Showing posts with label ಪಂಜೆ ಮಂಗೇಶರಾಯ ವೇದಿಕೆ. Show all posts
Showing posts with label ಪಂಜೆ ಮಂಗೇಶರಾಯ ವೇದಿಕೆ. Show all posts

ಯುವಜನತೆ ಕೈಯಲ್ಲಿ ಭಾರತದ ಭವಿಷ್ಯ: ಚಕ್ರವರ್ತಿ ಸೂಲಿಬೆಲೆ

ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿಯ ವಿರಾಸತ್‍ನ 4ನೇ ದಿನವಾದ ಇಂದು ಪಂಜೆಮಂಗೇಶರಾಯ ವೇದಿಕೆಯೂ ಇಡೀ ಯುವಜನೆತೆಯಿಂದ ಕೂಡಿತ್ತು. ಅದು ಖ್ಯಾತ ಮಾತಿನ ಮೋಡಿಗಾರ ಚಕ್ರವರ್ತಿ ಸೂಲಿಬೆಲೆಯ ಮಾತಿಗಾಗಿ. ಹೌದು ಅವರಿಗೆ ನೀಡಿದ್ದ ‘ಯುವ ಜನತೆ ಮತ್ತು ಭಾರತ ಭವಿಷ್ಯ’ ವಿಷಯದ ಕುರಿತು ಮಾತನಾಡಿದ ಅವರು ನೆರೆದಿದ್ದ ಇಡೀ ಯುವಜನತೆನ್ನು ಜಾಗೃತಿಗೊಳಿಸಿದರು. ಭಾರತದ ಶಕ್ತಿ ಅಂದರೆ ಅದು ನಾವು ಮತ್ತು ನೀವು ಮಾತ್ರ. ಯಾವ ದೇಶದಲ್ಲಿಯೂ ಇರದ ಸಂಪನ್ಮೂಲ ಭಾರತ ದೇಶದಲ್ಲಿದೆ. ಆದರೆ ಅದನ್ನು ಸರಿಯಾಗಿ ಬಳಸಿಕೊಳ್ಳಲಾಗದೆ ವ್ಯತೆಪಡುತ್ತಿದ್ದೇವೆ.
ಯುವಕರು ಒಂದಾದರೆ ಇಡೀ ವಿಶ್ವವನ್ನೇ ಅಲ್ಲಾಡಿಸಬಹುದು. ಇಡೀ ಭಾರತ ಶ್ರೇಷ್ಠ ದೇವಸ್ಥಾನವಿದ್ದಂತೆ. ಅಮೇರಿಕಾದಂತ ದೇಶ ತಾನು ಬದುಕದೆ, ಬರೀ ಬುದ್ಧಿ ಹೇಳಿಕೊಂಡು ಬದುಕುತ್ತದೆ. ಆದರೆ ನಮ್ಮ ದೇಶ ತಾನು ಬದುಕಿ ಇತರರನ್ನು ಬದುಕಲು ಬಿಡುತ್ತದೆ. ನಿನ್ನನ್ನು ನೀನು ಅರಿತುಕೊಳ್ಳಬೇಕು, ನಿನ್ನ ಸ್ವರೂಪವನ್ನು ಅರಿಯಬೇಕು ಎಂದು ಸಾರಿದ ದೇಶ ಈ ಭಾರತ. ಜಗತ್ತನ್ನು ಪೋಷಿಸಿಕೊಂಡ, ಒಪ್ಪಿಕೊಂಡ, ಎಲ್ಲರಿಗೂ ಜಾಗವನ್ನು ಕಲ್ಪಿಸಿದ್ದು ಭಾರತ. ಜಗತ್ತಿನ ಯಾವುದೇ ಕ್ಷೇತ್ರ ತೆಗೆದುಕೊಂಡರೂ ಅಲ್ಲಿ ಭಾರತದ ಪಾಲುದಾರಿಕೆ ಇದೆ. ಆದರೆ ಇಂದು ಈ ಶ್ರೇಷ್ಠ ಭಾರತದಿಂದ ಯುವಜನತೆ ದೂರ ಸರಿಯುತ್ತಿದೆ. ನಾವೀಗ ಅಂತರ್ಮುಖಿಗಳಾಗಬೇಕು. ನಮ್ಮೊಳಗಿರುವ ಶಕ್ತಿಯನ್ನು ನಾವು ಅರಿಯಬೇಕು ಎಂದರು.
