ಹೀಗೊಂದು ನುಡಿಸೇವೆ


ಮೂಡಬಿದಿರೆಯಲ್ಲಿ ನಡೆದ ಆಳ್ವಾಸ್ ನುಡಿಸಿರಿಯಲ್ಲಿ ಪ್ರತಿಯೊಂದು ವಿಶೇಷವೆ. ಮೋಡ ಕವಿದ ವಾತಾವರಣವಿದ್ದರೂ ಬಿರಿಬಿಸಿಲಿನ ಧಗೆಗೆ ಬಾಯಾರಿ ದಣಿದ ಸಾಹಿತ್ಯ, ಕಲಾಭಿಮಾನಿಗಳಿಗೆ ಈ ಭಾರಿ ನೀರುಣಿಸುವ ಪುಣ್ಯ ಕಾರ್ಯದ ಹೊಣೆ ಹೊತ್ತದ್ದು ನೇತೃತ್ವದ Sಏಈ eಟixeಡಿ Iಟಿಜiಚಿ Pvಣ. ಐಣಜ. ತಂಡ. ವಿದ್ಯಾಗಿರಿ ಆವರಣದ ಜನ ಸೇರುವ ಆಯ್ದ ಮೂರು ಕಡೆಗಳಲ್ಲಿ ಉಚಿತ ನೀರು ಸರಬರಾಜು ಕೇಂದ್ರವನ್ನು ತೆರೆಯುವ ಮೂಲಕ ಸಹಸ್ರಾರು ಜನರ ದಣಿವಾರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರತಿದಿನವೂ ಸರಾಸರಿ ೩೦೦೦ ಲೀಟರ್‌ಗಳಷ್ಟು ಕೋಲ್ಡ್ ವಾಟರ್, ಹಾಟ್ ವಾಟರ್ ಮತ್ತು ವಾರ್ಮ್ ವಾಟರ್ ನೀರು ವಿತರಿಸಲಾಗುತ್ತಿತ್ತು. ಒಂದೇ ಯಂತ್ರದಲ್ಲಿ ಬಿಸಿ ನೀರು, ಶುದ್ಧ ನೀರು, ತಂಪಾದ ನೀರು ಹೀಗೆ ತ್ರಿವಿಧ ನೀರಿನ ತಂತ್ರ ಪರಿಚಯಿಸಿದ ಕೈಗಾರಿಕೋದ್ಯಮಿ ಎಸ್.ಕೆ.ಎಫ್‌ನ ಜಿ. ರಾಮಕೃಷ್ಣ ಆಚಾರ್ ಅವರ ಈ ಪ್ರಯತ್ನ ಶ್ಲಾಘನಾರ್ಹ.