ಮೂಡುಬಿದಿರೆ: ಇಂದು ಅಡುಗೆ ಮಗೆಯಲ್ಲಿ ಉಪ್ಪು ಮಾಯವಾಗಿ ಬದಲಿಗೆ ಸಾಲ್ಟ್ ಎಂಬ ಪದ ಬಳಕೆಯಾಗುತ್ತಿದೆ. ಕನ್ನಡದ ಪದದೊಳಗೆ ಸಾಧ್ಯವಾದಲ್ಲೆಲ್ಲ ಇಂಗ್ಲಿಷ್ ಪದ ನುಸುಳಿಕೊಂಡಿದ್ದು ಇದನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕಾಗಿದೆ ಎಂದು ವಿಶ್ವ ನುಡಿಸಿರಿ ವಿರಾಸತ್ ನ ಸರ್ವಾಧ್ಯಕ್ಷ ಡಾ. ಬಿ.ಎ. ವಿವೇಕ್ ರೈ ಹೇಳಿದರು.
ಅವರು ಸಮ್ಮೇಳನದ ಸರ್ವಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರೇಕ್ಷಕರ ಪ್ರಶ್ನಗೆ ಉತ್ತರಿಸುತ್ತಿದ್ದರು.
ಕನ್ನಡ ಭಾಷೆಯ ಮೂಲಕ ಭ್ರಷ್ಟಾಚಾರ ಕಡಿಮೆ ಮಾಡಬಹುದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾನೂನಿನ ಭಾಷೆ ಸುಲಭ ಕನ್ನಡದಲ್ಲಿ ಸಾಮಾನ್ಯನಿಗೆ ಅರ್ಥವಾಗುವ ಹಾಗೇ ರೂಪೂಗೊಂಡರೆ ಇದು ಸಾಧ್ಯ ಎಂದವರು ಹೇಳಿದರು. ಗಡಿನಾಡಿನಲ್ಲಿ, ವಿದೇಶಗಳಲ್ಲಿ ಕನ್ನಡ ಉಳಿವಿನ ಬಗ್ಗೆ, ಕನ್ನಡ ಶಾಸ್ತ್ರೀಯ ಸ್ಥಾನಮಾನ ಮುಂತಾದವುಗಳ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದರು.

