ಸಮಾಜದ ನೈಜತೆಯನ್ನು ಮಾಧ್ಯಮ ಭಿತ್ತರಿಸುತ್ತಿದೆ: ವಾನಳ್ಳಿ

ಓದುಗ ಮತ್ತು ಪ್ರೇಕ್ಷಕ ಬದಲಾಗದೆ ಮಾಧ್ಯಮಗಳ ವಸ್ತು ಬದಲಾಗುವುದಿಲ್ಲ. ಮಾಧ್ಯಮಗಳು ಬಡಿಸುವ ವಸ್ತು ಬದಲಾಗದೆ ಓದುಗ ಮತ್ತು ವೀಕ್ಷಕ ಬದಲಾಗಲು ಸಾಧ್ಯವಿಲ್ಲ ಎಂದು ಡಾ. ನಿರಂಜನ ವಾನಳ್ಳಿ ಹೇಳಿದರು. ಮಾಧ್ಯಮ- ವರ್ತಮಾನದ ತಲ್ಲಣಗಳು ಕುರಿತಾದ ವಿಶೇಷ ಉಪನ್ಯಾಸ ನೀಡಿದ ವಾನಳ್ಳಿ ಪ್ರತಿಯೋದ್ಯಮ ಯುದ್ಧವಾಗಿ ಪರಿವತಱನೆಯಾಗುತ್ತಿದೆ ಎಂದರು. ವಾನಳ್ಳಿ ಮಂಡಿಸಿದ ಮಂಡನೆಗಳ ಆಯ್ದ ಭಾಗಗಳು ಇಲ್ಲಿದೆ.
*ಮಾಧ್ಯಮ ಅಂದರೆ ಅಭಿವ್ಯಕ್ತಿಯ ಸಾಧನ.
*ಮಾಧ್ಯಮಗಳು ಒಂದಕ್ಕೊಂದು ಪೂರಕ. ಪ್ರತಿಯೊಂದು ಮಾಧ್ಯಮವೂ ಅದರದೇ ಆದಂತಹ ಹಿಂಬಾಲಕರನ್ನ ಪಡೆದುಕೊಂಡಿದೆ. ಒಂದೊಂದು ಕಾಲಕ್ಕೆ ತಕ್ಕಂತೆ ಒಂದು ಮಾಧ್ಯಮ ಪ್ರಸಿದ್ಧಿಯನ್ನು ಪಡೆಯುತ್ತೆ ಆದರೆ ಯಾವುದೇ ಮಾಧ್ಯಮ ಸಾಯೋದಿಲ್ಲ.
*ಕನ್ನಡ ಪತ್ರಿಕೆಗಳ ಬೆಳವಣಿಗೆ ಸಮಾಧಾನಕರವಾಗಿಲ್ಲ, ಇಡೀ ದೇಶದ ಮಟ್ಟಿಗೆ ನೋಡುವುದಾದರೆ ಕನ್ನಡ ಪತ್ರಿಕೆ ೩.೫ ರಷ್ಟು ಓದುಗರನ್ನು ಹೊಂದಿದೆ ಪಕ್ಕದ ಮಲಯಾಳಂ ಶೇಕಡ ೧೦ರಷ್ಟು ಓದುಗರನ್ನು ಹೊಂದಿದೆ ಅನ್ನುವುದು ಗಮನಾರ್ಹ.
* ಪತ್ರಕರ್ತರಿಗೆ ಕಾಡುವ ಅಭದ್ರತೆಗೆ ಹಣದಹಿಂದೆ ಬಿದ್ದಿರುವ ಮಾಧ್ಯಮ ನೀತಿಯೂ ಕಾರಣ.
*ಹೆತ್ತವರು ತಮ್ಮ ಮಕ್ಕಳನ್ನು ಪತ್ರಿಕೋದ್ಯಮಕ್ಕೆ ಸೇರಿಸುವಾಗ ನಂಗೆ ಪಾಪ ಪ್ರಜ್ಙೆ ಕಾಡುತ್ತದೆ
.ಯಾಕೆಂದರೆ ನೆಮ್ಮದಿಯ ಜೀವನವನ್ನು ಕೊಡುವ ಮಾಧ್ಯಮವಾಗಿ ಪಾತ್ರಿಕೋದ್ಯಮ ಉಳಿದಿಲ್ಲ.
