ಮೂಡುಬಿದಿರೆ: ಕರ್ನಾಟಕದ ಮೌಕಿಕ ಪರಂಪರೆಗಳು ಆವರ್ತನ ರೂಪದದಲ್ಲಿ ಜನರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದು ಜನಪದಿಯರ ಸೃಜನಶೀಲ ಮನಸ್ಸು ಇದಕ್ಕೆ ಪೂರಕವಾಗಿದೆ ಎಂದು ಡಾ. ಕೆ. ಚಿನ್ನಪ್ಪ ಗೌಡ ಹೇಳಿದರು. ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಜನಪದ ಸಿರಿಯಲ್ಲಿ ಕರಾವಳಿ ಮತ್ತು ದಕ್ಷಿಣ ಕರ್ನಾಟಕದ ಮೌಖಿಕ ಪರಂಪರೆ ಎಂಬ ವಿಷಯದ ಕುರಿತಾಗಿ ಮಾತನಾಡುತ್ತಿದ್ದರು.
ಜನಪದರ ಸೃಜನಶಿಲತೆಯನ್ನು ಕಸಿದುಕೊಂಡು ಜನಪದ ಸಾಹಿತ್ಯದ ಬೆಳವಣಿಗೆ ಸಾಧ್ಯವಿಲ್ಲ. ಉಹೆಗೂ ಮಿರಿದ ಜನಪದ ಹಾಡುಗಾರರು ನಮ್ಮ ನಡುವೆ ಇದ್ದು ಅವರಲ್ಲಿನ ಮೌಖಿಕ ಸಾಹಿತ್ಯವನ್ನು ದಾಖಲಿಸುವ ಕೆಲಸ ಮುಖ್ಯವಾಗಿ ಆಗಬೇಕಾಗಿದೆ. ಜನಪದರು ಮೌಖಿಕ ಪರಂಪರೆಗಳನ್ನು ತಮ್ಮ ಕೆಲಸದ ಭಾಗವಾಗಿ ಕಟ್ಟಿಕೊಂಡು ಅದಕ್ಕೊಂದು ಹೊಸ ಅರ್ಥ ಮತ್ತು ಆಶಯ ತುಂಬಿದ್ದಾರೆ. ಇಂದು ಕರ್ನಾಟಕ ಜಾಗತಿಕವಾಗಿ ಸ್ವರ್ಧಿಸಬಹುದಾದ ಕ್ಷೇತ್ರವೊಂದಿದ್ದರೆ ಅದು ಜನಪದೀಯ ಕ್ಷೇತ್ರವಾಗಿದೆ ಎಂದು ಅವರು ನುಡಿದರು.



