Showing posts with label ನಾಡೋಜ ಹೆಚ್. ಎಲ್. ನಾಗೇಗೌಡ ವೇದಿಕೆ. Show all posts
Showing posts with label ನಾಡೋಜ ಹೆಚ್. ಎಲ್. ನಾಗೇಗೌಡ ವೇದಿಕೆ. Show all posts

ಜಾನಪದ ಸಿರಿ ಸಮಾರೋಪ

ಮೂಡಬಿದಿರೆ: ರವಿವಾರ ಮುಕ್ತಾಯಗೊಂಡ ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ ಧಿ- 2013ರಲ್ಲಿ ಮೂರು ದಿನಗಳ ಪರ್ಯಂತ ಸಂಯೋಜಿಸಲಾದ ಜಾನಪದ ಸಿರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ನಾಡಿನ ಜಾನಪದ ಕಲಾವಿದರು ಹಾಗೂ ತಜ್ಞರನ್ನು ಸಮ್ಮಾನಿಸಲಾಯಿತು.
     ಸಮ್ಮೇಳನದ ಸರ್ವಾಧ್ಯಕ್ಷ ಡಾ| ಬಿ.ಎ. ವಿವೇಕ ರೈ ಅವರು ಗಂಗಯ್ಯ ಪರವ ಮೂಡಬಿದಿರೆ (ದೈವ ಪಾತ್ರಿ), ಡಾ| ಯು.ಪಿ. ಉಪಾಧ್ಯಾಯ, ಡಾ| ಎನ್‌. ನಾರಾಯಣ ಶೆಟ್ಟಿ ಶಿಮಂತೂರು, ಹಿರಿಯಡಕ ಗೋಪಾಲ ರಾವ್‌, ಶ್ಯಾಮ ಶೆಟ್ಟಿ ದರೆಗುಡ್ಡೆ ಮೂಡಬಿದಿರೆ (ಕುಮಾರ ಪಾತ್ರಿ), ಸೋಮಲಿಂಗಪ್ಪ ಫಕೀರಪ್ಪ ದೊಡವಾಡ, ಅಂಜನಪ್ಪ (ಮುಖ ವೀಣೆ), ಎಲ್‌. ಮಹಾದೇವಪ್ಪ (ನಂದಿಧ್ವಜ), ಬುರ್ರಕಥಾ ಜಯಮ್ಮ, ಪೈಲ್ವಾನ್‌ ಮಹದೇವಪ್ಪ (ದೊಣ್ಣೆ ವರಸೆ, ಕತ್ತಿ ವರಸೆ) ಇವರನ್ನು ಸಮ್ಮಾನಿಸಿದರು. ಸಮ್ಮಾನ ರೂ. 25,000 ನಗದು, ಪ್ರಶಸ್ತಿ ಫಲಕ, ಯಕ್ಷ ಸ್ಮರಣಿಕೆ ಒಳಗೊಂಡಿದೆ.

ಅಧ್ಯಯನ ನಡೆಯಬೇಕು

ಸರಕಾರ ಜಾನಪದ ಕಲಾವಿದರನ್ನು ಸಾಂಸ್ಕೃತಿಕ ರಾಯಭಾರಿಗಳೆಂದು ಗೌರವಿಸಬೇಕು. ಅವರ ಅಪೂರ್ವ ಜ್ಞಾನ, ಪರಿಶ್ರಮದ ಅಧ್ಯಯನ ನಡೆಯಬೇಕು. ವಿಶ್ವ ನುಡಿಸಿರಿ ವಿರಾಸತ್‌ ಈ ದಿಸೆಯಲ್ಲಿ ಮುಂದಡಿಯಿಟ್ಟಿರುವುದು ಶ್ಲಾಘನೀಯ ಎಂದು ವಿವೇಕ ರೈ ಅಭಿನಂದನಾ ಭಾಷಣದಲ್ಲಿ ತಿಳಿಸಿದರು.

