೆಕನ್ನಡದ ವಿಚಾರಗಳು ಮಂಡನೆಯಾಗಿಲ್ಲ ಎಂದು ಬೇಸರದಿಂದ ನುಡಿದ ಅವರು ಮುಂದಿನ ವಿಶ್ವನುಡಿಸಿರಿಯ ಪರಿಕಲ್ಪನೆಯಲ್ಲಿ ಈ ವಿಚಾರ ಮಂಡನೆಯಾಗಬಹುದು ಎಂದು ತಿಳಿದಿದ್ದೇನೆ ಎಂದರು.
        ಭಾರತದ ಸಂಸ್ಕೃತಿ ಹಿಂದಿನ ಸಾಹಿತ್ಯದಲ್ಲಿದೆ. ರಾಮಾಯಣ, ಮಹಾಭಾರತ ತೆರೆದು ನೋಡಿದರೆ ಅಲ್ಲಿ ನಮ್ಮ ಸಂಸ್ಕೃತಿ ಸೊನ್ನೆ . ವಿಶ್ವದ 18 ದೇಶದಲ್ಲಿ ರಾಮಾಯಣ ಇದೆ ಅವರಿಗೆ ಭಾರತದ ರಾಮಾಯಣ ಬದುಕು ಕಟ್ಟಿಕೊಟ್ಟಿದೆ. ಕರ್ನಾಟಕದ ಏಕೀಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯವರ ಪಾತ್ರ ದೊಡ್ಡದು, ಕೆ.ಬಿ. ಜಿನರಾಜರಂತಹ ಸಾಹಿತಿಗಳು ತುಳು ರಾಜ್ಯ ಬೇಕೆಂದು ಹೋರಾಟ ಮಾಡಿದ್ದರು ಇವರೆಲ್ಲರು ಒಪ್ಪಿದ್ದರೆ ಇಂದು ಕರ್ನಾಟಕವು ತುಳು ರಾಜ್ಯವಾಗುತ್ತಿತ್ತು, ಆದರೆ ಅವರು ಎಲ್ಲರ ಮನವಿಯ ಮೇರೆಗೆ ಕನ್ನಡ ರಾಜ್ಯಕ್ಕೆ ಒಪ್ಪಿಗೆ ನೀಡಿದ್ದರು. ಇದನ್ನು ವಿಭಜನೆಯ ನೆಪದಲ್ಲಿ ಒಡೆದರೆ ಅಪಾಯಕಾರಿ ಎಂದು ಎಚ್ಚರಿಸಿದರು.
        ಕಳೆದ ಮೂರು ದಿನಗಳಲ್ಲಿ ನಡೆದ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಾಡೋಜ ಕೆ.ಎಸ್. ನಿಸಾರ್ ಅಹಮದ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿ ನುಡಿಸಿರಿಯ ಸಾಂಸ್ಕೃತಿಕ ಕಾರ್ಯಕ್ರಮ ರೋಮಾಂಚನಕಾರಿ. ವಿಚಾರಗೋಷ್ಠಿಯ ಮಾಹಿತಿಯ ಸಂಗ್ರಹ ಅಮೋಘವಾದದು ಎಂದ ಅವರು ನುಡಿಸಿರಿಯಲ್ಲ ಅಡಿಕೆಯ ಹಾರ ಹಾಕಿರುವುದಕ್ಕೆ ಸಂತಸ ವ್ಯಕ್ತ ಪಡಿಸಿದರು.
     ಸಾಣೆಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಪ್ರಶಸ್ತಿಗೆ ಉತ್ತರಿಸುತ್ತಾ ಪ್ರತಿಭಾನ್ವಿತರಿಗೆ ಸನ್ಮಾನ ಸತ್ಪಪರಂಪರೆ. ಪ್ರಶಸ್ತಿ ಸಂತಸ ನೀಡಿದೆ ಹಾಗು ಹೊಣೆಗಾರಿಕೆಯನ್ನು ಹೆಚ್ಚಿಸಿದೆ. ಆದರೆ ತಾನು ಪ್ರಶಸ್ತಿಯನ್ನು ಮಾತ್ರ ಪಡೆಯಲು ಬಂದದ್ದಲ್ಲ ಇಲ್ಲಿನ ಆಗು ಹೋಗುಗಳ ಬಗ್ಗೆ ಕಲಿಯಲು ಬಂದಿದ್ದೇನೆ ಎಂದ ಅವರು ಆಳ್ವ ಒಬ್ಬರೇ ವ್ಯಕ್ತಿ, ಶಕ್ತಿಯಾಗಿ ಕನ್ನಡ ನಾಡು ಕಟ್ಟುವ ಕೆಲಸ ಮಾಡುತ್ತಿರುವುದು ಮೆಚ್ಚುವಂತಹ ಸಂಗತಿ ಎಂದು ಹೇಳಿದರು.