ಮೂಡುಬಿದಿರೆ: ಶರಣದಾಸರ ಪ್ರಭಾವಕ್ಕೊಳಗಾಗಿ ಉತ್ತರ ಕರ್ನಾಟಕದಲ್ಲಿ ಜನಪದ ಕಲೆ ಇಂದಿಗೂ ತನ್ನ ಸ್ವಂತಿಕೆ ಉಳಿಸಿಕೊಂಡಿದೆ ಜನಪದ ಕಲೆಗಳಿಗೆ ಸಾವಿಲ್ಲ. ಆದರೆ ಕಾಲಘಟ್ಟದಲ್ಲಿ ಬದಲಾಗುತ್ತ ತನ್ನ ಮೂಲರೂಪ ಕಳೆದುಕೊಳ್ಳುತ್ತಿದೆ ಎಂದು ಧಾರವಾಡದ ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ ಪೋತೆ ಹೇಳಿದರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಸತ್‍ನ 3ನೇ ದಿನ ನಡೆದ ಕರ್ನಾಟಕದ ‘ಜನಪದ ವಾದ್ಯಗಳು’ ಗೋಷ್ಠಿಯಲ್ಲಿ ಉತ್ತರ ಕರ್ನಾಟಕದ ಜನಪದ ವಾದ್ಯಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.
ನಂತರ ಮಾತನಾಡಿದ ಅವರು ಬದುಕಿನ ಸಂಸ್ಕಂತಿ ಬಿಂಬಿಸುವ ಕಲೆಗಳು ,ಕಲಾಕಾರರನ್ನು ಪ್ರೋತ್ಸಾಹಿಸಬೇಕು ಎಂದರು.ಗೋಷ್ಠಿಯಲ್ಲಿ ಕರಡಿಮಜಲು,ಜಗ್ಗಲಿಗೆ,ಸಂಪ್ರದಾನಿ,ತಮಟೆ ಮತ್ತಿತರ ವಾದ್ಯಗಳನ್ನು ಪ್ರಾತಕ್ಷಿತೆ ಮೂಲಕ ವಿವರಿಸಲಾಯಿತು.

