ಮೂಡುಬಿದಿರೆ: ಆಧುನಿಕ ಸವಾಲುಗಳಿಗೆ ಒಡ್ಡಿ ಕೊಳ್ಳಲಾರದೆ ನಲುಗುತ್ತಿರುವ ಕೃಷಿ ಕ್ಷೇತ್ರಕ್ಕೆ ಹೊಸ ಸಂಚಲನ ಮೂಡಿಸುವ ಉದ್ದೇಶದಿಂಧ ನಡೆಯುತ್ತಿರುವ ರಾಜ್ಯ ಮಟ್ಟದ ೩೪ ನೇ ಕೃಷಿಮೇಳ ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಮೈದಾನದಲ್ಲಿ ಡಿಸೆಂಬರ್ ೨೭ ರಿಂದ ನಡೆಯಲಿದ್ದು ಪೂರ್ವ ಸಿದ್ಧತೆಗಳು ಭರದಿಂದ ಸಾಗಿವೆ.
ಕಳೆದ ಕೆಲದಿಂದ ದಿನಪ್ರಂತಿ ಸುಮಾರು ೫೦೦ ಜನ ಕೃಷಿ ಮೇಳದ ಸಿದ್ಧತೆಯಲ್ಲಿ ಸ್ವಯಂಸೇವಕರಾಗಿ ಸಏವೆ ಸಲ್ಲಿಸುತ್ತಿದ್ದಾರೆ.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಈ ಕೃಷಿ ಸಮ್ಮೇಳನಗಳನ್ನು ಆಯೋಜಿಸುತ್ತಾ ಬಂದಿದ್ದು ಕೃಷಿಕರು, ಕೃಷಿ ತಂತ್ರಜ್ಞಾನ, ಕೃಷಿ ಸಂಸ್ಕೃತಿಯ ಮಂಥನ ಸೇರಿದಂತೆ ಒಂದು ಸಂವಹನ ಬೃಹತ್ ವೇದಿಕೆಯಾಗಿ ಬೆಳೆದು ಬಂದಿದೆ.
ಇದುವರೆಗೆ ಗ್ರಾಮಾಭಿವೃದ್ದೀ ಯೋಜನೆ ತನ್ನ ನೇರ ಪ್ರಾಯೋಕತ್ವ ಮತ್ತು ಸಂಘಟನೆಯಲ್ಲೇ ನಡೆಯುತ್ತಾ ಬಂದಿದ್ದು ೩೪ ನೇ ಸಮ್ಮೇಳನ ಆಳ್ವಾಸ್ ವಿಶ್ವ ನುಡಿ ಸಿರಿ ವಿರಾಸತ್‌ನಲ್ಲಿ ನಡೆಯುತ್ತಿರುವುದು ಮತ್ತು ಗ್ರಾಮಾಭಿವೃದ್ದೀ ಯೋಜನೆಯ ಕನಸುಗಾರ ಡಾ. ವೀರೇಂದ್ರ ಹೆಗ್ಗಡೆ ಅವರೇ ವಿಶ್ವ ಮಟ್ಟದ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿರುವುದು ಈ ಬಾರಿಯ ವಿಶೇಷವಾಗಿದೆ.
ಕೃಷಿ ಮೇಳಕ್ಕೆ ಇನ್ನೆರಡೇ ದಿನಗಳು ಬಾಕಿಯಿದ್ದು ಮೊದಲ ಬಾರಿಗೆ ಕಾಲೇಜೊಂದರ ಆಶ್ರಯದಲ್ಲಿ ಸಾವಿರಾರು ಯುವಕರು ಭಾಗವಹಿಸುವ ಕಾರ್ಯಕ್ರಮದ ಭಾಗವಾಗಿದ್ದು ಯುವಕರಿಗೆ ಈ ಬಾರಿಯ ಕೃಷಿ ಸಮ್ಮೇಳನ ಹೆಚ್ಚು ತಲುಪ ಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.
೧೯೮೪ ರಲ್ಲಿ ಆರಂಭವಾದ ಕೃಷಿ ಮೇಳ ೧೯೮೪,೧೯೮೫, ೧೯೮೮ ರಲ್ಲಿ ವರ್ಷಕ್ಕೆ ಎರಡೆರಡು ಬಾರಿ ನಡೆದಿದ್ದು, ಈ ಬಾರಿ ಕೂಡಾ ಫೆಬ್ರವರಿಯಲ್ಲಿ ಕುಮಟಾದಲ್ಲಿ ಮೇಳ ನಡೆದಿದ್ದು ಈ ವರ್ಷದ ಎರಡನೆ ಕೃಷಿ ಮೇಳವಾಗಿದೆ. ೧೯೮೯ ರಲ್ಲಿ ಫೆಬ್ರವರಿ, ಮೇ ಮತ್ತು ಡಿಸೆಂಬರ್ ನಲ್ಲಿ ಮೂರು ಬಾರಿ ನಡೆದು ಹಾಟ್ರಿಕ್ ಸಾಧನೆ ತೋರಿತ್ತು.