ಜಾನಪದ ವಿದ್ವಾಂಸ, ಗುಲಬರ್ಗಾ ವಿ.ವಿ.ಯ ಡಾ| ಈರಣ್ಣ ದಂಡೆ ಸಮಾರೋಪ ಭಾಷಣ ಮಾಡಿ, ಜೀವನ ಬರಿದಾಗುತ್ತಿದೆ ಎಂದರೆ ಜನಪದ ನಮ್ಮಿಂದ ದೂರವಾಗುತ್ತಿದೆ ಎಂದೇ ಅರ್ಥ. ಅಕಾಡೆಮಿಗಳು ಅಭಿಜಾತ ಕಲೆಗಳ ಮೂಲ ಬೇರೆನಿಸಿದ ಜಾನಪದ ಕಲೆಗಳತ್ತಲೂ ಗಮನಹರಿಸಬೇಕು. ಹಳ್ಳಿ ಹಳ್ಳಿಗಳಲ್ಲಿರುವ ಅಮೂಲ್ಯ ಜನಪದ ಕಲೆಗಳನ್ನು ಸಂಪತ್ತಿನಂತೆ ಸಂರಕ್ಷಿಸುವುದು ಎಲ್ಲರ ಹೊಣೆ ಎಂದರು. ಕಾರ್ಯದರ್ಶಿ ಕಿದೂರು ವೇಣುಗೋಪಾಲ ಶೆಟ್ಟಿ ನಿರೂಪಿಸಿದರು.

Read more...

ಉಪನ್ಯಾಸ: ಮಧ್ಯ ಮತ್ತು ಉತ್ತರ ಕರ್ನಾಟಕದ ಜನಪದ ಆರಾಧನೆಗಳು

ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಸತ್‍ನ 3ನೇ ದಿನವಾದ ಇಂದು ಎ.ಎಲ್ ನಾಗೇಗೌಡ ವೇದಿಕೆಯಲ್ಲಿ ‘ಮಧ್ಯ ಮತ್ತು ಉತ್ತರ ಕರ್ನಾಟಕದ ಜನಪದ ಆರಾಧನೆಗಳು’ ಎಂಬ ವಿಷಯದ ಕುರಿತು ವಿಚಾರ ಗೋಷ್ಠಿ ನಡೆಯಿತು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ತೀ.ನಂ ಶಂಕರನಾರಾಯಣರವರು ಮಾತನಾಡಿ ಜನಪದ ದೇವತೆಗಳು ಆಯಾ ಸಮೂದಾಯಕ್ಕೆ ಸೀಮಿತವಾಗಿದ್ದವು. ಅಲ್ಲಿ ಪ್ರಮುಖವಾಗಿ ಪಶುಪಾಲಕ ಆರಾಧಕರು ಮತ್ತು ಭೇಟೆ ಪಾಲಕ ಆರಾಧಕರ ನಡುವೆ ಘರ್ಷಣೆ ನಡೆಯುತ್ತಿತ್ತು. ಪಶುಪಾಲಕರು ಯಾರ ಹಂಗಿಲ್ಲದೆ ಪ್ರಕೃತಿ ದತ್ತವಾಗಿ ಸಿಗುತ್ತಿದ್ದ ಸಂಪನ್ಮೂಲಗಳನ್ನು ಉಪಯೋಗಿಸುತ್ತಿದ್ದರು. ಆದರೆ ಪಾಳ್ಳೆಗಾರರು ಇವರ ಮೇಲೆ ಆಳ್ವಿಕೆ ನಡೆಸುತ್ತಿದ್ದರು. ಇವರೆಲ್ಲರನ್ನು ನಾವು ಸಾಂಸ್ಕøತಿಕ ವೀರರು ಎಂದು ಕರೆಯುತ್ತೇವೆ ಎಂದು ಹೇಳಿದರು.
    ಇಷ್ಟಲ್ಲದೆ ಕಾಡುಗೊಲ್ಲ ಪಂಗಡದಲ್ಲಿ ಎತ್ತಪ್ಪ ಮತ್ತು ಜುಂಜಪ್ಪ ಪ್ರಮುಕವಾದ ದೇವತೆಗಳಗಿದ್ದವು. ಹಾಗೂ ಹಲವಾರು ಕಾರಣಗಳಿಗೆ ಹೋರಾಡಿದವರನ್ನು ವೀರಗಾರರು, ವೀರಗಾತಿಯರು ಎಂದು ಕರೆಯಲಾಗುತ್ತಿತ್ತು. ಮುಖ್ಯವಾಗಿ ವೀರಗಾತಿಯರಲ್ಲಿ ಪತಿವ್ರತೆಗಾಗಿ ಹೋರಾಡಿದವಳು ಯೂರೋಭಿ ಆಗಿದ್ದಾಳೆ. ಹಾಗೂ ಸ್ತ್ರೀ ದೇವತೆಯಲ್ಲಿ ಸೌದತ್ತಿ ಎಲ್ಲಮ್ಮ ಪೌರಾಣಿಕ ಕಥೆಯುಳ್ಳದ್ದಾಗಿದೆ. ಜೋಗಪ್ಪ, ಜೋಗತಿಗಳು ಇವರ ಸೇವೆ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ನುಡಿದರು.
       
