ಚಳಿಯಲ್ಲೂ ಮೊಳಗಿತು ಉದಯರಾಗ

ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಎರಡನೇ ದಿನವಾದ ಇಂದು ಜೈನಕಾಶಿ ಮೂಡುಬಿದ್ರೆಯ ರತ್ನಾಕರವರ್ಣಿ ವೇದಿಕೆಯಲ್ಲಿ  ಪಂಡಿತ ಉಪೇಂದ್ರ ಭಟ್ಟ ಪೂನಾ ಮತ್ತು ಬಳಗದವರಿಂದ ಉದಯರಾಗ ಮೊಳಗಿತು. ಚಳಿ ಮತ್ತು ಮಂಜು ಮುಸುಕಿದ ವಾತಾವರಣದಲ್ಲಿಯೂ ಆಧಿಕ ಸಂಖ್ಯೆಯ ಪ್ರೇಕ್ಷಕರು ಉತ್ಸಾಹದಿಂದ ನೆರೆದಿದ್ದರು. ಈ ಮೂಲಕ ಸಾಹಿತ್ಯಾಭಿಮಾನಿಗಳು ತಮ್ಮ ಅಭಿಮಾನ ತೆರೆದಿಟ್ಟರು.