ನುಡಿಸಿರಿ ಕೊಠಡಿ ಸಂಖ್ಯೆ ೩೦೬ರ ರಹಸ್ಯ


ಆಳ್ವಾಸ್ ನುಡಿಸಿರಿ ೨೦೧೪ರ ಅಂಗವಾಗಿ ಕಾಲೇಜಿನ ಸೈನ್ಸ್ ಬ್ಲಾಕ್‌ನಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರದರ್ಶನ ಮತ್ತು ಮಾರಾಟ ಮಳಿಗೆಯ ಗೋಡೆಗಳಲ್ಲಿ '೩ನೇ ಮಹಡಿಯಲ್ಲಿ ಕೊಠಡಿ ೩೦೬ ಇದರಲ್ಲಿ ಏನೋ ವಿಶೇಷವಿದೆ ನೋಡದೆ ಹೋದಲ್ಲಿ ನಿರಾಶರಾಗುತ್ತೀರಿ' ಎಂಬ ಭಿತ್ತಿಪತ್ರಗಳು ಕಾಣಸಿಗುತ್ತವೆ. ಹಾಗಾದರೆ ಆ ಕೊಠಡಿಯ ವಿಶೇಷ ಏನದು? ಇಲ್ಲಿದೆ ನೋಡಿ.
ಕೊಠಡಿ ಸಂಖ್ಯೆ ೩೦೬ರಲ್ಲಿ ಇರುವುದು ಉಡುಪಿ ಶಿರ್ವ ಮೂಲದ ಹಿರಿಯ ಚಿತ್ರಕಲಾವಿದ ಜಿ. ಆರ್. ಉಪಾಧ್ಯಾಯರ ವಿಭಿನ್ನ ಶೈಲಿಯ ಚಿತ್ರಕಲಾ ಪ್ರದರ್ಶನ. ಅಂದರೆ ಒಂದು ನಿರ್ದಿಷ್ಟ ಚಿತ್ರದೊಳಗಡೆ ಹಲವು ಚಿತ್ರಗಳನ್ನು ಮೂಡಿಸುವಿಕೆ. ಇದನ್ನು ನಾವು ಏಕಾಗ್ರತೆ ತೆಯಿಂದ ದಿಟ್ಟಿಸಿದಾಗ ಮಾತ್ರ ಕಾಣಸಿಗುತ್ತದೆ. ಶಿರ್ವದ ಕ್ಲೇ ಮಾಡೆಲ್ ಕಲಾವಿದ ಎಸ್.ಎಂ. ರಾಮ ಉಪಾದ್ಯಾಯ ಮತ್ತು ಕೃಷ್ಣವೇಣಿ ದಂಪತಿಗಳ ಪುತ್ರರಾಗಿರುವ ಇವರು, ತಂದೆಯವರು ಮಣ್ಣಿನ ಮೂರ್ತಿಗಳನ್ನು ರಚಿಸುತ್ತಿದ್ದುದನ್ನು ನೋಡಿ ಚಿತ್ರಕಲೆಚಿi ಬಗ್ಗೆ ಆಸಕ್ತಿ ಮೂಡಿಸಿಕೊಂಡರು. ಆದರೆ ತಂದೆಯವರಿಂದ ಇದಕ್ಕೆ ಸೂಕ್ತ ಪ್ರೋತ್ಸಾಹ ದೊರಕಲಿಲ್ಲ. ಆ ಸಂದರ್ಭ ದಾರವಾಢದ ಹೋಟೇಲೊಂದರಲ್ಲಿ ಕೆಲಸಕ್ಕೆ ಸೇರಿ ಜೊತೆಜೊತೆಗೆ ಚಿತ್ರಕಲಾ ಶಿಕ್ಷಣವನ್ನೂ ಆರಂಭಿಸಿದರು. ಅಷ್ಟು ಮಾತ್ರವಲ್ಲದೇ ದ್ವಿತೀಯ ರ್‍ಯಾಂಕನ್ನು ಪಡೆಯುವಲ್ಲಿಯೂ ಯಶಸ್ವಿಯಾದರು. ಇದರೊಂದಿಗೆ ತಮ್ಮ ಗುರುಗಳಾದ ಸಚ್ಚಿದಾನಂದ ಆಚಾರ್ಯರನ್ನು ಇಂದಿಗೂ ನೆನೆಯುತ್ತಾರೆ.