ಈ ಸಂಧರ್ಭದಲ್ಲಿ ಕರ್ನಾಟಕ ಜ್ಞಾನ ಜನಪದ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಅರುಣ್ ಜೋಳದ ಕೂಡ್ಲಿಗೆ ಪ್ರಾತ್ಯಕ್ಷಿಕೆ ವಿವರಣೆ ನೀಡಿದರು. ಹಾಗೂ ಬಳಾರ್ಳಿ ಜಿಲ್ಲೆಯ ಜೋಗತಿಯ ತಂಡ ಎಲ್ಲಮ್ಮ ಹಾಗೂ ದ.ಕರ್ನಾಟಕದ ಗೊರವರ ತಂಡ ಮೈಲಾರಲಿಂಗ ಸ್ವಾಮಿಯ ಕುರಿತು ಎಲ್ಲರ ಗಮನ ಸೇಳೆಯುವ ಹಾಗೆ ಕಲೆಯನ್ನು ಪ್ರದರ್ಶಿಸಿದರು.
-ಉಮೇಶ್ ಕೆ.ಆರ್.
Read more...

ಬದುಕಿಗೆ ಜಾನಪದ ಕಲೆಗಳೆ ಆಧಾರ ಡಾ. ಹೆಚ್.ಟಿ ಪೋತೆ

ಮೂಡುಬಿದಿರೆ: ಶರಣದಾಸರ ಪ್ರಭಾವಕ್ಕೊಳಗಾಗಿ ಉತ್ತರ ಕರ್ನಾಟಕದಲ್ಲಿ ಜನಪದ ಕಲೆ ಇಂದಿಗೂ ತನ್ನ ಸ್ವಂತಿಕೆ ಉಳಿಸಿಕೊಂಡಿದೆ ಜನಪದ ಕಲೆಗಳಿಗೆ ಸಾವಿಲ್ಲ. ಆದರೆ ಕಾಲಘಟ್ಟದಲ್ಲಿ ಬದಲಾಗುತ್ತ ತನ್ನ ಮೂಲರೂಪ ಕಳೆದುಕೊಳ್ಳುತ್ತಿದೆ ಎಂದು ಧಾರವಾಡದ ಮೌಲ್ಯಮಾಪನ ಕುಲಸಚಿವ ಡಾ.ಎಚ್.ಟಿ ಪೋತೆ ಹೇಳಿದರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಸತ್‍ನ 3ನೇ ದಿನ ನಡೆದ ಕರ್ನಾಟಕದ ‘ಜನಪದ ವಾದ್ಯಗಳು’ ಗೋಷ್ಠಿಯಲ್ಲಿ ಉತ್ತರ ಕರ್ನಾಟಕದ ಜನಪದ ವಾದ್ಯಗಳು ವಿಷಯದ ಕುರಿತು ಉಪನ್ಯಾಸ ನೀಡಿದರು.
ನಂತರ ಮಾತನಾಡಿದ ಅವರು ಬದುಕಿನ ಸಂಸ್ಕಂತಿ ಬಿಂಬಿಸುವ ಕಲೆಗಳು ,ಕಲಾಕಾರರನ್ನು ಪ್ರೋತ್ಸಾಹಿಸಬೇಕು ಎಂದರು.ಗೋಷ್ಠಿಯಲ್ಲಿ ಕರಡಿಮಜಲು,ಜಗ್ಗಲಿಗೆ,ಸಂಪ್ರದಾನಿ,ತಮಟೆ ಮತ್ತಿತರ ವಾದ್ಯಗಳನ್ನು ಪ್ರಾತಕ್ಷಿತೆ ಮೂಲಕ ವಿವರಿಸಲಾಯಿತು.