ಜೈನರ ಪವಿತ್ರ ಕ್ಷೇತ್ರ ವೇಣೂರಿನಿಂದ ಆರಂಭವಾದ ಕೃಷಿ ಮೇಳ ಈ ವರ್ಷ ಜೈನ ಕಾಶಿ ಮೂಡುಬಿದಿರೆಗೆ ಡಾ. ಮೋಹನ ಆಳ್ವ ಸಾರಥ್ಯದ ವಿಶ್ವ ನುಡಿಸಿರಿಯ ಕಾರಣದಿಂದ ಬಂದಿದ್ದು ಪೇಟೆಯ ಮಂದಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.
ವೇಣೂರು, ಕಲ್ಲೇರಿ, ಬಳ್ಳಮಂಜ, ಮುಂಡಾಜೆ, ಅಳದಂಗಡಿ, ಶಿಬಾಜೆ, ನಿಡ್ಲೆ, ಪದ್ಮುಂಜ, ಪೆರಿಂಜೆ, ಕೊಕ್ರಾಡಿ, ಗೇರುಕಟ್ಟೆ,ಸವಣಾಲು, ಕಿಲ್ಲೂರು, ಪಡಂಗಡಿ, ಬೆಳಾಲ್, ನೆರಿಯ, ಬಳಂಜ, ಬೆಳ್ತಂಗಡಿ, ಅಳಿಯೂರು, ಶಿರ್ಲಾಲು, ತೋಡಾರು, ಉಜಿರೆ, ಸವಣೂರು, ಹೆಬ್ರಿ, ಕಟೀಲು, ಕೋಟೇಶ್ವರ, ಬಂಟ್ವಾಳ, ಶಿರಸಿ, ತೀರ್ಥಹಳ್ಳಿ, ಕಡೂರು, ಬಜಗೋಳಿ, ಹಾವೇರಿ, ಕುಮುಟಾಗಳಲ್ಲಿ ಕೃಷಿ ಮೇಳ ನಡೆದಿತ್ತು.
ಡಿ.೨೦ ರಿಂದ ೩ ದಿನದ ಕೃಷಿ ಹಬ್ಬ
ಡಿಸೆಂಬರ್ ೨೦ ರಂದು ಕರ್ನಾಟಕ ಸರ್ಕಾರದ ಕೄಇ ಸಚಿವ ಕೃಷ್ಣ ಬೈರೇಗೌಡ ಅವರು ಮೇಳವನ್ನು ಉದ್ಘಾಟಿಸಲಿದ್ದು, ಸಚಿವರಾದ ಯು.ಟಿ ಖಾದರ್, ಕೆ. ಅಭಯಚಂದ್ರ, ವಿನಯ್ ಕುಮಾರ್ ಸೊರಕೆ ಅನುಕ್ರಮವಾಗಿ ವಿಚಾರ ಗೋಷ್ಠಿ, ವಸ್ತು ಪ್ರದರ್ಶನ, ಜಾನುವಾರು ಪ್ರದರ್ಶನಗಳಿಗೆ ಚಾಲನೆ ನೀಡುವರು. ಕೃಷಿ ಮೇಳದ ಸಮಿತಿಗೆ ಸಚಿವ ಬಿ. ರಮನಾಥ ರೈ ಅವರು ಅಧ್ಯಕ್ಷರಾಗಿದ್ದಾರೆ. ಕೆ.ಅಭಯಚಂದ್ರ ಜೈನ್ ಮತ್ತು ಡಾ. ಮೋಹನ ಆಳ್ವ ಅವರು ಕಾರ್ಯಾಧ್ಯಕ್ಷರಾಗಿದ್ದಾರೆ.
ದೊಡ್ಡ ಬಳ್ಳಾಪುರದ ಪ್ರಗತಿ ಪರ ಕೃಷಿಕ ಡಾ.ಎಲ್.ನಾರಾಯಣ ರೆಡ್ಡಿ ಅವರು ಆಶಯ ಭಾಷಣ ಮಾಡಲಿರುವರು. ಹತ್ತು ವಿಚಾರಗೋಷ್ಠಿಗಳು ಆಯೋಜಿತವಾಗಿದ್ದು, ಅನೇಕ ಕೃಷಿ ಸಾಧಕರು ಸಾಧಕರು ತಮ್ಮ ಅನುಭವಗಳನ್ನು ಜನರೊಂದಿಗೆ ವೇದಿಕೆಯಲ್ಲಿ ಹಂಚಿಕೊಳ್ಳಲಿರುವರು.
