ಮನಸ್ಸನ್ನು ಮುದಗೊಳಿಸಿದ ಭಾವಸಿರಿ

ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಎರಡನೇ ದಿನವಾದ ಇಂದು ಜೈನಕಾಶಿ ಮೂಡುಬಿದ್ರೆಯ ರತ್ನಾಕರವರ್ಣಿ ವೇದಿಕೆಯಲ್ಲಿ  ಜರುಗಿದ ಭಾವಗೀತೆ ಗಾಯನ ಕಾರ್ಯಕ್ರಮ ನೆರೆದಿದ್ದ ಇಡೀ ಜನಸ್ತೋಮ ಮಂತ್ರಮುಗ್ಧವಾನ್ನಾಗಿಸಿತ್ತು.  ಖ್ಯಾತ ವಿದೂಷಿ ಸುರಮಣಿ ಮಹಾಲಕ್ಷ್ಮಿ ಶೆಣೈ ಮತ್ತು  ಬಳಗದವರು ಭಾವಗೀತೆಗಳ ಗಾಯನ ಮನಸೂರೆಗೊಳಿಸಿತು. ಹಾರ್ಮೋನಿಯಂನಲ್ಲಿ ಸತೀಶ್, ತಬಲದಲ್ಲಿ ಪಾಂಗಳ ದಿನೇಶ್ ಶೆಣೈ, ವಯಲಿನ್‍ನಲ್ಲಿ ವಾಸುದೇವ ಕಾರ್ಕಳ ಇವರ ಹಿಮ್ಮೇಳ ಸಂಗೀತದ ಮೆರುಗನ್ನು ಇನ್ನಷ್ಟು ಹೆಚ್ಚಿಸಿತು.