ಮೂಡುಬಿದಿರೆ : ಎಲ್ಲ ಚಳವಳಿಗೂ ಮಾಧ್ಯಮದ ಅಗತ್ಯವಿದೆ. ಚಳವಳಿ ಎಂದರೆ ಬೀದಿಗಿಳಿದು ಹೋರಾಟ ಮಾಡುವುದಲ್ಲ ಎಂದು ಹವ್ಯಾಸಿ ಪತ್ರಕರ್ತ ಡಾ.ನಿರಂಜನ ವಾನಳ್ಳಿ ಹೇಳಿದರು.
ಅವರು ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆದ ಕಲೆ-ಮಾದ್ಯಮ ಚಳವಳಿಗಳು ವಿಚಾರಗೋಷ್ಟಿಯಲ್ಲಿ ಪತ್ರಿಕಾ ವಿದ್ಯುನ್ಮಾನ ಚಳವಳಿ ಏಂಬ ವಿಷಯವಾಗಿ ಮಾತನಾಡಿದರು.
ಒಂದು ಮನೆಗೆ ಕಿಟಕಿ ಬಾಗಿಲುಗಳು ಏನು ಮಾಡುತ್ತವೋ ಆ ಕೆಲಸ ಮಾಧ್ಯಮ ಮಾಡಬೇಕು. ನೂರೆಪ್ಪತ್ತು ವರ್ಷಗಳ ಮಾಧ್ಯಮ ಚರಿತ್ರೆ ಗಮನಿಸಿದ್ರೆ ಮಾಧ್ಯಮ ಚಳುವಳಿಗಾಗಿ ಪೂರಕ ವಾತವರಣ ಸೃಷ್ಟಿಸಿಕೊಂಡದ್ದು ತಿಳಿಯುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ ಲಾಭದಾಯಕ ಪತ್ರಿಕೋದ್ಯಮ ಆಗಿರಲಿಲ್ಲ. ಹಿಂದೆ ದುಡ್ಡು ಬಿತ್ತಿ ದುಡ್ಡು ಬೆಳೆಯುವ ಕೃಮವೂ ಮಾದ್ಯಮದಲ್ಲಿರಲಿಲ್ಲ. ಗಾಂದೀಜಿ ಪತ್ರಿಕೆ ತರುವ ಸಮಯದಲ್ಲಿ ಕಡಿಮೆ ಪ್ರಸಾರ ಇದ್ದವು.ಆದರೂ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಪ್ರಸಾರವಾಗ್ತಿತ್ತು.ಇಂದಿನ ದಿನಗಳಲ್ಲಿ ಪ್ರಸಾರ ಇದೆ ಆದರೆ ಜನರನ್ನು ತಲುಪಲು ಯಶಸ್ವಿಯಾಗುತ್ತಿಲ್ಲ. ಒಂದು ಉತ್ತಮ ಲೇಖನದ ವಿಷಯದಲ್ಲೂ ಅಷ್ಟೇ ಓದುಗರಿಗಿಂತ ನೋಡುಗರೇ ಜಾಸ್ತಿಯಾಗುತ್ತಿರುವುದು ವಿಪರ್ಯಾಸ ಎಂದರು.
ರೇಡಿಯೊ ಬಗ್ಗೆ ಮಾತನಾಡುತ್ತಾ ಟಿವಿ ಬಂದ ಮೇಲೆ ಹಿಂದೆ ಬಿದ್ದ ರೇಡಿಯೊ ಈಗ ಎಫ್ಎಮ್ನ ರೂಪದಲ್ಲಿ ಮರುಹುಟ್ಟು ಪಡೆದುಕೊಂಡಿದೆ. ಅದು ಜನರನ್ನು ಮುಟ್ಟಬಹುದು ಆದರೆ ತಟ್ಟಬಹುದೇ ಎಂಬ ಪ್ರಶ್ನೆ ಅದರೊಂದಿಗೆ ಹುಟ್ಟಿಕೊಂಡಿದೆ.ಕರ್ನಾಟಕ ಸರಕಾರ ಕನ್ನಡ ಭಾಷೆಯ ಮೇಲೆ ತೋರಿಸಿದ ತಾತ್ಸಾರ ಇಂದು ಕನ್ನಡ ಮಾಧ್ಯಮ ಎದುರಿಸುತ್ತಿದೆ. ಮಾಧ್ಯಮ ಕೇವಲ ಮನೋರಂಜನೆಗಷ್ಟೇ ಸೀಮಿತವಾಗದೆ ಕಟ್ಟ ಕಡೆಯ ವ್ಯಕ್ತಿಯ ಕಡೆಗೂ ಗಮನಹರಿಸಬೇಕು ಎಂದು ಅಭಿಪ್ರಾಯ ಪಟ್ಟರು .
ದೀಕ್ಷಾ ಹೆಗ್ಡೆ ಹರ್ಕೂರು