ಪ್ರಪಂಚಕ್ಕೆ ಶೂನ್ಯವನ್ನು ನೀಡಿದ ಭಾರತ ನೀನು ಎಲ್ಲಿಗೋದರು ಬಿಟ್ಟ ಸ್ಥಳವನ್ನು ಬಂದು ಸೇರುತ್ತೀಯ. ಶೂನ್ಯ ಬದುಕಿನ ಎಲ್ಲಾ ದಿಕ್ಕಿನಲ್ಲಿ ಹರಿದಾಡುತ್ತದೆ. ಪ್ರತಿಯೊಂದು ತಪ್ಪಿಗೆ ಶಿಕ್ಷೆಯನ್ನು ಕೊಡುವ ಶ್ರೇಷ್ಠತೆಯನ್ನು ಭಾರತ ಹೊಂದಿದೆ. ಇವತ್ತಿನ ಯುವಜನತೆ ತುಂಬಾ ಭಾವನೆಗಳನ್ನು ಕಳೆದುಕೊಳ್ಳುತ್ತಿದೆ. ಇದು ದೇಶಕ್ಕೆ ಮಾರಕವಾಗಿದೆ. ಭಾವನೆಗಳಿಲ್ಲದ ವ್ಯಕ್ತಿ ಸತ್ತ ವ್ಯಕ್ತಿ ಇದ್ದಂತೆ. ಮಾತಿನ, ಬರವಣಿಗೆಯ ಶಕ್ತಿ ಎಲ್ಲರಲ್ಲಿಯೂ ಇದೆ. ಅದನ್ನು ಹೊರತರುವಲ್ಲಿ ಸೋತಿದ್ದೇವೆ. ಬದುಕಿನೊಂದಿಗೆ ಒಂದಾಗುವುದನ್ನು ಕಲಿಯಬೇಕು. ವಾಸ್ತವವಾಗಿ ಭಾರತದ ಸ್ಥಿತಿ ಕರಾಳವಾಗಿಲ್ಲ. ದೇಶ ಬದಲಾಗುವ ಸ್ಥಿತಿಯಲ್ಲಿದೆ. ಇದಕ್ಕೆ ಉತ್ತಮ ಉದಾಹರಣೆ ಇಂದು ಇಷ್ಟೊಂದು ಯುವಜನತೆ ಈ ನುಡಿಸಿರಿಯಲ್ಲಿ ಪಾಲುಗೊಂಡಿದೆ. ಇಲ್ಲೇ ತಿಳಿಯುತ್ತದೆ ಯುವಜನತೆ ಬದಲಾವಣೆಯ ದಾರಿಯಲ್ಲಿದ್ದಾರೆ. ಹಾಗಾಗಿ ಇಡೀ ಜಗತ್ತು ಭಾರತದ ಕುರಿತು ಗಡಿಬಿಡಿಯಲ್ಲಿದ್ದಾರೆ.
ಇಷ್ಟಾದರೆ ಸಾಲದು ವಾಸ್ತವವಾಗಿ ಗಮನಿಸಿದರೆ ಆಂತರಿಕ ಗಟ್ಟಿತನವನ್ನು ಕಳೆದುಕೊಳ್ಲೂತ್ತಿದ್ದೇವೆ. ನಮಗೆ ಗೊತ್ತಿಲ್ಲದೆ ಹಾಗೆ ಬದುಕನ್ನು ಹಾಳುಮಾಡಿಕೊಳ್ಳುತ್ತಿದ್ದೇವೆ. ದೇಶದ ಪರಿಸ್ಥಿತಿ ಬದಲಾಗಬೇಕಾದರೆ ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕು. ನಮ್ಮ ಸಾಮಥ್ರ್ಯವನ್ನು ಬಳಸಿಕೊಳ್ಳಬೇಕು. ಆಗ ನಿಜವಾಗಿಯೂ ಭಾರತ ಶ್ರೇಷ್ಠ ರಾಷ್ಟ್ರವಾಗುವುದರಲ್ಲಿ ಅನುಮಾನವಿಲ್ಲ ಎಂದು ಯುವಜನತೆಗೆ ಮನ ಮುಟ್ಟುವಂತೆ ಹೇಳಿದರು.
ಭಾರತದ ಭವಿಷ್ಯ ಅಧ್ಬುತ, ಉಜ್ವಲವಾಗಿದೆ. ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎಂಬುದನ್ನು ಅರಿತುಕೊಳ್ಳೋಣ. ಸಾಮಾನ್ಯರಂತೆ ಜೀವಿಸುವುದನ್ನು ಬಿಟ್ಟು ಶ್ರೇಷ್ಠ ಕನಸು, ವಿಚಾರಗಳನ್ನು ಇಟ್ಟುಕೊಳ್ಳೋಣ. ಯುವಜನತೆ ಹೆಚ್ಚು ಸಮಯವನ್ನು ಮೊಬೈಲ್ ಜೊತೆ ಕಳೆಯುವುದನ್ನು ಬಿಟ್ಟು ದೇಶ ಕಟ್ಟುವಲ್ಲಿ ಮುಂದಾಗಬೇಕು, ಆಗ ಎಲ್ಲವೂ ಸರಿಯಾಗಿತ್ತದೆ ಎಂದು ಸೂಲಿಬೆಲೆ ಯುವಜನತೆಗೆ ಜಾಗೃತಿ ಮೂಡಿಸುವಲ್ಲಿ ಸಫಲವಾದರು. ಇದಕ್ಕೆ ದಿವ್ಯ ಸಾಕ್ಷಿಯೇ ಕಾರ್ಯಕ್ರಮದ ನಂತರ ಇಡೀ ಸಭೆ ಅವರ ಹಿಂದೆ ನಡೆದಿತ್ತು. ಆ ರೀತಿ ಮಾತಿನಲ್ಲೇ ಮೋಡಿ ಮಾಡಿದ ಚಕ್ರವರ್ತಿ ಸೂಲಿಬೆಲೆ ಎಲ್ಲರ ಮನಸ್ಸನ್ನು ಎಚ್ಚರಗೊಳಿಸಿದರು.
Read more...