Read more...

ಜನಪದ ಕಲೆ ಬದುಕಿನ ಭಾಗವಾಗಲಿ: ಡಾ ಅಂಬಳಿಕೆ ಹಿರಿಯಣ್ಣ

ಮೂಡುಬಿದಿರೆ: ವಿಜ್ಞಾನಕ್ಕೆ ನೆಚ್ಚಿಕೊಂಡವರಿಂದ ಮತ್ತು ವೈಜ್ಞಾನಿಕ ಕ್ರಾಂತಿಯಿಂದಾಗಿ ಜನಪದ ಕಲೆಗಳು ನಶಿಸುತ್ತಿದೆ ಎಂಬ ಆಂತಕ ಎದುರಾಗಿದ್ದು ಸಂಸ್ಕೃತಿಯ ಮೂಲ ಬೇರಾಗಿರುವ ಜನಪದ ಕಲೆಯನ್ನು ಉಳಿಸಬೇಕಾದುದು ಇಂದಿನ ಅಗತ್ಯವಾಗಿದೆ ಎಂದು ಕರ್ನಾಟಕ ಜನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ ಅಂಬಳಿಕೆ ಹಿರಿಯಣ್ಣ ಹೇಳಿದರು. ಅವರು ನಾಡೋಜ ಹೆಚ್. ಎಲ್. ನಾಗೇಗೌಡ ವೇದಿಕೆಯಲ್ಲಿ ಜರುಗುತ್ತಿರುವ ಜನಪದ ಸಿರಿಯಲ್ಲಿ ಮಾತನಾಡಿತ್ತಿದ್ದರು.
ರಾಷ್ಟ್ರೀಯತೆಯನ್ನು ಒಡೆಯುವ ಜಾತೀಕರಣದ ಸಮಸ್ಯೆಗಳಿಗೆ ಸಂಸ್ಕೃತಿಯ ಮೂಲ ಬೇರುಗಳಲ್ಲಿಯೇ ಉತ್ತರವನ್ನು ಕಂಡುಕೊಳ್ಳಲು ಸಾಧ್ಯ. ಜನಪದದ ಬೇರೆ ಬೇರೆ ಕಲೆಗಳತ್ತ ಬೆಳಕನ್ನು ಚಲ್ಲುವ ಮತ್ತು ಕಲಿಕೆ ತರಬೇತಿ 

ಮತ್ತು ಪ್ರಾತ್ಯಕ್ಷೀತೆಗಳ ಮೂಲಕ ಇಂದಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ. ಜನಪದ ನಮ್ಮ ಬದುಕಿನ ಅಂಗವಾದಾಗ ಮಾತ್ರ ಅದನ್ನು ಉಳಿಸಿ ಬೆಳೆಸಲು ಸಾಧ್ಯ ಎಂದವರು ಹೇಳಿದರು.

ವಿಶ್ವ ನುಡಿಸಿರಿ ವಿರಾಸತ್ ನ ಸರ್ವಾಧ್ಯಕ್ಷ ಡಾ. ಬಿ.ಎ. ವಿವೇಕ್ ರೈ ಜನಪದ ಸಿರಿಯನ್ನು ಡೋಲನ್ನು ಬಾರಿಸುವುದರ ಕಾರ್ಯಕ್ರಮವನ್ನು ಮೂಲಕ ಉದ್ಘಾಟಿಸಿದರು. ನುಡಿಸಿರಿಯ ರೂವಾರಿ ಡಾ ಮೋಹನ್ ಆಳ್ವ ಪ್ರಸ್ತಾವನೆಗೈದರು.