* ಪತ್ರಿಕೋದ್ಯಮದ ಒಳಹೊಕ್ಕವರು ಐದಾರು ವರುಷಕ್ಕೆ ಅದನ್ನು ತೊರೆದ ಬೇರೆ ದಾರಿ ನೋಡುವವರ ಸಂಖ್ಯೆ ಏರುತ್ತಿದೆ.
* ಇಡೀ ಮಾಧ್ಯಮ ಕೆಟ್ಟಿದೆ ಅಂತ geಟಿeಡಿಚಿಟise ಮಾಡೋದು ತಪ್ಪು. ಇವತ್ತಿಗೂ ದೇಶದ ವ್ಯವಸ್ಥೆ ಉಳಿದಿದೆ ಅಂದರೆ ಅದಕ್ಕೆ ಕಾರಣ ಮಾಧ್ಯಮ. ಮುಖ್ಯವಾಹಿನಿಯ ಮಾಧ್ಯಮಗಳು ದೇಶದ ವ್ಯವಸ್ಥೆಯಲ್ಲಿ ಇವತ್ತಿಗೂ ಬಹಳ ಮುಖ್ಯ ಅನಿಸಿದೆ ಈ ರೀತಿಯಲ್ಲಿ ಮಾಧ್ಯಮದ ಪಾತ್ರ ಅಭಿನಂದನಾರ್ಹ
*ಸ್ಥಳೀಯ ಪತ್ರಿಕೋದ್ಯಮಕ್ಕೆ ಇಂದಿನ ದಿನ ಪ್ರಾಮುಖ್ಯತೆ ಸಿಕ್ಕಿದೆ. ಿದೊಂದು ಒಳ್ಳೆಯ ಬೆಳವಣಿಗೆ.
*ಮಾಧ್ಯಮಕ್ಕೆ ಬರುತ್ತಿರುವ ಹೊಸಬರಿಂದ ಭಾಷೆಗೆ ಮಾರಕತೆ ಎದುರಾಗಿದೆ. ಅವರ ಭಾಷಾ ಜ್ಙಾನದ ಮಟ್ಟ ಬಹಳ ಕೆಟ್ಟದ್ದು. ಇದರಿಂದ ಭಾಷಾ ತಲ್ಲಣ ಶುರುವಾಗಿದೆ. ಹೆಚ್ಚಾಗಿರುವ ಸ್ಪರ್ಧೆಯೂ ಟೆಲಿವಿಷನ್ ಮೀಡಿಯಾವೂ ಆತಂಕಕಾರಿಯಾಗಿ ಬೆಳೆದಿದೆ.
* ಪತ್ರಿಕೋದ್ಯಮ ಇಂದು ಯುದ್ಧ ಕ್ಷೇತ್ರವಾಗಿ.., ಸಂಭ್ರಮ ಕೇಂದ್ರವಾಗಿ ಬದಲಾಗಿದೆ.
* ಮಾಧ್ಯಮ ಫ್ಯಾಷನ್ ಅಗ್ತಿದೆ ಪ್ಯಾಷನ್ ಆಗಿ ಉಳಿದಿಲ್ಲ
* ಪತ್ರಕರ್ತರಿಗೆ ಪತ್ರಿಕೋಧ್ಯಮ ಜೀವನದ ಧರ್ಮವಾಗಬೇಕು.
* ಮಾಧ್ಯಮವೊಂದು ಸಮಾಜ ಸುಂದರಗೊಳ್ಳಲಿ ಆಗ ಕನ್ನಡಿಯಂತಿರುವ ಮಾಧ್ಯಮ ಸುಂದರವಾಗುತ್ತೆ.

- ಸುದಿನ ಕೃಪೆ