ರಂಗಭೂಮಿಗೆ ಚಿಕಿತ್ಸಕ ಗುಣವಿದೆ: ಮಂಡ್ಯ ರಮೇಶ್

ಮೂಡುಬಿದಿರೆ: ರಂಗಭೂಮಿಗೆ ಆತ್ಮವಿಶ್ವಾಸ ಹೆಚ್ಚಿಸುವ ಶಕ್ತಿ ಇದೆ. ದೇಶವನ್ನೇ ಬದಲಿಸಿದ ಗಾಂಧೀಜಿಯವರನ್ನು ಬದಲಿಸಿದ್ದು ‘ಹರಿಶ್ಚಂದ್ರ’ ನಾಟಕ. ಇಂತಹ ಚಿಕಿತ್ಸಕ ಶಕ್ತಿ ಇರುವ ರಂಗಭೂಮಿಯತ್ತ ಯುವಕರು ನಿಸ್ವಾರ್ಥರಾಗಿ ಒಲವು ತೋರಿಸಬೇಕು ಎಂದು ಮಂಡ್ಯ ರಮೇಶ್ ನುಡಿದರು.
ಅವರು ಮಹಾ ಸಮ್ಮೇಳನಗಳಾದ ‘ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್’ ನಲ್ಲಿ ‘ರಂಗಭೂಮಿ ಮತ್ತು ವ್ಯಕ್ತಿತ್ವ ವಿಕಸನ’ ಎಂಬ ವಿಷಯ ಕುರಿತು ಪಂಜೆ ಮಂಗೇಶರಾಯ ವೇದಿಕೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
Read more...

ಆತ್ಮವಿಸ್ವಾಸವನ್ನು ಹೆಚ್ಚಿಸುವ ತುಡಿತ ಆತ್ಮಗೌರವಕ್ಕೆ ಧಕ್ಕೆಯನ್ನುಂಟುಮಾಡದಿರಲಿ: ಜಯಂತ್ ಕಾಯ್ಕಿಣಿ



ಮೂಡುಬಿದಿರೆ: ನಮ್ಮ ದೇಶಿಗರು ಕಳೆದ ಐವತ್ತು ವರ್ಷಗಳಿಂದ ಭಾವೈಕ್ಯತೆಯಿಂದ ಬೆಸೆದುಕೊಂಡಿದ್ದರೇ ಅದಕ್ಕೆ ಚಿತ್ರಗೀತೆಗಳ ಕೊಡುಗೆ ಅಗಾಧವಾದುದು. ಹಾಡುಗಳು ಜನಮಾನಸದೊಂದಿಗೆ ತಳುಕುಹಾಕಿಕೊಂಡಿದೆ. ಇಂದು ಸಿನೆಮಾ ಹಾಡುಗಳನ್ನೂ ಹೆಚ್ಚಾಗಿ ಆಸ್ವಾದಿಸುವ ಯುವ ಸಮುದಾಯ ಹುಟ್ಟಿಕೊಂಡಿದ್ದು, ಈ ಕ್ಷೇತ್ರವನ್ನೂ ಸಹ ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯ ಇದೆ. ಸಿನೆಮಾ ಹಾಡುಗಳು ಸರಳ ಹಾಗೂ ಮನಮುಟ್ಟುವ ಹಾಗಿರಬೇಕು ಎಂದು ಸಾಹಿತಿ ಜಯಂತ್ ಕಾಯ್ಕಿಣಿ ಹೇಳಿದರು.

     ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಮೂರನೇ ದಿನವಾದ ಇಂದು ಪಂಜೆ ಮಂಜೇಶರಾಯ ವೇದಿಕೆಯಲ್ಲಿ 'ಇವತ್ತನ ಭಾವ ಪ್ರಪಂಚ' ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು
    ಪೋಷಕರು ಟಿ.ವಿ ಮಾಧ್ಯಮದಲ್ಲಿ ಬರುವುದೆಲ್ಲವೂ ಸತ್ಯವೆಂಬ ಭ್ರಮೆಯಲ್ಲಿದ್ದಾರೆ. ಆದರೆ ವಾಸ್ತವ ಇದಕ್ಕಿಂತ ಭಿನ್ನವಾಗಿರುತ್ತದೆ. ಇದನ್ನು ಅರಿಯದೆ ರಿಯಾಲಿಟಿ ಶೋ ನಂತಹ ಕಾರ್ಯಕ್ರಮಗಳಲ್ಲಿ ತಮ್ಮ ಮಕ್ಕಳು ಗೆಲ್ಲಬೇಕು, ಹಣ ಮಾಡಬೇಕು ಎಂಬ ಒತ್ತಡ ಹೇರುತ್ತಿದ್ದಾರೆ. ಪರಿಣಾಮವಾಗಿ ಮಕ್ಕಳಿಗೆ ವಾಸ್ತವದ ಬದುಕಿನೊಂದಿಗೆ ನೇರ ಸಂಪರ್ಕವನ್ನಿಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ. ಮಕ್ಕಳಲ್ಲಿ ಆತ್ಮವಿಶ್ವಾಸವನ್ನು ಬೇಳೆಸುವ ತುಡಿತದಲ್ಲಿ ಆತ್ಮಗೌರವನ್ನು ಕಳೆದುಕೊಳ್ಳುವಂತೆ ಮಾಡುತ್ತಿರುವುದು ಶೋಚನೀಯವಾದುದು ಎಂದರು. 

