ಹೊರನಾಡು, ಗಡಿನಾಡು, ವಿದೇಶ ಕನ್ನಡಿಗರಿಗೆ ಸನ್ಮಾನ

ಮೂಡಬಿದಿರೆ: ಆಳ್ವಾಸ್ ವಿಶ್ವನುಡಿಸಿರಿ ವಿರಾಸತ್ 2013ರಲ್ಲಿ ವಿದೇಶ, ಹೊರನಾಡು, ಗಡಿನಾಡುಗಳಲ್ಲಿ ಕನ್ನಡ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದವರಿಗೆ ಆಳ್ವಾಸ್ ವಿಶ್ವನುಡಿಸಿರಿ 2013 ಗೌರವ ಹಾಗೂ ಸನ್ಮಾನವನ್ನು ನೀಡಲಾಗುತ್ತಿದೆ.
   ಡಿ.21ರಂದು ರತ್ನಾಕರ್ಣಿ ವೇದಿಕೆಯಲ್ಲಿ ನಡೆಯುವ ಸಮಾರಂಭದಲ್ಲಿ ಒಟ್ಟು ವಿದೇಶದಲ್ಲಿರುವ 7 ಹೊರನಾಡಿನ 7 ಹಾಗೂ ಗಡಿನಾಡಿನ 3 ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಈ ಗೌರವ ಸನ್ಮಾನ ನಡೆಯಲಿದೆ.
ಚಚಚಚಚಅಬುದಾಬಿಯ 'ನ್ಯೂ ಮೆಡಿಕಲ್ ಸೆಟರ್' ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮಶ್ರೀ ಡಾ. ಬಿ.ಆರ್ ಶೆಟ್ಟಿ ಅವರಿಗೆ ಆರೋಗ್ಯ ಸೇವೆ, ಕನ್ನಡ ಸಂಸ್ಕೃತಿ ಮತ್ತು ಸಾಮಾಜಿಕ ಸೇವೆಗಾಗಿ, ಡಾ. ಸುಮಿಯೋ ಮೊರಿಜಿರಿ ಜಪಾನ್ ಅವರನ್ನು ಕನ್ನಡ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಸಾಧನೆಗಾಗಿ ಅಮೇರಿಕಾದ 'ಅಕ್ಕ' ಕನ್ನಡ ಸಂಘ'ವನ್ನು ವಿದೇಶದಲ್ಲಿ ಸ್ಥಾಪಿಸಿ, ಕನ್ನಡ ಸಾಹಿತ್ಯ ಸಂಸ್ಕೃತಿ ಪ್ರಸರಣಕ್ಕಾಗಿ ಅಕ್ಕದ ಪೂರ್ವಧ್ಯಕ್ಷ ಅಮರನಾಥ್ ಗೌಡ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
     ನಳಿನ್ ಕುಮಾರ್ ಪರ್ ಸಾದ್ ಲ ಡನ್ ಅವರಿಗೆ ವಿದೇಶದಲ್ಲಿ ಕನ್ನಡ ಸೇವೆಗಾಗಿ ಜರ್ಮನಿ ವೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಡೋಲಜಿ ಪೀಠವನ್ನು ಸ್ಕೃತಿ ಪ್ರಸಾರಕ್ಕಾಗಿ( ಭಾರತದಲ್ಲಿ ಇಡೋಲಜಿಯ ಜರ್ಮನ್ ರಾಜತಾಂತ್ರಿಕ ಮುಖ್ಯಸ್ಥ ಹ್ಯಾನ್ಸ್ ಗ್ಯುಟರ್ ಲ್ಯೂಫ್ಲರ್ ಪ್ರಶಸ್ತಿ ಸ್ವೀಕರಿಸಲಿದ್ದಾರೆ) ಸನ್ಮಾನಿಸಿ ಗೌರವಿಸಲಾಗುವುದು.
   ಹೊರನಾಡಿನ ಕನ್ನಡಿಗರಲ್ಲಿ ಮುಂಬೈ ವಿವಿಯಲ್ಲಿ ಸೇವೆ ಸಲ್ಲಿಸಿದ ಡಾ. ತಾಳ್ತಜೆ ವಸಂತ ಕುಮಾರ್, ದೆಹಲಿಯ ಡಾ.ಪುರುಷೋತ್ತಮ ಬಳಿಮಲೆ, ಮುಂಬೈಯ ಶಶಿಕಿರಣ್ ಶೆಟ್ಟಿ, ಡಾ ವ್ಯಾಸರಾಯ ನಿಜೂರು, ಡಾ. ಜಿ.ಡಿ ಜೋಶಿ, ಬಾ.ಸಾಮಗ ದೆಹಲಿ, ಅವರುಗಳು ಹೊರನಾಡಿನಲ್ಲಿ ಕನ್ನಡದ ಸಂಸ್ಕೃತಿ ಪ್ರಸರಣಾ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಗುವುದು.
      ಗಡಿನಾಡಿನಲ್ಲಿದ್ದು ಕನ್ನಡ ಸೇವೆಸಲ್ಲಿಸುತ್ತಿರುವ ಭಾಲ್ಕಿ ಹಿರೇಮಠ್ ನ ಸ್ಥಾನದ ಬಸವಲಿ ಗಪಟ್ಟದ್ದೇವರು, ಮಲ್ಲಿಕಾರ್ಜುನ ಸೋಮಶೇಖರ್ ಮದ್ದೆ, ಸ್ನೇಹ ಕಾಸರಗೋಡು ಇವರುಗಳು ಗೌರವ ಸನ್ಮಾನಕ್ಕೆ ಪಾತ್ರರಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.