ಎಲ್ಲಾ ವರ್ಗದ ಬಡವರು ದಲಿತರೇ ಆಗಿದ್ದಾರೆ: ಡಾ. ಸಿದ್ಧಲಿಂಗಯ್ಯ

ಮೂಡುಬಿದಿರೆ: ಇಂದಿಗೂ ದಲಿತರು ನೋವು ಅವಮಾನಗಳನ್ನು ಅನುಭವಿಸುತ್ತಿದ್ದು,  ಶೋಷಿತರ ಸಮಸ್ಯೆಗಳನ್ನು ಶಮನ ಮಾಡುವ ಜವಾಬ್ದಾರಿ ದೇಶದ ಜನರ ಮೇಲಿದೆ. ಎಲ್ಲಾ ಜಾತಿಯಲ್ಲಿನ ಬಡವರು, ನಿರಾರಶ್ರಿತರು ದಲಿತರೇ ಆಗಿದ್ದಾರೆ ಎಂದು ಕವಿ ಡಾ. ಸಿದ್ಧಲಿಂಗಯ್ಯ ಹೇಳಿದರು. 
 ಅವರು ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ ನ ಮೂರನೇ ದಿನವಾದ ಇಂದು ರತ್ನಾಕರ ವರ್ಣಿ ವೇದಿಕೆಯಲ್ಲಿ ಕವಿಸಮಯ ಕವಿ ನಮನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ನನ್ನೊಳಗಿನ ಸಂಕಟಗಳೇ ಕವಿತೆಯಾಗಿ ಹೊರಬಂದುದೇ ಹೊರತೂ ಬೆರೊಂದು ವರ್ಗವನ್ನು ದೋಷಿಸಲು ಬರೆದದ್ದಲ್ಲ. ಶೋಷಣೆ ಮತ್ತು ಸೌರ್ಜನ್ಯವನ್ನು ಖಂಡಿಸಬೇಕು. ಸರ್ವರಿಗೂ ಸಮಾನತೆ ಎಂಬ ತತ್ವವನ್ನು ಎತ್ತಿ ಹಿಡಿಯಬೇಕು ಎಂದ ಅವರು ಕನ್ನಡದ ಜನತೆ ನನ್ನ ಕವನಗಳು ಸ್ವಾಗತಿಸಿ ನನ್ನನ್ನು ಕವಿಯಾಗಿ ಸ್ವಾಗತಿಸಿದ್ದು ಕನ್ನಡಿಗರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ ಎಂದು ನುಡಿದರು.
   ಡಾ ಸಿದ್ಧಲಿಂಗಯ್ಯನವರು ಹಾಡಿದ ಹಾಡನ್ನು ರಾಗ ಸಂಯೋಜಿಸಿ ಹಾಡಿ ನೃತ್ಯ ಪ್ರದರ್ಶನ ನೀಡಲಾಯಿತು.