ಯುವಜನತೆ ತಮ್ಮ ರೋಲ್ ಮಾಡೆಲ್ ಗಳನ್ನು ಬದಲಿಸಿಕೊಂಡು ಹಣವೇ ಸರ್ವಸ್ವ ಎಂದು ಭಾವಿಸಿಕೊಂಡಿರುವ ಈ ಕಾಲಘಟ್ಟದಲ್ಲಿ ಅವರಿಗೆ ಆದರ್ಶಪ್ರಾಯರಾದವರನ್ನು ಪರಿಚಯಿಸುವುದು ಅಗತ್ಯವಾಗಿದೆ. ಕನ್ನಡ ಮಾಧ್ಯಮ ಬೇಕು ಎನ್ನುವ ಮೊದಲು ಕನ್ನಡವನ್ನು ಕಲಿಸುವವರ್ಯಾರು ಎಂಬುದಕ್ಕೆ ಉತ್ತರವನ್ನು ಕಂಡುಕೊಳ್ಳಬೇಕಾಗಿದೆ. ಯಾವ ಪಾಲಕರು ತನ್ನ ಮಕ್ಕಳಿಗೆ ಶಿಕ್ಷಕನಾಗುವಂತೆ ಸಲಹೆ ನೀಡುತ್ತಾರೋ ಅವರು ನನ್ನ ಪಾಲಿದೆ ದೇವರು ಎಂದರು. ಚಿಂತನಶೀಲ ತನ್ಮಯತೆ ಸಾಹಿತ್ಯದ ಜೀವಾಳವಾಗಿದ್ದ ಶುದ್ಧ ಚಿಂತನೆಯೂ ಇಲ್ಲದ ಶದ್ಧ ತನ್ಮಯತೆಯೂ ಅಲ್ಲದ ಸಾಹಿತ್ಯ ನಮ್ಮದಾಗಲಿ ಎಂದು ಅವರು ಆಶುಸಿಸಿದರು.

ಸಾಮಾಜಿಕ ತಾಣಗಳು ಅಪಗ್ರಾಸಕ್ಕೆ ಗುರಿಯಾಗುತ್ತಿರುವುದು ದರಂತವಾಗಿದ್ದು ಅದು ಅನಗತ್ಯ ಕಾಲಹರಣಕ್ಕೆ ಎಡೆಮಾಡಿಕೊಡದೆ ಉತ್ತಮ ವಿಚಾರಗಳಿಗೆ ಬಳಕೆಯಾಗಬೇಕು ಎಂಬ ತುಂಬು ಸಭೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. 

 .

Read more...

