ಮೂಡುಬಿದಿರೆ: ಅಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ಗೆ ನಿನ್ನೆ ತೆರೆಬಿದ್ದಿತು. ತಮ್ಮ ಮನೆಯ ಸಂಭ್ರಮವೆಂಬಂತೆ ಕಳೆದ ನಾಲ್ಕು ದಿನಗಳನ್ನು ಇಲ್ಲಿಯೇ ಕಳೆದ ಸಾಹಿತ್ಯಾಸರು, ವಿದ್ಯಾರ್ಥಿಗಳ ಮೊಗದಲ್ಲಿ ಇಷ್ಟು ಬೇಗ ಸಮ್ಮೇಳನ ಯಾಕೆ ಮುಗಿಯಿತೆಂಬ ಎಂಬ ಭಾವ ಕಾಣುತ್ತಿತ್ತು. ದೂರ ದೂರದ ಉರುಗಳಿಂದ ಆಗಮಿಸಿದವರು ಮುಂಜಾವಿನಲ್ಲೇ ಹೊರಟು ನಿಂತಿದ್ದರೇ, ಕೆಲವರು ಅಲ್ಲಿ ಇಲ್ಲಿ ಸುತ್ತಾಡುತ್ತಿದ್ದರು. ನಾಲ್ಕು ದಿನಗಳ ಕಾಲ ಗಿಜುಗುಡುತ್ತಿದ್ದ ವಿದ್ಯಾಗಿರಿಯ ಮೈದಾನವೇಕೊ ಭಿಕೋ ಎನ್ನುತ್ತಿತ್ತು.
ತಡ ರಾತ್ರಿಯ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸವಿದ ಡಾ ಎಂ ಮೋಹನ್ ಆಳ್ವರು ಬೆಳೆಗ್ಗೆ ಎಂದಿನಂತೆ ತಮ್ಮ ಕಛೇರಿಗೆ ಆಗಮಿಸಿದ್ದರು.
Photos by - Shekar Ajekar
| ಹೊರಟೆವು ನಾವು |

