ಸುತ್ತಲಿನ ಪರಿಸರವನ್ನು ಅರಿಯುವುದು ಅವಶ್ಯ: ಶಿವಾನಂದ ಕಳವೆ

ವಿದ್ಯಾಗಿರಿ: ಇಂದು ಶಾಲೆಗೆ ಹೋಗುವ ಮಕ್ಕಳಿಗೆ ಜಗತ್ತಿನ ಸಂಗತಿಗಳೆಲ್ಲವೂ ತಿಳಿದಿದೆ ಆದರೆ ತಮ್ಮ ಮನೆಯ ಸುತ್ತಮುತ್ತಲೂ ಇರುವ ಕೃಷಿಭೂಮಿಯ ಬಗೆಗೆ ಅರಿವಿಲ್ಲ. ಹಿಂದಿನ ಕಾಲದ ಗಂಡಸರು ಉತ್ಪಾದನಾ ವಿಚಾರದಲ್ಲಿ ಅಪಾರ ಜ್ಞಾನವನ್ನು ಹೊಂದಿದ್ದರೇ, ಹೆಂಗಸರು ಮನೆಯ ಅಡುಗೆ ವಿಚಾರದಲ್ಲಿ ಪರಿಣಿತರಾಗಿರುತ್ತಿದ್ದರು. ಇಂದಿನ ಜನಾಂಗ ಅದೆಲ್ಲವುಗಳಿಂದ ದೂರವಾಗಿ ಮನೆಯೊಳಗಿನ ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳುವುದರಲ್ಲಿಯೇ ತೊಡಗಿಕೊಂಡಿದೆ ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು.
ಅವರು ಇಲ್ಲಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಮಧ್ಯಾಹ್ನದ ಗೋಷ್ಠಿಯಲ್ಲಿ ಕೃಷಿ, ಪರಿಸರ:ವರ್ತಮಾನದ ತಲ್ಲಣಗಳು ಎಂಬ ವಿಚಾರವಾಗಿ ಮಾತನಾಡಿದರು.
ವೇದಿಕೆಯಲ್ಲಿ ಡಾ. ನಾ. ದಾಮೋದರ ಶೆಟ್ಟಿ ಉಪಸ್ಥಿತರಿದ್ದರು.