ಯೋಚಿಸಿದ ಹಾಗೆ ಬದುಕಿದವರು ಕಾರಂತರು: ಡಾ. ಶುಭಾದಾಸ್ ಮರವಂತೆ

ಮೂಡುಬಿದಿರೆ(ವಿದ್ಯಾರ್ಥಿ ಸಿರಿ): ಪ್ರಾಮಾಣಿಕವಾದ ಮನಸ್ಸು ಮತ್ತು ಭಾವನೆಗಳು ನಮ್ಮ ಮತ್ತು ಇತರರ ನಡುವೆ ರೂಢಿಯಾಗಬೇಕು ಎಂದು ಹೇಳುತ್ತಿದ್ದ ಕಾರಂತರು ಪ್ರಾಮಾಣಿಕತೆಯನ್ನು ಮರೆತು ಕಾವ್ಯ ರಚಿಸಬಾರದು. ಅನುಭವಕ್ಕೆ ದಕ್ಕದ ಕಾವ್ಯ ಸಮಾಜಕ್ಕೆ ಏನನ್ನೂ ನಿಡುವುದಿಲ್ಲ ಎನ್ನುತ್ತಿದ್ದರು. ಕಾದಂಬರಿಕಾರರಾಗಿ, ನಾಟಕಕಾರರಾಗಿ, ನಿರ್ದೇಶಕನಾಗಿ, ಕವಿಯಾಗಿ, ಕಲಾವಿದರಾಗಿ, ವಿಜ್ಞಾನದ ಸಾಹಿತಿಯಾಗಿ ಎಲ್ಲಾ ಕ್ಷೇತ್ರದಲ್ಲೂ ಕಾರಂತರು ತೊಡಗಿಸಿಕೊಂಡಿದ್ದರು ಎಂದು ಡಾ ಶುಭಾದಾಸ್ ಮರವಂತೆ ಹೇಳಿದರು.
    ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಪಂಜೆ ಮಂಗೇಶರಾಯ ವೇದಿಕೆಯ ವಿಚಾರಗೋಷ್ಠಿಯಲ್ಲಿ ಕಾರಂತರನ್ನು ನೆನೆದರು. ಯಾವುದೇ ಪದವಿ ವಿದ್ಯಾಭ್ಯಾಸವನ್ನು ಪಡೆಯದೇ ಕೇವಲ ಲೋಕಜ್ಞಾನದ ಮೂಲಕ ಅದ್ಬುತ ಸಾಹಿತ್ಯ ಭಂಡಾರವನ್ನು ಪ್ರಪಂಚಕ್ಕೆ ಕೊಟ್ಟು ಕನ್ನಡ ಸಾಹಿತ್ಯಕ್ಕೆ ಗಟ್ಟಿತನವನ್ನು ತಂದುಕೊಟ್ಟ ವ್ಯಕ್ತಿ. ನಿಷ್ಠುರ ವ್ಯಕ್ತಿತ್ವವನ್ನು ಹೊಂದಿದ್ದ ಕಾರಂತರೆಂದರೆ ಸ್ವಲ್ಪ ಖಾರ ಎಂದೇ ಹೇಳಲಾಗುತ್ತಿತ್ತು.
    ಯೋಚಿಸಿದ ಹಾಗೆ ಬದುಕುವುದನ್ನು ಕಾರಂತರು ನಮಗೆ ಕಲಿಸಿದರು. ಅವರು ಯಾರನ್ನು ಹಿಂಬಾಲಿಸಿದವರಲ್ಲ.  ಜಾತಿವಾದವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು.  ಯಾವ ಸ್ರ್ತೀವಾದವೂ ಗುರುತಿಸದ ಹೆಣ್ಣಿನ ಸ್ಥಾನಮಾನವನ್ನು ಕಾರಂತರು ಗುರುತಿಸಿದ್ದರು. ಕನ್ನಡ ಸಾರಸತ್ವ ಲೋಕಕ್ಕೆ ಅದ್ಬುತವಾದ ಕೃತಿಗಳನ್ನು ಕೊಟ್ಟ ಅವರು ಕುಂದಾಪ್ರ ಕನ್ನಡ  ಭಾಷೆಯ ಸೊಗಡನ್ನು ಅತ್ಯಂತ ನವಿರಾಗಿ, ನಿರ್ಭಿಡೆಯಿಂದ ಬರೆಯುವ ಶೈಲಿಯನ್ನು ರೂಡಿಸಿಕೊಂಡಿದ್ದು ಕುಂದಾಪುರದವರಿಗೆ ಹೆಮ್ಮೆಯಾಗಿದೆ ಎಂದರು.

   
Read more...

ಪುರಾಣದ ಪಾತ್ರಗಳು ಆದರ್ಶದಿಂದ ಕೂಡಿದೆ: ತಾರನಾಥ ಬಲ್ಯಾಯ

ಮೂಡುಬಿದಿರೆ: ಪುರಾಣದ ಪಾತ್ರಗಳು ಆದರ್ಶದಿಂದ ಕೂಡಿದೆ ಅವು ಇಂದಿಗೂ ಪ್ರಸ್ತುತ. ಹಾಗಾಗಿ ‘ಪುರಾಣ’ ಎಂದು ನಿರ್ಲಕ್ಷ ಸಲ್ಲದು ಎಂದು ತಾರನಾಥ ಬಲ್ಯಾಯ ನುಡಿದರು.
  ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ಪುರಾಣ ಕಾಲದ ಬಾಲಕರು ಎಂಬ ಕಥನ ಕುತೂಹಲ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದರು. ಇದೇವೇಳೆ ಗದ್ದೆಯ ಬಡು ಕಟ್ಟಲಿಕ್ಕೆ ಹೋದ ಬಾಲಕನ ಕಥೆಯನ್ನೂ ಸೇರಿ ಹಲವು ಕಥೆಯನ್ನು ಅವರು ವಿವರಿಸಿದರು.
  ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಎಮ್ ಉಪಸ್ತಿತರಿದ್ದರು.ಶ್ರೀನಿಧಿ ಕಾರ್ಯಕ್ರಮ ನಿರೂಪಿಸಿದರು, ನಾಡಿನ ಗಣ್ಯರು ಹಾಗೂ ಪ್ರೇಕ್ಷಕ ವೃಂದ ನೆರೆದಿದ್ದರು.
Read more...

