ಡಾ. ಹೆಚ್.ಎಲ್.ಎನ್ ಅವರದ್ದು ತಾಯ್ತನದ ಮನಸ್ಸು : ಡಾ. ಚೆಕ್ಕೆರೆ ಶಿವಶಂಕರ

ಜಾನಪದ ವಿದ್ವಾಂಸ ಡಾ. ಹೆಚ್.ಎಲ್. ನಾಗೇಗೌಡ ಅವರು ಮೇಲ್ನೋಟಕ್ಕೆ ಮುಂಗೋಪಿಯಂತೆ ಕಂಡರೂ ಕೂಡ ಅವರದ್ದು ನಿಜವಾಗಿಯೂ ತಾಯ್ತನದ ಮನಸ್ಸು ಎಂದು ಸಾಹಿತಿ ಡಾ. ಚೆಕ್ಕೆರೆ ಶಿವಶಂಕರ ಅಭಿಪ್ರಾಯಪಟ್ಟರು. ಆಳ್ವಾಸ್ ನುಡಿಸಿರಿ ೨೦೧೪ರ ನುಡಿನಮನ ಕಾರ್ಯಕ್ರಮದಲ್ಲಿ ನಾಡೋಜ ಡಾ. ಹೆಚ್.ಎಲ್. ನಾಗೇಗೌಡರ ಶತಮಾನದ ನೆನಪು ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಡಾ. ಹೆಚ್.ಎಲ್.ಎನ್ ಅವರು ತಮ್ಮ ಇಡೀ ಜೀವನವನ್ನು ಜಾನಪದ ಕ್ಷೇತ್ರದ ಕಾರ್ಯಕ್ಕಾಗಿಯೇ ಮುಡಿಪಾಗಿಟ್ಟವರು. ಆದರೆ ಅನೇಕರಲ್ಲಿ ನಾಗೇಗೌಡರ ಕುರಿತಾಗಿ ತಪ್ಪು ಕಲ್ಪನೆ ಮೂಡಿರುವುದು ವಿಷಾದಕರ ಸಂಗತಿ. ಈ ಕಾರಣಕ್ಕಾಗಿಯೇ ಇಂದು ಅವರ ಸಾಹಿತ್ಯ ಪುನರ್‌ಮೌಲ್ಯಮಾಪನಕ್ಕೆ ಒಳಗಾಗಬೇಕಾದ ಅನಿವಾರ್ಯತೆ ಇದೆ. ನಾಗೇಗೌಡರ ಸಂಪಾದನೆಗಳು ಭಾರತೀಯ ಚರಿತ್ರೆಯ ಉನ್ನತ ಆಕರ ಗ್ರಂಥಗಳಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
-ಅಪರ ಉಜಿರೆ