ಸದ್ಯ ವಿಶ್ರಾಂತ ಜೀವನವನ್ನು ನಡೆಸುತ್ತಿರುವ ಉಪಾಧ್ಯಾಯರು ಸಾಗರದಲ್ಲಿ ಮೂರು ವರ್ಷ, ಪಳಿಮ್ಮಾರಿನಲ್ಲಿ ಹದಿಮೂರು ವರ್ಷ ಹಾಗೂ ಬಲ್ಮಠದಲ್ಲಿ ಹದಿನೇಳು ವರ್ಷ ಚಿತ್ರಕಲಾ ಅದ್ಯಾಪಕರಾಗಿ, ಬೆಂಗಳೂರು ಆಯುಕ್ತರ ಕಛೇರಿಯಲ್ಲಿ ಚಿತ್ರಕಲಾ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು. ತಮ್ಮ ಕಲಾಕೃತಿಗಳ ಛಾಯಾಚಿತ್ರಗಳನ್ನು ಮಾತ್ರ ಪ್ರದರ್ಶಿಸುತ್ತಿರುವ ಇವರು ೬೦ ಕಲಾಕೃತಿಗಳ ಮೂಲ ಪ್ರತಿಗಳನ್ನು ತಮ್ಮ ೬೦ನೇ ವರ್ಷದ ಹುಟ್ಟು ಹಬ್ಬದ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ನೀಡಿರುತ್ತಾರೆ.
ಜನ ಸೇರುವಲ್ಲಿಗೆ ತಮ್ಮ ಚಿತ್ರಕಲಾಕೃತಿಗಳನ್ನು ಕೊಂಡೊಯ್ಯುವ ಉಪಾದ್ಯಾಯರು ಎಂದಿಗೂ ವ್ಯಾಪಾರ ಮನೋಭಾವದಿಂದ ಚಿಂತಿಸುವ ಬದಲಾಗಿ ಕಲಾಸಕ್ತರಿಗೆ ಚಿತ್ರಕಲೆಯೊಂದನ್ನು ಸೂಕ್ಷ್ಮವಾಗಿ ಗಮನಿಸುವಂತೆ ಪ್ರೇರೇಪಿಸುತ್ತಾರೆ. 'ಹೀಗೆ ಮಾಡುವುದರಿಂದ ಸನ್ಣ ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಮೂಡುವುದಲ್ಲದೆ ಕೆಲವೊಮ್ಮೆ ಅವರ ಬದುಕಿನಲ್ಲಿ ಅದೇ ಹಾದಿಯಲ್ಲಿ ಮುಂದುವರಿಯಲು ಸಹಕರಿಸಲೂ ಬಹುದು' ಎನ್ನುತ್ತಾರೆ ೬೭ರ ಹರೆಯದ ಉಪಾದ್ಯಾಯರು. ಇವರ ಕಲಾಕೃತಿಗಳನ್ನು ಉ. ಖ. Uಠಿಚಿಜhಥಿಚಿಥಿಚಿ ಎಂದು ಟೈಪಿಸಿದರೆ  ಥಿou ಣubeನಲ್ಲಿಯೂ ವೀಕ್ಷಿಸಬಹುದಾಗಿದೆ.  ಅಲ್ಲದೆ ಇದು ಸಿಡಿ ರೂಪದಲ್ಲೂ ಲಭ್ಯವಿದೆ. ಸಂಪರ್ಕಕ್ಕೆ ೯೪೮೦೬೦೦೯೧೦
  
-ಅಪರ ಉಜಿರೆ