ಗರಿಗೆದರಿದ ವಿದ್ಯಾರ್ಥಿ ಸಿರಿ- ತುಂಬಿದ ಸಭೆ- ಮಕ್ಕಳ ಸಂಭ್ರಮ

ಮೂಡುಬಿದಿರೆ: ನೀವು ನಮಗಿಂತ ದೊಡ್ಡವರಾಗುತ್ತೀರಿ ಎಂಬ ಆಶಯ ನಮ್ಮದು. ನಮಗೆ ಇರದ ಅಪೂರ್ವ ಅವಕಾಶ ನಿಮಗಿದೆ. ಶಾಲೆಗಿಂತ ಹೆಚ್ಚು ತಿಳುವಳಿಕೆ ಹೊರ ಪ್ರಪಂಚದಲ್ಲಿ ಸಿಗುತ್ತೆ ಎಂಬುದನ್ನು ಯುವ ಮನಸ್ಸುಗಳು ತಿಳಿಯ ಬೇಕು ಎಂದು ಆಳ್ವಾಸ್ ವಿಶ್ವ ನುಡಿಸಿರಿ-ವಿರಾಸತ್ ಸಮ್ಮೇಳನಾಧ್ಯಕ್ಷ ಡಾ.ಬಿ.ಎ. ವಿವೇಕ ರೈ ಅವರು ಹೇಳಿದರು.
ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‍ನ ವಿದ್ಯಾರ್ಥಿ ಸಿರಿಯನ್ನು ದೀಪ ಬೆಳಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ನಾವು ಪರಿಸರವನ್ನು ತಿಳಿಯಿರಿ, ಹಕ್ಕಿಗಳನ್ನು, ಚಿಟ್ಟೆಗಳನ್ನು , ಪ್ರಾನೀಳನ್ನು ಗಿಡಮರಗಳನ್ನು ತಿಳಿಯಲು ಪ್ರಯತ್ನಿಸಿ ಎಂದು ಅವರು ಕರೆ ನೀಡಿದರು.
     ನಮಗಿಲ್ಲ ಇಷ್ಟೆಲ್ಲಾ ಅವಕಾಶಗಳಿರಲಿಲ್ಲ. ನಿಮಗೆಷ್ಟು ಅವಕಾಶ ಇದೆ ಎಂದು ಹೊಟ್ಟೆ ಕಿಚ್ಚು ಆಗುತ್ತದೆ. ಆದರೆ ವಿದ್ಯಾರ್ಥಿಗಳೆಂದರೆ ಬೆಳಕು ನಕ್ಷತ್ರಗಳು ಅವರು ಬೆಳಗಲಿ ಎಂದು ಆಶಯ ಭಾಷಣ ಂಆಡಿದ ವೈದೇಹಿ ಅವರು ಹೇಳಿದರು.
ಇಂದು ಐಟಿ ಬಿಟಿಯ ಜನ  18 ಗಂಟೆ ಕೆಲಸ ಮಾಡಿಯೂ ಉತ್ತಮ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಅದಕ್ಕೆ ಅವರ ಮನಸ್ಸಿನಲ್ಲಿ ಎಲ್ಲೋ ಇರುವ ಬರೆಯ ಬೇಕೆಂಬ ತುಡಿತ ಕಾರಣ. ಪ್ರತಿಯೊಬ್ಬರಲ್ಲೂ ಒಬ್ಬ ಕವಿ, ಸಾಹಿತಿ, ಕಲಾವಿದ ಇದ್ದೇ ಇರುತ್ತಾನೆ ಅವನನ್ನು ಜಾಗ್ರತೆ ಗೊಳಿಸಿಕೊಂಡು ಬೆಳೆಯಿರಿ ಎಂದು 12 ಮಕ್ಕಳ ನಾಟಕಗಳ ಮೂಲಕ ಜನಪ್ರಿಯರಾದ ಅವರು ಹೇಳಿದರು.
       ಜಾನಪದ ಸಂಸ್ಕøತಿ, ಬಾಷೆಯ ಬಗ್ಗೆ ಅಭಿಮಾನವಿರಲಿ. ನೂರಾರು ಕಾಲ ಅದನ್ನು ಮುಂದೆ ಕೊಂಡು ಹೋಗ ಬೇಕಾದವರು ವಿದ್ಯಾರ್ಥಿಗಳು ಹಾಗಾಗಿ ಈ ವಿದ್ಯಾರ್ಥಿ ಸಿರಿ ನನಗೆ ಬಹಳ ಖುಷಿ ಎಂದು ಸಂಘಟಕ ಡಾ. ಮೋಹನ ಆಳ್ವ ಅವರು ಹೇಳಿದರು.ಕಷ್ಟಕಾಲದಲ್ಲಿ ನಾವಿದ್ದೆವು, ಬೆಎದೆವು ಈಗ ನೀವು ಸುಖ ಕಾಲದಲ್ಲಿ ಒಳ್ಳೆಯ ಕನ್ಡಡದ ಮನಸ್ಸು ಕಟ್ಟೋಣ. ಆಳ್ವಾಸ್ ವಿಶ್ವ ನುಡಿಸಿರಿ ಗೌಜಿ ಗಮ್ಮತ್ತಿನ ಕಾರ್ಯಕ್ರಮ ಅಲ್ಲ ಎಂದು ಹೇಳಿದರು.
ವಿದ್ಯಾರ್ಥಿ ಸಿರಿಯ ಸಮಗ್ರ ಸಂಚಾಲಕ ಶ್ರೀಧರ್ ಜೈನ್ ಅವರು ಅತಿಥಿಗಳನ್ನು ಗೌರವಿಸಿದರು. ಡಾ.ಧನಂಜಯ ಕುಂಬ್ಳೆ ಅವರು ಕಾರ್ಯಕ್ರಮ ರೂಪಿಸಿದರು.

