ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013 ರ ಪ್ರಶಸ್ತಿ ಪ್ರಧಾನ

ಮೂಡುಬಿದಿರೆ:  ನಾವು ನಮ್ಮ ನಾಡಿನಲ್ಲಿ ಮಾಡುವ ಕನ್ನಡ ಸೇವೆಗಿಂತ ವಿದೇಶದ ನೆಲದಲ್ಲಿ ಮತ್ತು ಕನ್ನಡೇತರ ಸ್ಥಳಗಳಲ್ಲಿ ಮಾಡುವ ಸೇವೆ ಅನುಪಮವಾದುದು ಎಂದು ವಿಶ್ವ ನುಡಿಸಿರಿ ವಿರಾಸತ್ ನ ಸರ್ವಾಧ್ಯಕ್ಷ ಡಾ. ಬಿ. ಎ. ವಿವೇಕ ರೈ ಹೇಳಿದರು
     ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದೇಶಿ, ಹೊರನಾಡು ಮತ್ತು ಗಡಿನಾಡುಗಳಲ್ಲಿ ಅನುಪಮ ಸೇವೆ ಸಲ್ಲಿಸಿದವರಿಗೆ ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್  2013 ರ ಪ್ರಶಸ್ತಿಯನ್ನು ಪ್ರಧಾನ ಮಾಡಿ ಮಾತನಾಡುತ್ತಿದ್ದರು
 ಅಬುದಾಬಿಯ 'ನ್ಯೂ ಮೆಡಿಕಲ್ ಸೆಟರ್' ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಅವರಿಗೆ, ಆರೋಗ್ಯ ಸೇವೆ, ಕನ್ನಡ ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಗಾಗಿ, ಡಾ. ಸುಮಿಯೋ ಮೊರಿಜಿರಿ ಜಪಾನ್, ಕನ್ನಡ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಸಾಧನೆಗಾಗಿ ಅಮೇರಿಕಾದ 'ಅಕ್ಕ' ಕನ್ನಡ ಸಂಘ'ವನ್ನು ವಿದೇಶದಲ್ಲಿ ಸ್ಥಾಪಿಸಿ, ಕನ್ನಡ ಸಾಹಿತ್ಯ ಸಂಸ್ಕೃತಿ ಪ್ರಸರಣಕ್ಕಾಗಿ ಅಕ್ಕದ ಪೂರ್ವಧ್ಯಕ್ಷ ಅಮರನಾಥ್ ಗೌಡ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ನಳಿನ್ ಕುಮಾರ್ ಪರ್ ಸಾದ್ ಲಂಡನ್, ವಿದೇಶದಲ್ಲಿ ಕನ್ನಡ ಸೇವೆಗಾಗಿ ಜರ್ಮನಿ ವೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಡೋಲಜಿ ಪೀಠವನ್ನು ಸ್ಕೃತಿ ಪ್ರಸಾರಕ್ಕಾಗಿ( ಭಾರತದಲ್ಲಿ ಇಡೋಲಜಿಯ ಜರ್ಮನ್ ರಾಜತಾಂತ್ರಿಕ ಮುಖ್ಯಸ್ಥ ಹ್ಯಾನ್ಸ್ ಗ್ಯುಟರ್ ಲ್ಯೂಫ್ಲರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ) ಪ್ರಶಸ್ತಿ ಪ್ರಧಾನ ಮಾಡಿ  ಗೌರವಿಸಲಾಯಿತು. 

   ಹೊರನಾಡಿನ ಕನ್ನಡಿಗರಲ್ಲಿ ಮುಂಬೈ ವಿವಿಯಲ್ಲಿ ಸೇವೆ ಸಲ್ಲಿಸಿದ ಡಾ. ಜಿ.ಡಿ ಜೋಶಿ, ಡಾ ವ್ಯಾಸರಾಯ ನಿಜೂರು, ಡಾ. ತಾಳ್ತಜೆ ವಸಂತ ಕುಮಾರ್, ದೆಹಲಿಯ ಡಾ.ಪುರುಷೋತ್ತಮ ಬಳಿಮಲೆ,   ಬಾ.ಸಾಮಗ ದೆಹಲಿ, ಅವರುಗಳು ಹೊರನಾಡಿನಲ್ಲಿ ಕನ್ನಡದ ಸಂಸ್ಕೃತಿ ಪ್ರಸರಣಾ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

 ಗಡಿನಾಡಿನಲ್ಲಿದ್ದು ಕನ್ನಡ ಸೇವೆಸಲ್ಲಿಸುತ್ತಿರುವ ಭಾಲ್ಕಿ ಹಿರೇಮಠ್ ನ ಸ್ಥಾನದ ಬಸವಲಿಂಗ ಪಟ್ಟದ್ದೇವರು, ಮಲ್ಲಿಕಾರ್ಜುನ ಸೋಮಶೇಖರ್ ಮದ್ದೆ, ಸ್ನೇಹ ಕಾಸರಗೋಡು ಇವರುಗಳನ್ನು ಸನ್ಮಾನಿಸಲಾಯಿತು.
    ಪ್ರಶಸ್ತಿಯು 25000 ಸಾವಿರ ರೂ ನಗದು ಹಾಗೂ ಫಲಕವನ್ನೊಳಗೊಂಡಿತ್ತು. ಸನ್ಮಾನಿತರಿರನ್ನು ಆರತಿ ಬೆಳಗಿ ಹರಸಲಾಯಿತು. ನುಡಿಸಿರಿಯ ರೂವಾರಿ ಡಾ ಎಂ ಮೋಹನ್ ಆಳ್ವ ಅತಿಥಿಗಳನ್ನು ಸ್ವಾಗತಿಸಿದರು.