ಡಿ.18ರಂದು ವಿಶ್ವ ನುಡಿಸಿರಿ ವಿರಾಸತ್‌ ಸಮಗ್ರ ಪ್ರದರ್ಶನಗಳ ಉದ್ಘಾಟನೆ

ಮೂಡಬಿದಿರೆ: ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ - 2013ರ ಅಂಗವಾಗಿ ಏರ್ಪಡಿಸಲಾಗಿರುವ ವಿವಿಧ ವಸ್ತು ಪ್ರದರ್ಶನಗಳು, ಫಲಪುಷ್ಪ ಪ್ರದರ್ಶನ, ಪಾಕಶಾಲೆ ಇವುಗಳ ಸಮಗ್ರ ಉದ್ಘಾಟನಾ ಸಮಾರಂಭವು ವಿದ್ಯಾಗಿರಿಯಲ್ಲಿ ಡಿ. 18ರಂದು ಅಪರಾಹ್ನ 3.30ಕ್ಕೆ ಜರಗಲಿದೆ.
    ಉಡುಪಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು, ಮೂಡಬಿದಿರೆ ಶ್ರೀ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ|ರೆ| ಡಾ| ಅಲೋಶಿಯಸ್‌ ಪಾವ್‌É ಡಿ'ಸೋಜಾ, ಕಟೀಲು ಕ್ಷೇತ್ರದ ಆನುವಂಶಿಕ ಅರ್ಚಕ ವೇ|ಮೂ| ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಸಚಿವ ಕೆ. ಅಭಯಚಂದ್ರ, ಮಂಗಳೂರು ವಿ.ವಿ. ಉಪಕುಲಪತಿ ಪ್ರೊ| ಟಿ.ಸಿ. ಶಿವಶಂಕರ ಮೂರ್ತಿ, ಯೇನಪೊಯ ವಿ.ವಿ. ಕುಲಪತಿ ವೈ. ಅಬ್ದುಲ್‌ ಕುಂಞಿ, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ವಿವಿಧ ಉದ್ಘಾಟನೆಗಳನ್ನು ನೆರವೇರಿಸಲಿದ್ದಾರೆ ಎಂದು ಕಾರ್ಯಾಧ್ಯಕ್ಷ ಡಾ| ಎಂ, ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.