 ಮೂರೂ ದಿನ ರಂಜಿಸಿ ರಂಗೇರಲಿರುವ ವಿದ್ಯಾರ್ಥಿಸಿರಿ.
ಕಳೆದ ಒಂಭತ್ತು ನುಡಿಸಿರಿ ಮತ್ತು 19 ವಿರಾಸತ್‍ಗಳಲ್ಲಿ ಸಾವಿರಾರು ಯುವ ಮನಸ್ಸುಗಳನ್ನು ಮುಟ್ಟುವ ಪ್ರಯತ್ನವನ್ನು ದೊಡ್ಡ ಪ್ರಮಾಣದಲ್ಲಿ ಮಾಡಿರುವ ಡಾ. ಮೋಹನ ಆಳ್ವ ಅವರು ಈ ಬಾರಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವೇದಿಕೆಯನ್ನು ವಿಶ್ವಕ್ಕೆ ತೆರೆದು ಕೊಳ್ಳುವ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ.
    9.00 ಗಂಟೆಗೆ ಆರಂಭವಾದ ವಿದ್ಯಾರ್ಥಿಸಿರಿಯ ಸಭಾಂಗಂಣ ತುಂಬಿ ತುಳುಕುತ್ತಿತ್ತು. ಸುಮಾರು ಇನ್ನೂರಕ್ಕೂ ಮಿಕ್ಕ ವಿದ್ಯಾರ್ಥಿಗಳಿಗೆ ಅವಕಾಶ ಪಡೆದುದು ವಿಶ್ವ ನುಡಿಸಿರಿಗೆ ಹೊಸ ಆಯಾಮ ನೀಡಿತು.










Read more...

ಬುದುಕಿನಲ್ಲಿ ಸೂಷ್ಮತೆ ಇದ್ದರೆ ಯಶಸ್ಸು ಸಾಧ್ಯ: ವೈದೇಹಿ

ಮೂಡುಬಿದಿರೆ: 'ಒಂದಲ್ಲ ಒಂದು ರೀತಿಯ ಹಸಿವು ಬೇಕು. ಬೇಕೇ ಬೇಕು. ಇಲ್ಲದಿದ್ದರೆ ಕಷ್ಟ. ಕನಿಷ್ಟ ಓದಿನ ಹಸಿವಾದರೂ ಇರಲಿ. ಲವಲವಿಕೆ ಮೂಡಿಸಿಕೊಂಡು ಮನಸ್ಸಿನ ಬಾಗಿಲು ತೆರೆದಿಟ್ಟುಕೊಳ್ಳಿ. ಸಣ್ಣ ವಯಸ್ಸಿನಲ್ಲೇ ಜಡತ್ವ ಮೂಡಿಸಿಕೊಂಡರೆ ಖಂಡಿತಾ ಭವಿಷ್ಯ ಇಲ್ಲ..'- ಹೀಗೆಂದು ಎಚ್ಚರಿಸಿದರು ಸಾಹಿತಿ ವೈದೇಹಿ. 

ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್‌ನ ಪಂಜೆ ಮಂಗೇಶರಾಯ ವೇದಿಕೆಯಲ್ಲಿ ಶುಕ್ರವಾರ ಆರಂಭಗೊಂಡ 'ವಿದ್ಯಾರ್ಥಿ ಸಿರಿ'ಯಲ್ಲಿ ಆಶಯ ಭಾಷಣ ಮಾಡಿದ ವೆದೇಹಿ, 'ಬೋರ್' ಎನ್ನುವ ಶಬ್ದ ಮಕ್ಕಳಲ್ಲಿ ಬರಲೇಬಾರದು. ಹಾಗೇನಾದರೂ ಬಂದರೆ ಅದು ಅಪಾಯದ ಸಂಕೇತ ಎಂದರು. 

