ತುಳುವಿನ ಮೂಲ ಸಂಸ್ಕೃತಿ ಉಳಿಯಲಿ: ಡಾ. ವಿರೇಂದ್ರ ಹೆಗ್ಗಡೆ





ವಿದ್ಯಾಗಿರಿ: ವಿಶ್ವದ ಎಲ್ಲಾ ರಾಷ್ರಗಳ ಪೈಕಿ ತನ್ನ ಮೂಲ ಸಂಸ್ಸೃತಿಯನ್ನು ಉಳಿಸಿಕೊಂಡು ಬಂದಿರುವ ರಾಷ್ಟ್ರವೆಚಿದರೆ ಅದು ಭಾರತ ಮಾತ್ರ. ಇದಕ್ಕೆ ತುಳುನಾಡು ಕೂಡ ಹೊರತಾಗಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಅವರು ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿಯ ಅಂಗವಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ನಡೆಯುತ್ತಿರುವ ಆಳ್ವಾಸ್ ತುಳುಸಿರಿ- ೨೦೧೪ನ್ನು ಉದ್ಘಾಟಿಸಿ ಮಾತನಾಡಿದರು. 

 ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಆಶಯ ಭಾಷಣ ಮಾಡಿದರು. ಡಾ.ಗಣೇಶ್ ಅಮೀನ್ ಸಂಕಮಾರ್ ದಿಕ್ಸೂಚಿ ಭಾಷಣ ಮಾಡಿದರು. ಸಚಿವ ರಮಾನಾಥ ರೈ ಅಧ್ಯಕ್ಷತೆ ವಹಿಸಿದ್ದರು. ಸಚಿವರಾದ ವಿನಯ ಕುಮಾರ್ ಸೊರಕೆ, ಅಭಯಚಂದ್ರ ಜೈನ್, ಮಾಜಿ ಸಚಿವ ಅಮರನಾಥ ಶೆಟ್ಟಿ, ವಿಧಾನಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಹರಿಕಷ್ಣ ಪುನರೂರು,ಜಾನಕಿ ಬ್ರಹ್ಮಾವರ, ಪ್ರಮೋದ್ ಮಧ್ವರಾಜ್, ಸುಪ್ರಿಯಾ ಡಿ. ಶೆಟ್ಟಿ, ಎಂ.ಕೆ.ಸೀತಾರಾಮ್ ಕುಲಾಲ್, ದಾಮೋದರ ನಿಸರ್ಗ, ಸರಪಾಡಿ ದೇಜಪ್ಪ ಪರವ ಮತ್ತಿತರರು ಉಪಸ್ಥಿತರಿದ್ದರು. ಡಾ.ಮೋಹನ್ ಆಳ್ವ ಸ್ವಾಗತಿಸಿದರು.ಕೆ.ಕೆ.ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಮೆರವಣಿಗೆ ರದ್ದು : ತುಳು ಸಿರಿಗೆ ಮುನ ಗಣ್ಯರನ್ನು ಕರೆದುಕೊಂಡು ಬರಬೇಕಿದ್ದ ಮೆರವಣಿಗೆ ರದ್ದಾಗಿ ವೇದಿಕೆಯಲ್ಲೇ ಕಲಾವಿದರನ್ನು ಕಾಣುವ ಅವಕಾಶ ಮಾಡಿಕೊಡಲಾಯಿತು. ಉದ್ಘಾಟನಾ ಸಮಾರಂಭದ ಗಣ್ಯರ ಸಮ್ಮುಖದಲ್ಲಿ ಹತ್ತು ಕೊಂಬು ಕಹಳೆ, 8 ಚೆಂಡೆವಾದನ, ಹದಿನೈದು ಡೋಲುವಾದನ, ಕೀಲುಕುದುರೆ, ಗೊಂಬೆ ಬಳಗ, ಜಾಗಟೆ ಮೇಳ, ಚೆನ್ನು ಕುಣಿತ, ಪುರುಸೆರ್, ದಾರಿನ, ಮಾರಿಬೂತ, ಕಾಳಿ ನತ್ಯ ಮುಂತಾದ ಅಪರೂಪದ ಕಲಾತಂಡಗಳ ಕಲಾವಿದರು ಮೆರವಣಿಗೆಗೆ ಬಂದು ಕಿರು ಪ್ರದರ್ಶನ ಮಾಡುತ್ತಾ ಸಾಗಿದರು. ಕದ್ರಿ ನವನೀತ ಶೆಟ್ಟಿಯವರ ನೇತತ್ವದಲ್ಲಿ ಮೆರವಣಿಗೆ ವೇದಿಕೆಯಲ್ಲಿ ಸಾಗಿತ್ತು.
    ಸಾಧಕರಿಗೆ ಸನ್ಮಾನ: ತುಳು ಕ್ಷೇತ್ರದ ಸಾಧಕರಾದ ಡಾ.ಪಾಲ್ತಾಡಿ ರಾಮಕಷ್ಣ ಆಚಾರ್, ಡಾ.ವಾಮನ ನಂದಾವರ, ಬೋಳ ಚಿತ್ತರಂಜನ್ ದಾಸ್ ಶೆಟ್ಟಿ, ಅರುವ ಕೊರಗಪ್ಪ ಶೆಟ್ಟಿ, ವಿಜಿಪಾಲ್, ಉಮೇಶ್ ಪಂಬದ,ಕೊರಪ್ಪೊಳು ನಾರಾಜೆ, ಜಯಂತಿ ಎಸ್.ಬಂಗೇರ, ದೇವದಾಸ್ ಕಾಪಿಕಾಡ್, ಶಿವಪ್ಪ ನಲಿಕೆ ಮತ್ತು ಗಂಗಯ್ಯ ಪರವ ಅವರನ್ನು ಸಚಿವತ್ರಯರು ಸನ್ಮಾನಿಸಿದರು.
   ತುಳು ಸಿರಿಗಾಗಿ ವಿದ್ವಾನ್ ಕಾಂತ ರೈ ದ್ವಾರದ ಮಂದಾರ ಕೇಶವ ಭಟ್ ವೇದಿಕೆಯ ರಾಣಿ ಅಬ್ಬಕ್ಕ ಚಾವಡಿಯನ್ನು ಸಿದ್ಧಗೊಳಿಸಲಾಗಿತ್ತು. ಐದೂವರೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಮುನ್ನವೆ ಸುರಿದ ಭಾರಿ ಮಳೆ ಹಾಗೂ ಏಳು ಗಂಟೆವರೆಗೂ ಮುಂದುವರಿದ ಕಾರಣ ಅದನ್ನು ಮುಖ್ಯ ವೇದಿಕೆಗೆ ಸ್ಥಳಾಂತರಿಸಲಾಯಿತು. ಕಲಾವಿದರು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸುತ್ತಾಡಿ ಸುಸ್ತಾದರು.