ಸೃಜನಾತ್ಮಕತೆಯನ್ನು ಪರಿಸರ ರಕ್ಷಣೆಗೆ ವಿನಿಯೋಗಿಸಿಕೊಳ್ಳುವವರು ಬೇಕು: ನಾಗೇಶ್ ಹೆಗಡೆ


ವಿದ್ಯಾಗಿರಿ: ಕರ್ನಾಟಕವೆಂದರೆ ಚಿನ್ನದ ನಾಡು ಎಂದು ಹೇಳುತ್ತೇವೆ ಆದರೆ ಬ್ರಿಟೀಷರು ಎಂದೂ ಕರ್ನಾಟಕದ ೭೦೦ ಟನ್ ಚಿನ್ನವನ್ನು ತೆಗೆದುಕೊಂಡು ಹೋಗಿದ್ದಾರೆ. ಸರ್ವರಿಗೂ ಹಿತವನ್ನು ಬಯಸುವ ಕನ್ನಡಿಗರಿಗೆ, ಕರ್ನಾಟಕಕ್ಕೆ ನೂರಾರು ಅಪಾಯಗಳು ಎದುರಾಗುತ್ತಿದೆ ಎಂದು ಹಿರಿಯ ಪತ್ರಕರ್ತ ನಾಗೇಶ್ ಹೆಗಡೆ ಹೇಳಿದರು.
ಅವರು ಇಲ್ಲಿನ ರತ್ನಾಕರವರ್ಣಿ ವೇದಿಕೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿಯ ಮಧ್ಯಾಹ್ನದ ಗೋಷ್ಠಿಯಲ್ಲಿ ಕೃಷಿ, ಪರಿಸರ:ವರ್ತಮಾನದ ತಲ್ಲಣಗಳು ಎಂಬ ವಿಚಾರವಾಗಿ ಮಾತನಾಡಿದರು

ತನ್ನ ಸೃಜನಶೀಲತೆಯನ್ನು ಕನ್ನಡ ನಾಡಿನ ಪರಿಸರದ ರಕ್ಷಣೆಗಾಗಿ ವಿನಿಯೋಗಿಸುವ ಸಾಹಿತಿಗಳನ್ನು ನಾವು ಹುಡುಕಬೇಕಿದೆ. ದೇಶದ ಸ್ವಚ್ಚತೆ ಬಗ್ಗೆ ಪ್ರಧಾನಮಂತ್ರಿಗಳು ಅಭಿಯಾನ ಆರಂಭಿಸುವ ಮಟ್ಟಕ್ಕೆ ಬಂದಿರುವುದು ವಿಷಾದನೀಯ ಎಂದು ಅವರು ಹೇಳಿದರು.