ಕಣ್ಣಿಗೆ ಕಾಣಲಿ, ಕಿವಿಗೆ ಕೇಳಲಿ ಕನ್ನಡ: ನಾಡೋಜ ಡಾ. ಸಿದ್ಧಲಿಂಗಯ್ಯ

ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ' ಆಳ್ವಾಸ್ ನುಡಿಸಿರಿ'ಗೆ ಆ ಕ್ಷಣದ ತೆರೆ
ಮೂಡುಬಿದಿರೆ: ಗಡಿಭಾಗದಲ್ಲಿರುವ ಕನ್ನಡಿಗರಿಗೆ ಕರ್ನಾಟಕ ಸರಕಾರ ಒತ್ತಾಸೆಯಾಗಿರಬೇಕು. ಮಹಾರ್ಜನ್ ವರದಿ ಜಾರಿಮಾಡಿ ಇಂದಿಗೂ ಪ್ರಶ್ನೆಯಾಗಿಯೇ ಉಳಿದಿರುವ ಕಾಸರಗೋಡಿನ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ೧೧ನೇ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷ ನಾಡೋಜ ಡಾ. ಸಿದ್ಧಲಿಂಗಯ್ಯ ಆಗ್ರಹಿಸಿದರು
ಅವರು 'ಆಳ್ವಾಸ್ ನುಡಿಸಿರಿ' ನಾಡು ನುಡಿಯ ರಾಷ್ಟೀಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಕಾಸರಗೋಡಿನ ಜನರಿಗಿರುವ ಕನ್ನಡ ಪ್ರೀತಿ ರಾಜ್ಯದ ರಾಜಧಾನಿಯವರಲ್ಲಿಲ್ಲ. ಎಂದು ಅವರು ವಿಷಾದವಾಡಿದರು.
ಬಂಡಾಯ ಕವಿಯಾಗಿದ್ದವರು ಪ್ರೇಮ ಕವಿತೆಗಳನ್ನು ಬರೆಯುವುದು ತಪ್ಪಲ್ಲ ಎಂಬುದು ನನ್ನ ಭಾವನೆ. ಇಂದು ಬಡವರು ಬಡವರಾಗುತ್ತಲೇ, ಶ್ರೀಮಂತರು ಶ್ರೀಮಂತರಾಗುತ್ತಲೇ ಇರುವುದರಿಂದ ಮತ್ತೆ ಬಂಡಾಯ ಕವಿತೆಗಳು ಮತ್ತೆ ತನ್ನಿಂದ ಹುಟ್ಟಬಹುದು. ಕವಿಯಾದವನು ಬದ್ಧತೆಯನ್ನು ಹೊಂದಿರುವುದು ಅವಶ್ಯ ಎಂದ ಅವರು ರಾಜ್ಯ ಸರಕಾರ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ನಡೆಸುವಾಗ ಆಳ್ವಾಸ್ ನುಡಿಸಿರಿಯ ಪ್ರಶಸ್ತಿ ಪಟ್ಟಿಯನ್ನೊಮ್ಮೆ ಪರಿಶೀಲಿಸುವುದೊಳ್ಳೆಯದು, ರಾಜ್ಯದಲ್ಲಿರುವ ಎಲ್ಲಾ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳಿಗೆ ಆಳ್ವಾಸ್ ನುಡಿಸಿರಿ ಮಾದರಿಯಾಗಬೇಕು ಎಂದು ಹೇಳಿದರು,.

ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಭಾಜನರಾದ ೧೧ ಜನ ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು,

ಡಾ. ಎಂ. ಮೊಹನ ಆಳ್ವ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವನೆಗೈದರು. ಕಾರ್ಯಕ್ರಮದಲ್ಲಿ ಅಂಥ ಬಾಲಕ ಮಣಿಕಂಠ ಸಮ್ಮೇಳನಾಧ್ಯಕ್ಷ ಸಿದ್ಧಲಿಂಗಯ್ಯನವರ ಪರಿಚಯ ಮಾಡಿದುದು ವಿಶೇಷವಾಗಿತ್ತು.
೧೧ನೇ ಆಳ್ವಾಸ್ ನುಡಿಸಿರಿಯ ಸರ್ವಾಧ್ಯಕ್ಷರನ್ನು ಗೌರವಿಸಲಾಯಿತು.






















ಸಮಾರೋಪ ಸಮಾರಂಭಕ್ಕೂ ಮುನ್ನ ಅತಿಥಿಗಳನ್ನು ಭವ್ಯ ಮೆರವಣಿಗೆಯಲ್ಲಿ ಕರೆತರಲಾಯಿತು,

ಸರ್ವಾಧ್ಯಕ್ಷರ ಸಮಾರೋಪ ಭಾಷಣದ ಹೈಲೆಟ್ಸ್
* ಕರ್ನಾಟಕ ರಾಜ್ಯದ ಎಲ್ಲಾ ನಾಮಫಲಕಗಳಲ್ಲಿ ಕನ್ನಡವನ್ನು ಪ್ರಧಾನ ಭಾಷೆಯಾಗಿ ಕಡ್ಡಾಯಗೊಳಿಸುವ ಕಾನೂನಿಗೆ ಖಾಸಗಿ ಕಂಪೆನಿ ತಡೆಯಾಜ್ಞೆ ತಂದಿದ್ದು ಅದನ್ನು ಸರಕಾರ ಶೀಘ್ರ ಶೀಘ್ರ ತೆರವುಗೊಳಿಸಬೇಕು.
* ಕಣ್ಣಿಗೆ ಕಾಣಲಿ ಕನ್ನಡ, ಕಿವಿಗೆ ಬಿಳಲಿ ಕನ್ನಡ ಘೋಷಣೆಯು ಎಲ್ಲೆಡೆಯೂ ಕೇಳಿ ಬರಲಿ.
* ಇತ್ತಿಚಿಗೆ ಅಂತರ್ಜಾತಿ ವಿವಾಹವಾದ ಕಾರಣಕ್ಕಾಗಿ ನಡೆಯುತ್ತಿರುವ ಮರ್ಯಾದಾ ಹತ್ಯೆಗಳನ್ನು, ಹಾಗೆ ಕರೆಯದೇ ಅನಾಗರೀಯ ಹತ್ಯೆ ಎಂದು ಕರೆಯಬೇಕು.
* ಜಾತಿ ಪದ್ಧತಿಯನ್ನು ನಾಶಪಡಿಸಲು ಯುವಜನತೆ ಏಕತೆಯಿಂದ ನಿಲ್ಲಬೇಕಾಗಿದೆ.
* ಅಂತರ್ಜಾತಿ ವಿವಾಹಗಳಿಗೆ ಸೂಕ್ತ ಪ್ರೋತ್ಸಾಹ ಹಾಗೂ ರಕ್ಷಣೆಯನ್ನು ನೀಡಬೇಕು.