ಮಾಧ್ಯಮಗಳು ಸಮಾಜದ ಪ್ರತಿಬಿಂಬ: ವಿಶ್ವೇಶ್ವರ್ ಭಟ್

ಮೂಡುಬಿದಿರೆ: ಮಾಧ್ಯಮಗಳು ಸಮಾಜದ ಪ್ರತಿಬಿಂಬವಾಗಿದ್ದು ಅದನ್ನು ಸಮಾಜದಿಂದ ಪ್ರತ್ಯೇಕಿಸಿ ನೋಡಲು ಸಾಧ್ಯವಿಲ್ಲ. ನಮ್ಮ ಸುತ್ತಮುತ್ತ ನಡೆಯುವುದನ್ನೇ  ಮಾಧ್ಯಮಗಳು ಎತ್ತಿ ತೋರಿಸುತ್ತವೆ. ಈ ನಡುವೆ ಕೆಲವು ಏರುಪೇರುಗಳಾಗಿರಬಹುದು ಎಂದು ಕನ್ನಡಪ್ರಭ ಹಾಗೂ ಸುವರ್ಣ ಸುದ್ದಿ ವಾಹಿನಿಯ ಸಂಪಾದಕ ವಿಶ್ವೇಶ್ವರ್ ಭಟ್ ಹೇಳಿದರು. 
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ನಾಲ್ಕನೇ ದಿನವಾದ ಇಂದು ವಿಚಾರಗೋಷ್ಠಿಯಲ್ಲಿ ಮಾಧ್ಯಮ ಎಂಬ ಕುರಿತು ಮಾತನಾಡುತ್ತಿದ್ದರು.
   ವಾಹಿನಿಗಳು ಒಳ್ಳೆಯ ಕಾರ್ಯಕ್ರಮವಗಳನ್ನು ಕೊಟ್ಟರೂ ಜನರು ಅದನ್ನು ಸ್ವೀಕರಿಸುತ್ತಿಲ್ಲ. ಸದ್ವಿಚಾರಗಳನ್ನು ನಿಡಿದರೆ ಟಿಅರ್ಪಿಯೇ ಇರುವುದಿಲ್ಲ. ಟಿಆರ್ಪಿಯು ಟಿವಿ ಕಾರ್ಯಕ್ರಮಗಳಿಗೆ ಪ್ರಮುಖವಾಗಿದ್ದು ವಾಹಿನಿಯೊಂದರ ಅಳಿವು ಉಳಿವು ಇದರಿಂದಲೇ ನಿರ್ಧಾರವಾಗುತ್ತದೆ. ಅನೇಕ ಬಗೆಯ ಒತ್ತಡ ಹಾಗೂ ಬಾಹ್ಯ ಶಕ್ತಿಗಳ ನಡುವಲ್ಲಿ ನಾವು ಕಾರ್ಯನಿರ್ವಹಿಸುತ್ತಿದ್ದರೂ ನಮ್ಮತನವನ್ನು ಇಂದಿಗೂ ಬಿಟ್ಟುಕೊಟ್ಟಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಹಲವಾರು ಭಾಷ್ಟಾಚಾರ ಪ್ರಕರಣಗಳು ಹೊರಬರಲು ಮಾಧ್ಯಮಗಳೇ ಪ್ರಮುಖ ಕಾರಣವಾಗಿದ್ದು ಇದು ಸಮಾಜವನ್ನು ಎಚ್ಚರಿಸುವ ಕೆಲಸವನ್ನು ಸದಾ ಮಾಡುತ್ತದೆ ಎಂದರು.