Read more...

ಭೂತಾರಾಧನೆ ನಾಡಿಗೆ ಪರಿಚಯಿಸುವುದು ಅವಶ್ಯಕ: ಪ್ರೊ. ಪೂವಪ್ಪ

ಮೂಡುಬಿದಿರೆ: ತುಳುನಾಡಿನಲ್ಲಿ ದೈವದ ಕುರಿತಾದಂತಹ ಸಂಪ್ರದಾಯಗಳ ಕುರಿತು ನಿಜವಾದಂತಹ ಸಂಶೋಧನೆಗಳು ಇನ್ನು ಹೆಚ್ಚಿನ ರೀತಿಯಲ್ಲಿ ಜರುಗಬೇಕಾಗಿದೆ ಎಂದು ಪ್ರೊ. ಪೂವಪ್ಪ ಕಣಿಯೂರು ಅಭಿಪ್ರಾಯ ಪಟ್ಟರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ 2013ರ ಜನಪದ ಸಿರಿಯಲ್ಲಿ ನಾಡೋಜ ಎಚ್.ಎಲ್ ನಾಗೇಗೌಡ ವೇದಿಕೆಯಲ್ಲಿ ಉಪನ್ಯಾಸ ನೀಡುತ್ತಿದ್ದರು. ತುಳುನಾಡಿನ ಜಾನಪದ ಸಂಸ್ಕಂತಿಯನ್ನು ಇಂದು ವಿಶ್ವದಾದ್ಯಂತ ಪ್ರಚುರ ಪಡಿಸುವುದು ಮತ್ತು ಅದರ ಸಾಧಕ ಬಾಧಕಗಳ ಕುರಿತು ಅವಲೋಕಿಸಬೇಕಾಗಿದೆ ಎಂದು ಅವರು ಅಭಿಪ್ರಾಯ ಪಟ್ಟರು.

Read more...

ಸೃಜನಶೀಲತೆ ಕಸಿದುಕೊಂಡು ಜನಪದ ಸಾಹಿತ್ಯದ ಬೆಳವಣಿಗೆ ಸಾಧ್ಯವಿಲ್ಲ: ಡಾ. ಕೆ.ಚಿನ್ನಪ್ಪ ಗೌಡ

ಮೂಡುಬಿದಿರೆ: ಕರ್ನಾಟಕದ ಮೌಕಿಕ ಪರಂಪರೆಗಳು ಆವರ್ತನ ರೂಪದದಲ್ಲಿ ಜನರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದು ಜನಪದಿಯರ ಸೃಜನಶೀಲ ಮನಸ್ಸು ಇದಕ್ಕೆ ಪೂರಕವಾಗಿದೆ ಎಂದು ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು. ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಜನಪದ ಸಿರಿಯಲ್ಲಿ ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ಮೌಖಿಕ ಪರಂಪರೆ ಎಂಬ ವಿಷಯದ ಕುರಿತಾಗಿ ಮಾತನಾಡುತ್ತಿದ್ದರು.
     ಜನಪದರ ಸೃಜನಶಿಲತೆಯನ್ನು ಕಸಿದುಕೊಂಡು ಜನಪದ ಸಾಹಿತ್ಯದ ಬೆಳವಣಿಗೆ ಸಾಧ್ಯವಿಲ್ಲ.  ಉಹೆಗೂ ಮಿರಿದ ಜನಪದ ಹಾಡುಗಾರರು ನಮ್ಮ ನಡುವೆ ಇದ್ದು ಅವರಲ್ಲಿನ ಮೌಖಿಕ ಸಾಹಿತ್ಯವನ್ನು ದಾಖಲಿಸುವ ಕೆಲಸ ಮುಖ್ಯವಾಗಿ ಆಗಬೇಕಾಗಿದೆ. ಜನಪದರು ಮೌಖಿಕ ಪರಂಪರೆಗಳನ್ನು ತಮ್ಮ ಕೆಲಸದ ಭಾಗವಾಗಿ ಕಟ್ಟಿಕೊಂಡು ಅದಕ್ಕೊಂದು ಹೊಸ ಅರ್ಥ ಮತ್ತು ಆಶಯ ತುಂಬಿದ್ದಾರೆ. ಇಂದು ಕರ್ನಾಟಕ ಜಾಗತಿಕವಾಗಿ ಸ್ವರ್ಧಿಸಬಹುದಾದ ಕ್ಷೇತ್ರವೊಂದಿದ್ದರೆ ಅದು ಜನಪದೀಯ ಕ್ಷೇತ್ರವಾಗಿದೆ ಎಂದು ಅವರು ನುಡಿದರು.