ತಾರುಣ್ಯದಲ್ಲಿ ಯಾವ ಕಾರಣಕ್ಕೂ ಡಿಪ್ರೆಸ್ ಆಗಬೇಡಿ. ಲವಲವಿಕೆಯೇ ನಿಮ್ಮ ಮಂತ್ರವಾಗಲಿ. ಈ ಗಲಾಟೆ ಜಗತ್ತಿನಲ್ಲಿ ಹೇಗೆ ನಿರ್ವಹಿಸಬಲ್ಲೆವು ಎಂಬ ಆತಂಕ ಸಹಜ. ಆದರೆ ಸೂಕ್ಷ್ಮತೆ ಇದ್ದರೆ ಖಂಡಿಂತಾ ಯಶಸ್ಸು ಸಾಧ್ಯ. ಅದನ್ನು ಕಳೆದುಕೊಂಡರೆ ಭವಿಷ್ಯ ಕರಾಳವಾಗುತ್ತದೆ. ಇಂದಿನ ಕಾಲಘಟ್ಟದಲ್ಲಿ ಇಂಗ್ಲಿಷ್ ನಮ್ಮನ್ನು ಹಾರಿಸಿಕೊಂಡು ಹೋಗ್ತಿದೆ. ಆದರೆ ಇಂಗ್ಲೀಷೆ ಸರ್ವಸ್ವ ಎಂಬ ಭ್ರಮೆ ಬೇಡ. ನಮ್ಮ ಗಾಳಿಯನ್ನು ನಾವು ಉಸಿರಾಡದಿದ್ರೆ ಹೇಗೆ? ನಮ್ಮ ಭಾಷೆಯನ್ನು ನಾವು ಬಳಸದಿದ್ದರೆ ಹೇಗೆ ಎಂಬ ಎಚ್ಚರ ಇದ್ದರೆ ಸಾಕು ಎಂದು ಹೇಳಿದ ವೆದೇಹಿ, ಒಳ್ಳೆ ಅಭಿರುಚಿ ಬೆಳೆಸಿಕೊಳ್ಳಿ. ಇಲ್ಲದಿದ್ದರೆ ಎಲ್ಲದರಲ್ಲೂ ಊನ ಹುಡುಕುವ ಕೆಲಸ ಆಗುತ್ತದೆ ಎಂದರು. 
Read more...

ಬೃಹತ್ ಸಮಾರಂಭಕ್ಕೆಗೆ ಸಕಲ ಸಿದ್ದತೆ. ಸಾಗರೋಪಾದಿಯಲ್ಲಿ ಭಾಗಿಯಾಗುತ್ತಿರುವ ಜನ






ಮೂಡುಬಿದಿರೆ: ವಿಶ್ವ ನುಡಿಸಿರಿ ವಿರಾಸತ್ ಗೆ ಇನ್ನು ಕೆಲವೇ ಗಂಟೆಗಳಷ್ಟೇ ಬಾಕಿ ಇದ್ದು ಸಮಾರಂಭವನ್ನು ಸಕಲ ಸಿದ್ದತೆಗಳು ಭರದಿಂದ ಸಾಗುತ್ತಿದೆ. ವಿವಿಧ ಉರುಗಳಿಗೆ ಸಾಹಿತ್ಯಭಾಮಾನಿಗಳು, ವಿದ್ಯಾಥರ್ಿಗಳು ತಂಡೋತಂಡವಾಗಿ ಆಗಮಿಸುತ್ತಿದ್ದಾರೆ. ಆಳ್ವಾಸ್ ಕ್ಯಾಂಪಸ್ ಹಾಗೂ ವಿದ್ಯಾಗಿರಿಯ ಮೈದಾನದೂದ್ದಕ್ಕೂ ವಿವಿಧ ಸಂಸ್ಕೃತಿ, ಐತಿಹ್ಯವನ್ನು ಸಾರುವ ಕಲಾಕೃತಿಗಳು, ಪ್ರತಿಮೆಗಳು, ಫಲ-ಪುಷ್ಟ ಪ್ರದರ್ಶನ, ಪುಸ್ತಕ ಪ್ರದರ್ಶನ ಮುಂದಾದವುಗಳು, ಸಾಲುಗಟ್ಟಿ ಹಾಕಲಾಗಿರುವ ಗೂಡುದೀಪಗಳು ಇಲ್ಲಿನ ಸೌದರ್ಯವನ್ನು ಇಮ್ಮಡಿಗೊಳಿಸಿದೆ. ಅಚ್ಚುಕ್ಕಟ್ಟಾದ ಉಟೋಪಚಾರ ವ್ಯವಸ್ಥೆ ಸಾಹಿತ್ಯ ಕಲಾಭಿಮಾನಿಗಳ ಹಸಿವನ್ನು ತಣಿಸಿದೆ.
   20ರಿಂದ ಆರಂಭಗೊಳ್ಳಲಿರುವ ಕೃಷಿ ಸಿರಿಗೂ ಭರದ ತಯಾರಿಗಳು ನಡೆಯುತ್ತಲಿದೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಬೃಹತ್ ಮೆರವಣಿಗೆ, ಬಳಿಕ ರತ್ಯಾಕರವಣರ್ಿ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭಗಳು ಜರುಗಲಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ರತ್ನಾಕರ ವಣರ್ಿ ವೇದಿಕೆಯಲ್ಲಿ ವಿವಿಧ ಜನಪದ ಕಲಾ ತಂಡಗಳ ಪ್ರದರ್ಶನ, ಡಾ. ವಿ. ಎಸ್. ಆಚಾರ್ಯ ವೇದಿಕೆಯಲ್ಲಿ ಶರಶಯ್ಯ ನಾಟಕ, ಕೆ. ವಿ. ಸುಬ್ಬಣ್ಣ ಬಯಲು ರಂಗ ಮಂದಿರದಲ್ಲಿ ಜುಗಾರಿ ಕ್ರಾಸ್ ನಾಟಕ ಪ್ರದರ್ಶನಗೊಳ್ಳಲಿದೆ.  





















Read more...