ಭಾರಿ ತಯಾರಿ:
೧೫ ಎಕ್ರೆಗೂ ಮೀರಿದ ಜಮೀನಿನಲ್ಲಿ ಸಂಪ್ರದಾಯದಂತೆ ಈ ಹಿಂದಿನ ಕೃಷಿ ಮೇಳಗಳಿಗೆ ಕಡಿಮೆಯಾಗದಂತೆ ಮೇಳ ನಡೆಯಲು ಸಿದ್ಧತೆಗಳು ನಡೆಯುತ್ತಿವೆ.
ಆಳ್ವಾಸ್ ಬಾಕಿಮಾರು ಗದ್ದೆಯ ಭತ್ತದ ಕೋಯ್ಲು ನಡೆದಿದ್ದು. ಮೇಳದ ದಿನ ಕೃಷಿ ಚಟುವಟಿಕೆಗಳು ನಡಯಲಿದೆ. ಆಳ್ವಾಸ್ ಸಿರಿ ಸುಗ್ಗಿಯಲ್ಲಿ ನೆಟ್ಟ ಗದ್ದೆಯಲ್ಲಿ ಕಂಬಳ, ಉಳುಮೆ ಸೇರಿದಂತೆ ಸಕಲ ಸಂಭ್ರಮಗಳಿಗೆ ಗದ್ದೆ ಸಾಕ್ಷಿ ಬರೆಯಲಿದೆ.
ಶಿವಮೊಗ್ಗದ ಜೋಳದ ಬೆಳೆಗಾರರು ಜೋಳದ ಮನೆಯ ತಯಾರಿಯಲ್ಲಿದ್ದಾರೆ. ಇನ್ನೂ ಅನೇಕ ಸಂಗತಿಗಳ ಸಿದ್ಧತೆಗಳು ಪೂರ್ಣತೆಯತ್ತ ಸಾಗುತ್ತಿವೆ. ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು, ಒಕ್ಕೂಟಗಳ ಪದಾಧಿಕಾರಿಗಳು ಕೆಲಸದ ಮೇಲ್ವಿಚಾರಣೆ ನಿರತರಾಗಿದ್ದಾರೆ. ಮೈದಾನದುದ್ದಕ್ಕೂ ಪೆಂಡಾಲುಗಳು, ವಿವಿಧ ಕೃಷಿ ಸಂಬಂಧಿ ಚಟುವಟಿಕೆಗಳು ಗರಿಗೆದರಿದೆ.
ಬುಧವಾರ ಮಧ್ಯಾಹ್ನದ ಹೊತ್ತಿಗೆ ಮೇಳದ ಪರಿಪೂರ್ಣ ಸಿದ್ಧತೆಗಳು ಪೂರ್ಣಗೊಂಡಿದ್ದು ಕಾರ್ಯಕರ್ತರು ಕೂಡಾ ಕೃಷಿ ಮೇಳ ಉಳಿದೆಲ್ಲಾ ಕೃಷಿ ಮೇಳಕ್ಕಿಂತ ಭಿನ್ನವಾಗಿ ನಿಲ್ಲ ಬಲ್ಲದು ಎಂಬ ಆಶಯ ಹೊಂದಿದ್ದಾರೆ.
ಕೃಷಿ ಮೇಳದ ವಿಶೇಷತೆಗಳು.
ಕೃಷಿಕರಿಗೆ ಮಾಹಿತಿ ಮತ್ತು ಖರೀದಿಗೆ ಅವಕಾಶವಿರುವ ಕೃಷಿ ಪ್ರದರ್ಶನ, ಆಧನಿಕ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ-ಮಾಹಿತಿ, ಆಕರ್ಷಕ ಫಲಪುಪ್ಪ ಪ್ರದರ್ಶನ, ರೈತರಿಂದ ರೈತರಿಗೆ ರೈತರ ಸಂತೆ, ರೈತರ ಸಮಸ್ಯಾ ಸಲಹಾ ಕೇಂದ್ರಗಳು, ವಿವಿಧ ಇಲಾಖೆಗಳ ಸೌಲಭ್ಯಗಳ ಮಾಹಿತಿ, ಚಲನಚಿತ್ರ ಪ್ರದರ್ಶನ, ವಿಚಾರಗೋಷ್ಠಿಗಳು ಕೃಷಿ ತಜ್ಞರಿಂದ ಮಾಹಿತಿ, ಮಾರ್ಗದರ್ಶನ, ಯುವ ಜನರಿಗಾಗಿ ಶಕ್ತಿ ಕಲ್ಲು ಪ್ರದರ್ಶನ, ಸಂಜೆಗೆ ವಿವಿಧ ವಿನೋದಾವಳಿಗಳು ನಡೆಯಲಿವೆ.
ಚಿತ್ರ ವರದಿ: ಶೇಖರ್ ಅಜೆಕಾರ್
ಪತ್ರಕರ್ತರು

