ಮೂಡುಬಿದಿರೆ: ಆಳ್ವಾಸ್ ವಿಶ್ವ ನುಡಿಸಿರಿ ವಿರಸತ್‍ನ 3ನೇ ದಿನವಾದ ಇಂದು ಎ.ಎಲ್ ನಾಗೇಗೌಡ ವೇದಿಕೆಯಲ್ಲಿ ‘ಮಧ್ಯ ಮತ್ತು ಉತ್ತರ ಕರ್ನಾಟಕದ ಜನಪದ ಆರಾಧನೆಗಳು’ ಎಂಬ ವಿಷಯದ ಕುರಿತು ವಿಚಾರ ಗೋಷ್ಠಿ ನಡೆಯಿತು. ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ತೀ.ನಂ ಶಂಕರನಾರಾಯಣರವರು ಮಾತನಾಡಿ ಜನಪದ ದೇವತೆಗಳು ಆಯಾ ಸಮೂದಾಯಕ್ಕೆ ಸೀಮಿತವಾಗಿದ್ದವು. ಅಲ್ಲಿ ಪ್ರಮುಖವಾಗಿ ಪಶುಪಾಲಕ ಆರಾಧಕರು ಮತ್ತು ಭೇಟೆ ಪಾಲಕ ಆರಾಧಕರ ನಡುವೆ ಘರ್ಷಣೆ ನಡೆಯುತ್ತಿತ್ತು. ಪಶುಪಾಲಕರು ಯಾರ ಹಂಗಿಲ್ಲದೆ ಪ್ರಕೃತಿ ದತ್ತವಾಗಿ ಸಿಗುತ್ತಿದ್ದ ಸಂಪನ್ಮೂಲಗಳನ್ನು ಉಪಯೋಗಿಸುತ್ತಿದ್ದರು. ಆದರೆ ಪಾಳ್ಳೆಗಾರರು ಇವರ ಮೇಲೆ ಆಳ್ವಿಕೆ ನಡೆಸುತ್ತಿದ್ದರು. ಇವರೆಲ್ಲರನ್ನು ನಾವು ಸಾಂಸ್ಕøತಿಕ ವೀರರು ಎಂದು ಕರೆಯುತ್ತೇವೆ ಎಂದು ಹೇಳಿದರು.
ಇಷ್ಟಲ್ಲದೆ ಕಾಡುಗೊಲ್ಲ ಪಂಗಡದಲ್ಲಿ ಎತ್ತಪ್ಪ ಮತ್ತು ಜುಂಜಪ್ಪ ಪ್ರಮುಕವಾದ ದೇವತೆಗಳಗಿದ್ದವು. ಹಾಗೂ ಹಲವಾರು ಕಾರಣಗಳಿಗೆ ಹೋರಾಡಿದವರನ್ನು ವೀರಗಾರರು, ವೀರಗಾತಿಯರು ಎಂದು ಕರೆಯಲಾಗುತ್ತಿತ್ತು. ಮುಖ್ಯವಾಗಿ ವೀರಗಾತಿಯರಲ್ಲಿ ಪತಿವ್ರತೆಗಾಗಿ ಹೋರಾಡಿದವಳು ಯೂರೋಭಿ ಆಗಿದ್ದಾಳೆ. ಹಾಗೂ ಸ್ತ್ರೀ ದೇವತೆಯಲ್ಲಿ ಸೌದತ್ತಿ ಎಲ್ಲಮ್ಮ ಪೌರಾಣಿಕ ಕಥೆಯುಳ್ಳದ್ದಾಗಿದೆ. ಜೋಗಪ್ಪ, ಜೋಗತಿಗಳು ಇವರ ಸೇವೆ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ನುಡಿದರು.
-ಉಮೇಶ್ ಕೆ.ಆರ್.

