ಮೂಡುಬಿದಿರೆ: ಆರೋಗ್ಯಪೂರ್ಣ ಬದುಕಿನಲ್ಲಿ ನೆಮ್ಮದಿ ಮತ್ತು ಲಾಭ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಕೃಷಿಯಲ್ಲಿ ಲಾಭ ಇಲ್ಲ ಎ್ಲಂಬುವವರಿಗೆ ತರಬೇತಿ ಅಗತ್ಯ. ಹಾಗೆಯೆ ಶ್ರೀಮಂತರು ಲೆಕ್ಕಪತ್ರ ನೋಡುವುದು ಲಾಭದ ಮಾತು. ರೈತರು ದಾಖಲೆಯ ಲೆಕ್ಕಮಾಡುವುದಿಲ್ಲ ಎಂದು ಬನವಾಸಿಯ ಪ್ರಗತಿಪರ ಕೃಷಿಕ ಡಾ. ರವೂಫ್ ಸಾಹೇಬ್ ನುಡಿದರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನಲ್ಲಿ ನಡೆಯುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ನಡೆಯುತ್ತಿರುವ ಕೃಷಿಮೇಳದಲ್ಲಿ ಆರೋಗ್ಯಪೂರ್ಣ ಬದುಕಿನಲ್ಲಿ ವಾಣಿಜ್ಯ ಬೆಳೆಗಳಮಹತ್ವದ ಕುರಿತು ಉಪನ್ಯಾಸ ನೀಡಿದರು. ಕೃಷಿಯಲ್ಲಿ ಯಾರೂ ದೊಡ್ಡವರಲ್ಲ ಸಣ್ಣವರು ಎಂಬ ವಿಚರವಾಗಿನಿರಂತರವಾಗಿ ಕಲಿಕೆತಯಿಂದ ನಾವು ಬೆಳೆಯಬೇಕು ಎಂದು ಹೇಳಿದರು.
ಎಸ್.ಕೆ.ಡಿ.ಆರ್.ಡಿ.ಪಿ.ಯ ವ್ಯವಸ್ಥಾಪಕ ಬಾಲಕೃಷ್ಣ ಪೂಜಾರಿ,ಪ್ರಗತಿಪರ ಕೃಷಿಕರಾದಹೇಮಚಂದ್ರ,ಪಡಾರು ರಾಮಕೃಷ್ಣ ಶಾಸ್ತ್ರಿ ಉಪಸ್ಥಿತರಿದ್ದರು.

