ಮೂಡಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ (ಡಿ. 19 - 22) ಅಂಗವಾಗಿ ಉಡುಪಿ - ದಕ್ಷಿಣ ಕನ್ನಡ - ಕಾಸರಗೋಡು ಜಿಲ್ಲೆಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಬಡಗುತಿಟ್ಟಿನ ಯಕ್ಷಗಾನ ಬಯಲಾಟ ಸ್ಪರ್ಧೆಯನ್ನು ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಡಿ. 9ರಿಂದ 11ರ ವರೆಗೆ ಏರ್ಪಡಿಸಲಾಗಿದೆ.
ವಿಜೇತ ತಂಡಗಳಿಗೆ ಶಾಶ್ವತ ಫಲಕ. ಪ್ರಶಸ್ತಿ ಪತ್ರ ಸಹಿತ ಪ್ರಥಮ ಬಹುಮಾನ 20,000 ರೂ., ದ್ವಿತೀಯ 15,000 ರೂ., ತೃತೀಯ 10,000 ರೂ. ನೀಡಲಾಗುವುದು.
ಡಿ. 9ರಂದು ಸಂಜೆ 4ಕ್ಕೆ ಉಭಯತಿಟ್ಟುಗಳ ಹಿರಿಯ ಕಲಾವಿದ ಪ್ರೊ| ಎಂ.ಎಲ್. ಸಾಮಗ ಸ್ಪರ್ಧೆಯನ್ನು ಉದ್ಘಾಟಿಸುವರು. ಎಂಜಿಎಂ ಕಾಲೇಜಿನ ಪ್ರಾಚಾರ್ಯ ಡಾ| ಹಾಲಾ ನಾಯ್ಕ ಮುಖ್ಯ ಅತಿಥಿಯಾಗಿರುತ್ತಾರೆ. ಒಟ್ಟು 5 ಕಾಲೇಜುಗಳ ತಂಡಗಳು ಭಾಗವಹಿಸಲಿವೆ. 11ರಂದು ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಡಾ| ಭಾಸ್ಕರಾನಂದ ಕುಮಾರ್ ಹಾಗೂ ಪ್ರೊ| ಹೆರಂಜೆ ಕೃಷ್ಣ ಭಟ್ ಭಾಗವಹಿಸಲಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.