Read more...

ಬೃಹತ್ ಸಮಾರಂಭಕ್ಕೆಗೆ ಸಕಲ ಸಿದ್ದತೆ. ಸಾಗರೋಪಾದಿಯಲ್ಲಿ ಭಾಗಿಯಾಗುತ್ತಿರುವ ಜನ






ಮೂಡುಬಿದಿರೆ: ವಿಶ್ವ ನುಡಿಸಿರಿ ವಿರಾಸತ್ ಗೆ ಇನ್ನು ಕೆಲವೇ ಗಂಟೆಗಳಷ್ಟೇ ಬಾಕಿ ಇದ್ದು ಸಮಾರಂಭವನ್ನು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ವಿವಿಧ ಉರುಗಳಿಗೆ ಸಾಹಿತ್ಯಭಾಮಾನಿಗಳು, ವಿದ್ಯಾಥರ್ಿಗಳು ತಂಡೋತಂಡವಾಗಿ ಆಗಮಿಸುತ್ತಿದ್ದಾರೆ. ಆಳ್ವಾಸ್ ಕ್ಯಾಂಪಸ್ ಹಾಗೂ ವಿದ್ಯಾಗಿರಿಯ ಮೈದಾನದೂದ್ದಕ್ಕೂ ವಿವಿಧ ಸಂಸ್ಕೃತಿ, ಐತಿಹ್ಯವನ್ನು ಸಾರುವ ಕಲಾಕೃತಿಗಳು, ಪ್ರತಿಮೆಗಳು, ಫಲ-ಪುಷ್ಟ ಪ್ರದರ್ಶನ, ಪುಸ್ತಕ ಪ್ರದರ್ಶನ ಮುಂದಾದವುಗಳು, ಸಾಲುಗಟ್ಟಿ ಹಾಕಲಾಗಿರುವ ಗೂಡುದೀಪಗಳು ಇಲ್ಲಿನ ಸೌದರ್ಯವನ್ನು ಇಮ್ಮಡಿಗೊಳಿಸಿದೆ. ಅಚ್ಚುಕ್ಕಟ್ಟಾದ ಉಟೋಪಚಾರ ವ್ಯವಸ್ಥೆ ಸಾಹಿತ್ಯ ಕಲಾಭಿಮಾನಿಗಳ ಹಸಿವನ್ನು ತಣಿಸಿದೆ.
   20ರಿಂದ ಆರಂಭಗೊಳ್ಳಲಿರುವ ಕೃಷಿ ಸಿರಿಗೂ ಭರದ ತಯಾರಿಗಳು ನಡೆಯುತ್ತಲಿದೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಬೃಹತ್ ಮೆರವಣಿಗೆ, ಬಳಿಕ ರತ್ಯಾಕರವಣರ್ಿ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭಗಳು ಜರುಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರತ್ನಾಕರ ವಣರ್ಿ ವೇದಿಕೆಯಲ್ಲಿ ವಿವಿಧ ಜನಪದ ಕಲಾ ತಂಡಗಳ ಪ್ರದರ್ಶನ, ಡಾ. ವಿ. ಎಸ್. ಆಚಾರ್ಯ ವೇದಿಕೆಯಲ್ಲಿ ಶರಶಯ್ಯ ನಾಟಕ, ಕೆ. ವಿ. ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಜುಗಾರಿ ಕ್ರಾಸ್ ನಾಟಕ ಪ್ರದರ್ಶನಗೊಳ್ಳಲಿದೆ.  





















Read more...